ಬಡವರು, ಮಹಿಳೆಯರು, ಯುವಕರ ಬಗ್ಗೆ ಹೆಚ್ಚಿನ ಗಮನ: ವಿತ್ತ ಸಚಿವೆ

ನವದೆಹಲಿ:

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಗದರಹಿತ ಬಜೆಟ್ ಮಂಡಿಸಲಿದ್ದಾರೆ. ಪ್ರಾಥಮಿಕ ಕರಡು ಬಜೆಟ್ ಅನ್ನು ಇಂದು ಫೆ.1ರಂದು ಪ್ರಸ್ತುತಪಡಿಸಲಾಗುವುದು, ಆದರೆ ಕರಡು ಬಜೆಟ್ ಅನ್ನು ಮುದ್ರಿಸದಿರಲು ನಿರ್ಧರಿಸಲಾಗಿದೆ.

    ಕಳೆದ ವರ್ಷ, ಸಂಪೂರ್ಣವಾಗಿ ಕಾಗದರಹಿತ ವ್ಯವಸ್ಥೆಗೆ ಬಜೆಟ್ ಪ್ರಸ್ತಾಪವನ್ನು ನೀಡಲಾಯಿತು. ಇದು ಭಾರತದ ಇತಿಹಾಸದಲ್ಲಿ ಮೊದಲ ಕಾಗದರಹಿತ ಬಜೆಟ್ ಆಗಿತ್ತು. ಈಗ ಹಣಕಾಸು ಸಚಿವರು ಮತ್ತೊಮ್ಮೆ ಕಾಗದರಹಿತ ಬಜೆಟ್ ಅನ್ನು ನೀಡಲಿದ್ದಾರೆ. ಕೊನೆಯ ಬಾರಿಗೆ, ಈ ಸಮಯವೂ ಕಾಗದರಹಿತ ಬಜೆಟ್ ಇರುತ್ತದೆ.

ಮಂಡನೆಗೂ ಮುನ್ನ ಜನಾದೇಶದ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ.

ಮೋದಿ ಸರ್ಕಾರದಲ್ಲಿ ಆರ್ಥಿಕತೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಕಾಣಿಸಿದೆ. ದೇಶಕ್ಕೆ ಹೊಸ ದಿಕ್ಕು ಹಾಗೂ ಭರವಸೆ ಸಿಕ್ಕಿದೆ. ದೇಶದ ಪ್ರತೀ ವರ್ಗದ ಜನರಿಗೂ ಸೌಲಭ್ಯ ತಲುಪುತ್ತಿದೆ ಎಂದು ಹೇಳಿದ್ದಾರೆ.

2047 ರ ವೇಳೆಗ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆಯಾಗಲಿದೆ, ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತದೆ. ಮತ್ತೊಮ್ಮೆ ಜನ ಬಿಜೆಪಿ ಆಯ್ಕೆ ಮಾಡಿ ಉಜ್ವಲ ಜೀವನಕ್ಕೆ ದಾರಿಮಾಡಿಕೊಡುವ ನಂಬಿಕೆ ಇದೆ ಎಂದಿದ್ದಾರೆ.

ಫಲಾನುಭವಿಗಳಿಗೆ ಒಟ್ಟು 34 ಲಕ್ಷ ಕೋಟಿ ರೂ. ಸಬ್ಸಿಡಿ ಹಣವನ್ನು ನೇರ ವರ್ಗಾವಣೆ (DBT) ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ

ಹೊಸ ಲೋಕಸಭೆಯಲ್ಲಿ ಬಜೆಟ್‌ ಮಂಡನೆ ಮಾಡಿದ ಅವರು ಡಿಬಿಟಿಯಿಂದಾಗಿ 2.7 ಲಕ್ಷ ಕೋಟಿ ರೂ. ಹಣ ಸರ್ಕಾರಕ್ಕೆ ಉಳಿತಾಯವಾಗಿದೆ ಎಂದು ತಿಳಿಸಿದರು.  

ಕಾಲಕಾಲ ರೈತರಿಗೆ ನೀಡುವ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ. ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌ ನಮ್ಮ ಸರ್ಕಾರ ಮಂತ್ರವಾಗಿದೆ. ಒಟ್ಟು ಇಲ್ಲಿಯವರೆಗೆ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ ಮಾಡಲಾಗಿದೆ ಎಂದು ಹೇಳಿದರುsagram Twit

ಸರ್ಕಾರದ ಸಾಧನೆಗಳನ್ನು ಬಣ್ಣಿಸುತ್ತಾ ಈ ಬಾರಿ ಬಡವರು, ಮಹಿಳೆಯರು ಹಾಗೂ ಯುವಕರ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಿದೆ ಎಂದಿದ್ದಾರೆ.ಇನ್ನು ಫಸಲ್ ಭೀಮಾ ಯೋಜನೆ ಬಗ್ಗೆ ಮಾತನಾಡಿದ್ದು, ಇದರಿಂದ ನಾಲ್ಕು ಕೋಟಿಗೂ ಹೆಚ್ಚು ರೈತರು ಲಾಭ ಪಡೆದಿದ್ದಾರೆ ಎಂದು ಹೇಳಿದ್ದಾರೆ.ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಭಾಗಿವಹಿಸುವಿಕೆ ಹೆಚ್ಚಾಗಿದೆ. ಒಟ್ಟಾರೆ 10 ವರ್ಷಗಳಲ್ಲಿ ಶೇ.28ರಷ್ಟು ಪ್ರತಿಶತ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap