ರೈತರೇ ಬೆಳೆಗೆ ಬೆಲೆ ನಿಗಧಿ ಮಾಡಲಾಗದ್ದು ವಿಪರ್ಯಾಸ -ಕೆ.ಎನ್.ಆರ್

 ತುಮಕೂರು :

     ರೈತರು ತಾವು ಉತ್ಪಾದಿಸುವ ಬೆಳೆಗಳಿಗೆ ತಾವೇ ಬೆಲೆಯನ್ನು ನಿಗಧಿಪಡಿಸದೇ ಇರುವುದು ವಿಪರ್ಯಾಸ. ರೈತರನ್ನು ಆರ್ಥಿಕವಾಗಿ ಸದೃಢರಾಗಲು ರೈತರುಗಳು ವ್ಯವಸಾಯದ ಜೊತೆಗೆ ಉಪಕಸುಬುಗಳಾದ ಕುರಿ, ಮೇಕೆ ಮತ್ತು ಹಸು ಸಾಕಾಣಿಕೆಗೆ ಹೆಚ್ಚು ಒತ್ತು ನೀಡುವಂತೆ ತಿಳಿಸಿ, ಬ್ಯಾಂಕಿನಿಂದ ಸಾಲ ಪಡೆದು ಸಕಾಲದಲ್ಲಿ ಸಾಲ ಮರುಪಾವತಿಸುವಂತೆ ತಿಳಿಸಿದರು. ಅಲ್ಲದೆ ರೈತರಿಗೆ ಗೋಡೌನ್ ಮಾಡಲು ಹಾಗೂ ಜನತಾ ಬಜಾರ್‍ನಲ್ಲಿ ಕೃಷಿಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆಗೆ ನೀಡಲು ಬ್ಯಾಂಕಿನಿಂದ ಶೇಕಡ.1ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ಮಾಜಿ ಶಾಸಕರೂ, ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಕೆ.ಎನ್.ರಾಜಣ್ಣನವರು ತಿಳಿಸಿದರು.

      ಕೊರೊನಾ ಪರಿಣಾಮವಾಗಿ ಬ್ಯಾಂಕಿನ ಕೇಂದ್ರ ಕಛೇರಿ ಸಭಾಂಗಣದಲ್ಲಿ ಕೇಂದ್ರೀಕರಿಸಿ ಆಯಾ ತಾಲ್ಲೂಕಿನ ಶಾಖೆಗಳ ಆವರಣದಲ್ಲಿ ವಿಡಿಯೋ ಕಾನ್ಘರೆನ್ಸ್/ವರ್ಚುಯಲ್ ಸಭೆ ಮೂಲಕ ತುಮಕೂರು ಡಿಸಿಸಿ ಬ್ಯಾಂಕಿನ 2019-20ನೇ ಸಾಲಿನ 66ನೇ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

      ಕೊರೊನಾ ಲಾಕ್‍ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೀಡಾದ 5 ಸಾವಿರ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಅವರ ವ್ಯಾಪಾರಕ್ಕನುಗುಣವಾಗಿ ಸಾಲವನ್ನು ಡಿಸಿಸಿ ಬ್ಯಾಂಕಿನಿಂದ ನೀಡಲಾಗಿದೆ. ಪಡೆದ ಸಾಲವನ್ನು ಬೀದಿಬದಿ ವ್ಯಾಪಾರಿಗಳು ಸಕಾಲದಲ್ಲಿ ಮರುಪಾವತಿಸಿದ್ದಾರೆ. ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದು ಮರಣ ಹೊಂದಿರುವ ಕೆಸಿಸಿ ಸಾಲಗಾರರಿಗೆ ಒಂದು ಲಕ್ಷ ರೂ.ಗಳ ಮಿತಿಗೊಳಪಟ್ಟು ಸಾಲ ಮನ್ನಾ ಮಾಡಲಾಗಿದೆ ಹಾಗೂ ನಿವೃತ್ತ/ಮರಣ ಹೊಂದಿದ ಪ್ಯಾಕ್ಸ್‍ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬ್ಯಾಂಕಿನಿಂದ ರೂ.1 ಲಕ್ಷ ಧನ ಸಹಾಯ ನೀಡಲು ಕ್ರಮವಹಿಸಲಾಗಿದೆ. ಅಲ್ಲದೆ ಕೋವಿಡ್ ಹಿನ್ನಲೆಯಲ್ಲಿ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲು ಸಾಧ್ಯವಿಲ್ಲದ ಪ್ರಯುಕ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವವರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸದಸ್ಯರುಗಳ ಮನೆಯಲ್ಲಿ ವಿದ್ಯುಚ್ಛಕ್ತಿ ಇಲ್ಲದೇ ಮಕ್ಕಳು ವ್ಯಾಸಂಗ ಮಾಡಲು ಕಷ್ಟವಾಗಿರುವುದರಿಂದ ಅಂತಹ ಸದಸ್ಯರುಗಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಯೋಜನೆಯನ್ನು ರೂಪಿಸಲಾಗುವುದು ಎಂದು ಹೇಳಿದರು.

     ಬ್ಯಾಂಕಿನ ವ್ಯವಹಾರವನ್ನು ವಿಸ್ತರಿಸಲು ಹಾಗೂ ರೈತ ಸದಸ್ಯರುಗಳಿಗೆ ಮತ್ತು ಗ್ರಾಹಕರುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಯಾ ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ ಒಂದೊಂದು ನೂತನ ಶಾಖೆಗಳನ್ನು ತೆರೆಯಲು ಕ್ರಮವಿಡಲಾಗುತ್ತಿದೆ ಹಾಗೂ ಆಯಾ ತಾಲ್ಲೂಕಿನ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿಒಂದೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ತೆರೆಯಲು ಹಾಗೂ ಸಾಲ ಪಡೆಯದೇ ಇರುವ ಹೊಸ ರೈತರು ಸದಸ್ಯರುಗಳಿಗೆ ಬ್ಯಾಂಕಿನಿಂದ ಸಾಲ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ವರದಿ ಸಾಲಿನಲ್ಲಿ ಕೋವಿಡ್ 19ರ ಪರಿಣಾಮ ಬ್ಯಾಂಕಿಂಗ್ ಕ್ಷೇತ್ರ ಎದುರಿಸುತ್ತಿರುವ ಆರ್ಥಿಕ ಹಿಂಜರಿತಗಳ ಮಧ್ಯೆಯು ರೂ.259.11ಲಕ್ಷಗಳ ನಿವ್ವಳ ಲಾಭ ಗಳಿಸಿದೆ. ಆದ್ದರಿಂದ ಬ್ಯಾಂಕಿನ ಪ್ರಗತಿ ಮತ್ತು ಏಳಿಗೆಗೆ ಶ್ರಮಿಸಿ ಈ ಅಭೂತಪೂರ್ವ ಬ್ಯಾಂಕಿನ ಪ್ರಗತಿಗೆ ಕಾರಣಕರ್ತರಾದ ಎಲ್ಲಾ ಸಹಕಾರಿಗಳನ್ನು, ಇಲಾಖಾಧಿಕಾರಿಗಳನ್ನು, ಬ್ಯಾಂಕಿನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹಾಗೂ ಇತರೆಯವರುಗಳನ್ನು ಕೆ.ಎನ್.ರಾಜಣ್ಣ ಅವರು ಅಭಿನಂದಿಸಿದರು.

      ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರುಗಳು, ಪ್ಯಾಕ್ಸ್‍ಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹಾಗೂ ಬ್ಯಾಂಕಿನ ಸಿಬ್ಬಂದಿಗಳ ಮಾಹಿತಿಯನ್ನು ಮಾಹಿತಿ ಮಿತ್ರ 2020 ಇದರ ಕೈಪಿಡಿಯನ್ನು ಬ್ಯಾಂಕಿನ ನಿರ್ದೇಶಕರಾದ ಎಂ.ವಿ.ರಾಮಚಂದ್ರರವರು ಬಿಡುಗಡೆಗೊಳಿಸಿದರು.

      ಬ್ಯಾಂಕಿನ ನಿರ್ದೇಶಕರುಗಳಾದ ಎಂ.ವಿ.ರಾಮಚಂದ್ರ, ಎಸ್.ಲಕ್ಷ್ಮೀನಾರಾಯಣ, ಅನ್ನಪೂರ್ಣ ವೆಂಕಟನಂಜಪ್ಪ, ತುಮಕೂರು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಿ.ವೆಂಕಟೇಗೌಡರು, 2019-20ನೇ ಸಾಲಿನ ಬ್ಯಾಂಕಿನ ಲೆಕ್ಕ ಪರಿಶೋಧನೆ ಮಾಡಿದಂತಹ ಚಾರ್ಟೆಡ್ ಅಕೌಂಟೆಂಟ್‍ರವರಾದ, ವಕೀಲರಾದ ಪಿ.ಆರ್.ನಾರಾಯಣಗೌಡರು, ಟಿ.ಪಿ.ಮಂಜುನಾಥ್, ರಮೇಶ್ ಅಶ್ವಿನ್ ಅಂಡ್ ಕೋ ಇವರು, ಆಂತರಿಕ ಲೆಕ್ಕಪರಿಶೋಧಕರಾದ ಎಸ್.ಅನಿಲ್‍ಕುಮಾರ್, ಬ್ಯಾಂಕಿನ ಸಲಹೆಗಾರರಾದ ಜಂಗಮಪ್ಪರವರು ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಶ್ರೀಧರ್ ಮತ್ತಿತರರು ಭಾಗವಹಿಸಿದ್ದರು. ಜ್ಯೋತಿ, ಮೀನಾ ಪ್ರಾರ್ಥನೆ ಮಾಡಿದರು. ಅನ್ನಪೂರ್ಣ ವೆಂಕಟನಂಜಪ್ಪ ಸ್ವಾಗತಿಸಿ, ಬ್ಯಾಂಕಿನ ಸಿಬ್ಬಂದಿ ಮೀನಾ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap