ನಟ ದರ್ಶನ್‌ ವಿರುದ್ದ ಓಪನ್‌ ಆಗುತ್ತಾ ರೌಡಿ ಶೀಟ್‌ …..?

ಬೆಂಗಳೂರು 

    ದರ್ಶನ್ ತೂಗುದೀಪ ಅಲಿಯಾಸ್ ದರ್ಶನ್ ನಾಯ್ಡು ಈಗ ಸಾಲು ಸಾಲು ಸಂಕಷ್ಟಕ್ಕೆ ತುತ್ತಾಗಿ ನರಳಾಡುತ್ತಿದ್ದಾರೆ. ಅದರಲ್ಲೂ ಕಂಡ ಕಂಡವರ ಮೇಲೆ ಹಲ್ಲೆ ಮಾಡುವ, ಹೊಡೆದು ಪೋಸ್ ಕೊಡುವ ದರ್ಶನ್ ನಾಯ್ಡು ಅವರ ವರ್ತನೆಯೇ ಅವರ ವಿರುದ್ಧ ಈಗ ರೌಡಿಶೀಟ್ ಬೀಳುವಂತೆ ಮಾಡುತ್ತಿದೆ. ಹಾಗಾದ್ರೆ ದರ್ಶನ್ ತೂಗುದೀಪ ಅಲಿಯಾಸ್ ದರ್ಶನ್ ನಾಯ್ಡು ವಿರುದ್ಧ ರೌಡಿಶೀಟ್ ಓಪನ್ ಮಾಡುವ ಬಗ್ಗೆ ಕರ್ನಾಟಕದ ಗೃಹ ಸಚಿವ ಡಾ. ಪರಮೇಶ್ವರ್ ಅವರು ಹೇಳಿದ್ದು ಏನು? ದರ್ಶನ್ ವಿರುದ್ಧ ಯಾವಾಗ ರೌಡಿಶೀಟ್ ಓಪನ್ ಆಗುತ್ತದೆ? ಆ ಮಾಹಿತಿಗಾಗಿ ಮುಂದೆ ಓದಿ.

   ದರ್ಶನ್ ನಾಯ್ಡು ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದು, ಸಾಕಷ್ಟು ಸಮಯ ಕಂಡ ಕಂಡವರ ಮೇಲೆ ಹಲ್ಲೆ ಮಾಡಿ ಹೊಡೆದಿದ್ದಾರೆ ಎಂಬ ಆರೋಪದ ಕಾರಣಕ್ಕಾಗೇ ಸುದ್ದಿ ಆಗುತ್ತಿದ್ದರು. ಇದೀಗ ನೋಡಿದರೆ ನೇರವಾಗಿ ಕೊಲೆ ಆರೋಪದಲ್ಲೇ ಲಾಕ್ ಆಗಿರುವ ದರ್ಶನ್ ನಾಯ್ಡು ವಿರುದ್ಧ ರೌಡಿಶೀಟ್ ಓಪನ್ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಈ ಕುರಿತು ಇದೀಗ ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾಹಿತಿ ನೀಡಿದ್ದು, ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಹಾಗಾದ್ರೆ ದರ್ಶನ್ ಹೆಸರಿನ ಹಿಂದೆ ‘ರೌಡಿ’ ಪದ ಸೇರಿಸಲು ಸಿದ್ದರಾಮಯ್ಯ ಸರ್ಕಾರ ಸಿದ್ಧವಾಗಿದೆಯಾ? ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದೇನು? ಮುಂದೆ ಓದಿ.

    ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇದೀಗ ನೀಡಿರುವ ಮಹತ್ವದ ಹೇಳಿಕೆಯ ಪ್ರಕಾರ, ದರ್ಶನ್ ಅವರು ಈಗಾಗಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಕುಖ್ಯಾತಿ ಪಡೆದಿದ್ದಾರೆ. ಇದೇ ಹಿನ್ನೆಲೆಯಲ್ಲಿ ನಟ ದರ್ಶನ್ ಅವರ ಬಗ್ಗೆ ಸರ್ಕಾರ ಪರಿಶೀಲನೆ ಮಾಡುತ್ತಿದೆ. ಅದರಲ್ಲೂ ಈಗ ಕರ್ನಾಟಕ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ದರ್ಶನ್‌ರ ವಿರುದ್ಧ ರೌಡಿಶೀಟ್ ಓಪನ್ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎನ್ನಲಾಗಿದೆ. ಹೀಗಾಗಿ ಗೃಹಸಚಿವ ಡಾ. ಪರಮೇಶ್ವರ್ ಅವರ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ.

     ನಟ ದರ್ಶನ್ ವಿರುದ್ಧ ಇದೀಗ ಕೇಳಿಬಂದಿರುವುದು ಕೊಲೆ ಆರೋಪ ಆಗಿದೆ. ಈ ಕಾರಣಕ್ಕೆ ದರ್ಶನ್ ಸುಲಭವಾಗಿ ಜಾಮೀನು ಪಡೆಯುವುದು ಅಸಾಧ್ಯ. ಮತ್ತೊಂದ್ಕಡೆ ಈಗ ಜಾಮೀನಿಗೆ ಪ್ರಯತ್ನ ಶುರು ಮಾಡಿದರೂ ಮುಂದಿನ 3 ತಿಂಗಳ ಕಾಲ ಜಾಮೀನು ಸಿಗುವುದೇ ಅನುಮಾನ ಅಂತಿದ್ದಾರೆ ಕಾನೂನು ತಜ್ಞರು. ಹೀಗಾಗಿ ದೊಡ್ಡ ಸಂಚಲನ ಸೃಷ್ಟಿ ಆಗಿದೆ. ಮತ್ತೊಂದು ಕಡೆ, ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವುದು ಕೂಡ ಬಹುತೇಕ ಪಕ್ಕಾ ಅಂತಿದ್ದಾರೆ ಅವರ ವಿರೋಧಿಗಳು ಈ ನಡುವೆ ಮೃತ ರೇಣುಕಾಸ್ವಾಮಿ ಅವರ ಅಪ್ಪ & ಅಮ್ಮ, ಪತ್ನಿ ಚಿಂತೆಯಲ್ಲಿ ಮುಳುಗಿದ್ದಾರೆ. ಹಾಗೇ ರೇಣುಕಾಸ್ವಾಮಿ ಅವರ ಪತ್ನಿ ಈಗ ಗರ್ಭಿಣಿ ಆಗಿದ್ದಾರೆ.

   ಪ್ರತಿದಿನ ಎಣ್ಣೆ ಹೊಡೆದು, ಸಖತ್ ಎಂಜಾಯ್ ಮಾಡುತ್ತಾ ಮಾಂಸ ತಿನ್ನುತ್ತಿದ್ದ ನಟ ದರ್ಶನ್ & ಗ್ಯಾಂಗ್ ಈಗ ಅನ್ನ ಸಾರು ತಿಂದು ಮಲಗುವ ಪರಿಸ್ಥಿತಿ ಬಂದಿದೆ. ಪೊಲೀಸರು ಆರೋಪಿಗಳ ತಂಡಕ್ಕೆ ಅನ್ನ ಸಾರು ನೀಡಿ, ಚಾಪೆ ಕೊಟ್ಟು ಮಲಗಿಸಿದ್ದಾರೆ. ಈ ಮೂಲಕ ಕೊಲೆ ಆರೋಪದ ಹಿನ್ನೆಲೆ ಕಂಬಿ ಹಿಂದೆ ಬಿದ್ದಿರುವ, ಸೋ ಕಾಲ್ಡ್ ಡಿ-ಬಾಸ್ ಇದೀಗ ಹಿಂಸೆ ಅನುಭವಿಸುತ್ತಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ದರ್ಶನ್ ಅವರ ಬೆನ್ನುಹತ್ತುವ ಅಪಾಯ ಕಾಡುತ್ತಿದ್ದು, ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ತೂಗುದೀಪ ದರ್ಶನ್ ಅವರ ಅಭಿಮಾನಿಗಳು ಸೈಲೆಂಟ್ ಆಗುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap