ಚೌಡೇಶ್ವರಿ ಮೂರ್ತಿ ಪ್ರತಿಷ್ಠಾಪನೆ

0
19

ಹೂವಿನಹಡಗಲಿ :

        ಪ್ರತಿವರ್ಷದಂತೆ ದಸರಾ ನಿಮಿತ್ಯವಾಗಿ ಈ ವರ್ಷವು ಕೂಡಾ 5ನೇ ವರ್ಷದ ಚೌಡೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಬುಧವಾರ ಹೊಳಗುಂದಿ ರಸ್ತೆಯ ಮೌನೇಶಾಚಾರ್ಯ ಇವರ ಮನೆಯಿಂದ ಮೂರ್ತಿಯನ್ನು ಮೆರವಣಿಗೆಯ ಮೂಲಕ ಶ್ರೀ ಗವಿಮಠದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ದೇವಿ ಮಂಟಪಕ್ಕೆ ಕರೆತರಲಾಯಿತು.

      ಮೂರ್ತಿ ಮೆರವಣಿಗೆಯಲ್ಲಿ ಕುಂಬ ಮೇಳ ಹಾಗೂ ದುರ್ಗಾದೇವಿ ವೀರಸಾಸೆ ರಾಮನಗರ ತಂಡದ ಕಲಾವಿದರು ಪಾಲ್ಗೊಂಡಿದ್ದರು. ಮೆರವಣಿಗೆಗೆ ಗವಿಮಠದ ಡಾ.ಹಿರಿಶಾಂತವೀರ ಶ್ರೀಗಳು ಚಾಲನೆ ನೀಡಿದರು. ಇಂದಿನಿಂದ 9 ದಿನಗಳ ಕಾಲ ದೇವಿ ಪುರಾಣವು ನಡೆಯಲಿದ್ದು, ಸರ್ವಭಕ್ತರು ದೇವಿಪುರಾಣ ಸೇರಿದಂತೆ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗಬೇಕೆಂದು ಚೌಡೇಶ್ವರಿ ದಸರಾ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಹೆಚ್.ಎಂ. ಬೆಟ್ಟಯ್ಯನವರು ವಿನಂತಿಸಿದರು.

      ಸಂದರ್ಭದಲ್ಲಿ ಅಧ್ಯಕ್ಷ ವಿ.ವೀರಣ್ಣ, ಉಪಾಧ್ಯಕ್ಷರಾದ ಜಿ.ನಾಗರಾಜಪ್ಪ, ಕಣದಾಳ್ ಶಂಕ್ರಪ್ಪ, ಪ್ರಧಾನ ಕಾರ್ಯದರ್ಶಿ ಸೂರ್ಯಪ್ರಕಾಶ್ ಐ.ಎಸ್, ನಿಕಟ ಪೂರ್ವ ಅಧ್ಯಕ್ಷ ವಜ್ರನಾಭಿ ಬಣಕಾರ್, ಖಜಾಂಚಿ ಯು.ಎಂ.ವೀರಯ್ಯ, ಹಾಗೂ ಬಸೆಟ್ಟಿ ರಾಜಣ್ಣ, ಶಂಭುನಾಥ, ಸೇರಿದಂತೆ ಹಲವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here