ಶಿರಾ
ಕೊಡಗು ಜಿಲ್ಲೆಯಾದ್ಯಂತ ಅತಿ ಹೆಚ್ಚು ಪ್ರವಾಹ ಪರಿಸ್ಥಿತಿಯಿಂದ ನೊಂದ ಸಂತ್ರಸ್ಥರಿಗೆ ಸಹಾಯ ಹಸ್ತ ಚಾಚುವ ಸಲುವಾಗಿ ಶಿರಾ ನಗರದಲ್ಲಿ ದರ್ಶನ್ ಅಭಿಮಾನಿ ಬಳಗದ ವತಿಯಿಂದ ದಿನ ಬಳಕೆಯ ವಸ್ತುಗಳನ್ನು ಸಂಗ್ರಹಿಸಿ ಕೊಡಗು ಜಿಲ್ಲಾಡಳಿತಕ್ಕೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದರು.
ಕೊಡಗು ಜಿಲ್ಲೆಯಲ್ಲಿ ಮೂಲಭೂತ ಸೌಲಭ್ಯಗಳು ಕೂಡ ಲಭ್ಯವಾಗದೆ ಊಟ, ತಿಂಡಿ ಸೇರಿದಂತೆ ದಿನ ಬಳಕೆಯ ವಸ್ತುಗಳಿಗೆ ಸಂತ್ರಸ್ಥರು ಪರದಾಡುವಂತಾಗಿರುವ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿ ಬಳಗದ ವತಿಯಿಂದ ದಿನ ಬಳಕೆಯ ವಸ್ತುಗಳನ್ನು ಸಂಗ್ರಹಿಸಲಾಯಿತು.
ನಗರ ಠಾಣಾ ಸಿ.ಪಿ.ಐ. ಚೇತನ್‍ಕುಮಾರ್, ಅಖಿಲ ಕರ್ನಾಟಕ ದರ್ಶನ್ ಅಭಿಮಾನಿ ಬಳಗದ ರಾಜು, ಕಾರ್ಯಾಧ್ಯಕ್ಷ ಗುರು ಪ್ರಸಾದ್, ನಗರ ಘಟಕದ ಅಧ್ಯಕ್ಷ ದರ್ಶನ್, ಈಶ್ವರ್, ಲಿಂಗರಾಜು, ರಂಗನಾಥ್, ನರಸಿಂಹ, ಮಂಜುನಾಥ್, ಆರ್ಯನ್, ವೆಂಕಟೇಶ್ ಮುಂತಾದವರು ಹಾಜರಿದ್ದರು
