ಹರಿಹರ:
ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಶಾಸಕ ಎಸ್.ರಾಮಪ್ಪರು ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ 53 ಲಕ್ಷ ರೂ. ಅನುದಾನದ ಅಸಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಗ್ರಾಮಗಳ ಅಭಿವೃದ್ಧಿಗಾಗಿ ನಾನಾ ಸೌಲಭ್ಯಗಳ ಜಾರಿಗಾಗಿ ಸರಕಾರಗಳು ಅನುದಾನ ಬಿಡುಗಡೆ ಮಾಡುತ್ತಿದೆ. ಸದರಿ ಕಾಮಗಾರಿಗಳು ನಿಗದಿತ ಗುಣಮಟ್ಟದಂತೆ ನಡೆಯುತ್ತಿವೆಯೆ ಎಂಬುದನ್ನು ಗ್ರಾಮಸ್ಥರು ಪರಿಶೀಲನೆ ಮಾಡುತ್ತಿರಬೇಕು ಎಂದರು.
ಈ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳು ಹೆಚ್ಚು ಅವಧಿವರೆಗೆ ಬಾಳಿಕೆ ಬರುವಂತೆ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಗುತ್ತಿಗೆದಾರರಿಗೆ ತಾಕೀತು ಮಾಡಿದ ಶಾಸಕರು, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದರು.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸಮೀಪದಲ್ಲೆ ಇರುವುದರಿಂದ ಈ ಗ್ರಾಮವು ಆಯಕಟ್ಟಿನ ಪ್ರದೇಶ ಹೊಂದಿದೆ. ಈ ಗ್ರಾಮದ ಅಭಿವೃಧ್ಧಿಗೆ ನನ್ನ ಅವಧಿಯಲ್ಲಿ ಹೆಚ್ಚಿನ ಒತ್ತು ನೀಡುತ್ತೇನೆ. ಸರಕಾರದಿಂದ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ತಾಪಂ ಮಾಜಿ ಸದಸ್ಯರಾದ ಎಚ್.ಎಚ್.ಬಸವರಾಜ್ ಬೆಳ್ಳೂಡಿ, ಎಸ್.ಮಂಜುಳಮ್ಮ, ಗ್ರಾಪಂ ಸದಸ್ಯರಾದ ಕೆ.ಎಚ್.ಮಂಜಪ್ಪ, ಎಕ್ಕೆಗೊಂದಿ ಚಂದ್ರಪ್ಪ, ಆಸಿಫ್, ಮುಖಂಡರಾದ ಎಸ್.ಜಿ.ವಿರುಪಾಕ್ಷಪ್ಪ, ಪರಮೇಶ್ವರಪ್ಪ,ಕೆ.ವಿ.ರುದ್ರೇಶ್, ಎಚ್.ಮಲ್ಲೇಶ್, ಎಚ್.ಚಂದ್ರಪ್ಪ, ಅಣ್ಣಪ್ಪ, ರೇವಣಸಿದ್ದಪ್ಪ, ಎಚ್.ಕೆ.ಸಂತೋಷ್, ಗುತ್ತಿಗೆದಾರರಾದ ಚಂದ್ರಪ್ಪ, ಪೂಜಾರ್ ಬೀರಪ್ಪ ಗ್ರಾಮಸ್ಥರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
