ನ.30ರಂದು ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ

ದಾವಣಗೆರೆ:

        ಕರ್ನಾಟಕ ರಾಜ್ಯ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನ.30ರ ಸಂಜೆ 4 ಗಂಟೆಗೆ ನಗರದ ರೋಟರಿ ಬಾಲ ಭವನದಲ್ಲಿ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ, ಶಿಕ್ಷಕರ ಪ್ರಶಸ್ತಿ ಮತ್ತು ಸಮಾಜ ಸೇವಾ ಪ್ರಶಸ್ತಿ ವಿತರಣಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಹುಸೇನ್ ಪೀರ್ ತಿಳಿಸಿದರು.

        ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ವಹಿಸುವರು. ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಮಹಮ್ಮದ್ ಉಸ್ಮಾನ್ ಅಂಗಡಿ ಅಧ್ಯಕ್ಷತೆ ವಹಿಸುವರು. ಉಪಮೇಯರ್ ಕೆ. ಚಮನ್ ಸಾಬ್, ವಕ್ಫ ಮಂಡಳಿ ಅಧ್ಯಕ್ಷ ಮಹಮ್ಮದ್ ಸಿರಾಜ್, ಡಿಸಿಪಿಐ ಸಿ.ಆರ್. ಪರಮೇಶ್ವರಪ್ಪ ಭಾಗವಹಿಸುವರು. ಪ್ರಾಚಾರ್ಯ ದಾದಾಪೀರ್ ನವಿಲೆಹಾಳ್ ಉಪನ್ಯಾಸ ನೀಡುವರು ಎಂದರು.

         ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಶೇ.95 ಫಲಿತಾಂಶ ಪಡೆದ ಜಿಲ್ಲೆಯ ಮುಸ್ಲಿಂ ಸಮುದಾಯದ ಮತ್ತು ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡದ ಇತರೇ ಸಮುದಾಯದ ಮಕ್ಕಳನ್ನು ಪುರಸ್ಕರಿಸಲಾಗುವುದು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮುಸ್ಲಿಂ ಸಮುದಾಯದ ಓರ್ವ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಜಿಲ್ಲೆಯ ಓರ್ವ ಉಪನ್ಯಾಸಕ, ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಇತರೇ ಸಮುದಾಯ ಶಿಕ್ಷಕರಿಗೆ ‘ಮೌಲಾನಾ ಆಬು ಕಲಾಮ್ ಆಜಾದ್’ ಪ್ರಶಸ್ತಿ ನೀಡಲಾಗುವುದು. ಅಲ್ಲದೆಮ ಜಿಲ್ಲೆಯಲ್ಲಿ ಅತ್ಯುತ್ತಮ ಸೇವಾ ನಿರತ ಕರುಣಜೀವ ಟ್ರಸ್ಟ್, ಮದೀನಾ ಟ್ರಸ್ಟ್, ಇಕ್ರಾ ಅಕಾಡಮಿ, ಇಕ್ಲಾನ್ ಸಂಘಟನೆಗಳಿಗೆ ಗೌರವಾರ್ಪಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಮಹಮ್ಮದ್ ಉಸ್ಮಾನ್ ಅಂಗಡಿ, ಸಹ ಕಾರ್ಯದರ್ಶಿ ಸಿ.ಕೆ. ಶಕೀರ್ ಅಹಮ್ಮದ್ ತಾಹೀರ್, ಜಿಲ್ಲಾ ಕಾರ್ಯದರ್ಶಿ ಮುಬಾರಕ್ ಆಲಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link