ಭದ್ರಾ ಮೇಲ್ದಂಡೆ ಕಾಮಗಾರಿ ಚುರುಕಾಗಬೇಕು : ರೈತಮುಖಂಡ ಕೆ.ಸಿ.ಹೊರಕೇರಪ್ಪ

0
27

ಹಿರಿಯೂರು :

              ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಚುರುಕಾದರೆ ಆರು ತಿಂಗಳೊಳಗೆ ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಯುವ ಎಲ್ಲಾ ಸಾಧ್ಯತೆಗಳೂ ಇವೆ ಇಲ್ಲವಾದರೆ ಐದು ವರ್ಷವಾದರೂ ಆಗುವುದಿಲ್ಲ ಎಂಬುದಾಗಿ ರೈತ ಸಂಘದ ಅಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಹೇಳಿದರು.
                  ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಕ್ಷೇತ್ರದ ಶಾಸಕರು ಸಂಸದರು ಉಸ್ತುವಾರಿ ಸಚಿವರು ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಒಂದಾಗಿ ಭದ್ರಾ ಮೇಲ್ದಂಡೆ ಕಾಮಗಾರಿ ತ್ವರಿತವಾಗಿ ಆಗುವುದಕ್ಕೆ ಹೋರಾಡಬೇಕಾಗಿದೆ ಎಂದರು, ಇದಕ್ಕೆ ಇಷ್ಟರಲ್ಲೇ ಶಾಸಕರು ಸಭೆ ಕರೆಯುವುದಾಗಿ ಹೇಳಿದ್ದಾರೆ ಸಭೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
                 ವೇದಾವತಿ ಮತ್ತು ಸುವರ್ಣಮುಖಿ ನದಿಪಾತ್ರದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಲೇ ಇದೆ ಅಧಿಕಾರಿಗಳು ಇದನ್ನು ಗಮನಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಬ್ಯಾರೇಜ್‍ಗಳ ನಿರ್ಮಾಣಕ್ಕೆ ಒತ್ತಾಯಿಸಲಾಗಿತ್ತು ಕೂಡ್ಲಹಳ್ಳಿ ಬಳಿ ಬ್ಯಾರೇಜ್ ನಿರ್ಮಾಣವಾಗುತ್ತಿದೆ ಇದರ ಗುಣಮಟ್ಟದ ಕಡೆ ಗಮನಿಸಬೇಕಾಗಿದೆ ಎಂದರು.
                 ರೈತ ಸಂಘದ ಕಾರ್ಯಾಧ್ಯಕ್ಷರಾದ ಸಿ.ಸಿದ್ಧರಾಮಣ್ಣನವರು ಮಾತನಾಡಿ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ಕಾಲಹರಣ ಮಾಡುತ್ತಿದೆ ಬ್ಯಾಂಕ್ ನವರು ರೈತರಿಗೆ ನೋಟೀಸ್ ಕೊಡುತ್ತಿದ್ದಾರೆ ಇದರಿಂದ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಇದಕ್ಕೆ ಸರ್ಕಾರವೇ ಅವಕಾಶ ಮಾಡಿಕೊಡುತ್ತಿದೆ ಎಂದರು. ವಾಣಿವಿಲಾಸ ಸಾಗರದಲ್ಲಿ ನೀರು ಖಾಲಿಯಾಗಿದ್ದು ಚಿತ್ರದುರ್ಗ, ಚಳ್ಳಕೆರೆ, ಕುದಾಪುರ ಕಡೆ ಹೋಗುವ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಅನೇಕ ರೈತರು ತಮ್ಮ ತಮ್ಮ ಸಮಸ್ಯೆಗಳ ಬಗ್ಗೆ ನವೇದಿಸಿಕೊಂಡರು.
                  ಸಭೆಯಲ್ಲಿ ರೈತಸಂಘದ ಗೌರವ ಅಧ್ಯಕ್ಷರಾದ ಕೃಷ್ಣಸ್ವಾಮಿ, ಕಾರ್ಯದರ್ಶಿ ದಸ್ತಗಿರಿಸಾಬ್, ಎಂ.ಆರ್.ಪುಟ್ಟಸ್ವಾಮಿ, ಬಿ.ಓ.ಶಿವಕುಮಾರ್, ಅರಳಿಕೆರೆತಿಪ್ಪೇಸ್ವಾಮಿ , ಕೆ.ಟಿ.ತಿಪ್ಪೇಸ್ವಾಮಿ, ಭದ್ರಣ್ಣ, ತಿಮ್ಮಕ್ಕ, ಶಶಿಕಲಾ, ಕಲ್ಪನಾ ಹಾಗೂ ಅನೇಕ ರೈತ ಮುಖಂಡರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here