ಹುಳಿಯಾರು
ಹುಳಿಯಾರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ಕಾಂಕ್ರೇಟ್ ರಸ್ತೆಗೆ ಕ್ಯೂರಿಂಗ್ ಮಾಡದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಡಿಎಸ್‍ಎಸ್ ಸಂಚಾಲಕ ಎಂ.ರಾಘವೇಂದ್ರ ಆರೋಪಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಒಳ್ಳೆಯ ರಸ್ತೆಯಿಲ್ಲದೆ ಆಸ್ಪತ್ರೆಯ 108 ಆಂಬ್ಯೂಲೆನ್ಸ್ ಸೇರಿದಂತೆ ಆಸ್ಪತ್ರೆಗೆ ಬರುವ ಖಾಸಗಿ ವಾಹಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿತ್ತು. ಇದನ್ನು ಮನಗಂಡು ಲಕ್ಷಾಂತರ ರೂ. ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಇದರಿಂದ ಆಸ್ಪತ್ರೆ ಆವರಣ ಶುಚಿತ್ವ ಕಾಪಾಡಿಕೊಳ್ಳಬಹುದಲ್ಲದೆ ವಾಹನಗಳ ಸಂಚರಕ್ಕೆ ಅನುಕೂಲವಾಗಿದೆ.
ಆದರೆ ಕಾಮಗಾರಿ ಮಾಡಿರುವ ತುಮಕೂರಿನ ಗುತ್ತಿಗೆದಾರ ಕೃಷ್ಣಪ್ಪ ಅವರು ಕಾಮಗಾರಿ ಮಾಡಿದ 3 ದಿನ ಮಾತ್ರ ಕ್ಯೂರಿಂಗ್ ಮಾಡಿದ್ದು ಬಿಟ್ಟರೆ ಮತ್ತೆಂದೂ ಸಿಸಿ ರಸ್ತೆಗೆ ನೀರು ಹಾಕಿಲ್ಲ. ಸರಿಯಾಗಿ ಸಿಮೆಂಟ್ ಕ್ಯೂರಿಂಗ್ ಆಗದಿದ್ದರೆ ಸಿಮೆಂಟ್ ರಸ್ತೆ ಬಹುಬೇಗ ಹಾಳಾಗುತ್ತದೆ. ಹಾಗಾಗಿ ಈ ಬಗ್ಗೆ ಗುತ್ತಿಗೆದಾರರಿಗೆ ದೂರವಾಣಿ ಮೂಲಕ ತಿಳಿಸಿದ್ದರೂ ಸಹ ತಮ್ಮ ನಿರ್ಲಕ್ಷ್ಯ ದೋರಣೆ ಮುಂದುವರಿಸಿದ್ದಾರೆ.
ರಸ್ತೆಯ ಮೇಲಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಕನಿಷ್ಠ 20 ದಿನಗಳ ಕಾಲವಾದರೂ ಕ್ಯೂರಿಂಗ್ ಮಾಡುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಸಾರ್ವಜನಿಕರ ಲಕ್ಷಾಂತರ ರೂ. ಹಣ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತ್ತಾಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
