ಹೊಸ ಕೋವಿಡ್ ಮಾರ್ಗಸೂಚಿ ಇಲ್ಲ : ಬಿಬಿಎಂಪಿ ಸ್ಪಷ್ಟನೆ

 

ಬೆಂಗಳೂರು:

ಕೋವಿಡ್ ನಾಲ್ಕನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ ಸುದ್ದಿ ಹರಡಿತ್ತು. ಇದರಿಂದ ಜನ ಅಯ್ಯೋ ಕೊರೋನ ನಾಲ್ಕನೇ ಅಲೆ ಬಂದೇ ಬಿಡ್ತ ಎಂದೆಲ್ಲಾ ಅಂದುಕೊಂಡಿದ್ದರು. ಆದರೆ, ಈ ಸಂಬಂಧ ಬಿಬಿಎಂಪಿ ಸ್ಪಷ್ಟನೆ ನೀಡಿದ್ದು, ಯಾವುದೇ ಹೊಸ ಮಾರ್ಗಸೂಚಿಯ ಬಿಡುಗಡೆ ಮಾಡಿಲ್ಲ ಎಂದು ವಿಶೇಷ ಆಯುಕ್ತ ತ್ರಿಲೋಕಚಂದ್ರ ಸ್ಪಷ್ಟನೆ ನೀಡಿದ್ದಾರೆ.

ಬಿಬಿಎಂಪಿಯ ವಿಶೇಷ ಆಯುಕ್ತ (ಆರೋಗ್ಯ) ತ್ರಿಲೋಕ ಚಂದ್ರರವರು ನಿನ್ನೆ ಸಭೆ ನಡೆಸಿ ಬಿಬಿಎಂಪಿ ವತಿಯಿಂದ ಕೋವಿಡ್ -19 ರ ಸಂಬಂಧ ಮುಂಜಾಗ್ರತಾ ತೆಗೆದುಕೊಳ್ಳಬೇಕಾದ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿರುವ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದರು. ನಗರದಲ್ಲಿ ಯಾವೆಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕು ಎಂಬುದಾಗಿ ಈ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಇದೇ ವಿಚಾರಗಳು ಎಲ್ಲಾ ಕಡೆ ಹೋಗಿದ್ದರಿಂದ ಬಿಬಿಎಂಪಿ ಹೊಸ ಮಾರ್ಗಸೂಚಿ, ಗೈಡ್ ಲೈನ್ ಗಳನ್ನು ಬಿಡುಗಡ ಮಾಡಿದೆ. ಬೆಂಗಳೂರಿಗೆ ಪ್ರತ್ಯೇಕ ಗೈಡ್‌ಲೈನ್, ನಾಲ್ಕನೇ ಅಲೆ ಬಂದೇ ಬಿಡ್ತು ಎಂಬೆಲ್ಲಾ ಗೊಂದಲಗಳಿ ಕಾರಣವಾಗಿ ಬಿಡ್ತು. ಅಸಲಿಗೆ ಬಿಬಿಎಂಪಿ ತಮ್ಮ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳು ಸೂಚಿಸುವ ನಿಯಮಗಳು ಆ ಮಾಧ್ಯಮ ಪ್ರಕಟಣೆಯಲ್ಲಿದ್ದವು.

ಹೊಸ ಮಾರ್ಗಸೂಚಿಯಲ್ಲ..! ಹಳೆಯ ನಿಯಮಗಳನ್ನೇ ಕಟ್ಟುನಿಟ್ಟಾಗಿ ಪಾಲಿಸಿ..! ಬಿಬಿಎಂಪಿ ಹೊಸ ಮಾರ್ಗ ಸೂಚಿಯನ್ನು ಬಿಡುಗೆಡೆ ಮಾಡಿದೆ ಎಂಬ ವಿಚಾರ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದಲ್ಲದೇ ಸಾರ್ವಜನಿಕವಾಗಿ ಟೀಕೆಗೂ ಗುರಿಯಾಗುತ್ತಿತ್ತು. ಇದರಂದಗಾಗಿ ಎಚ್ಚೆತ್ತ ಬಿಬಿಎಂಪಿ ತಕ್ಷಣವೇ ತನ್ನ ಸ್ಪಷ್ಟನೆಯನ್ನು ನೀಡಿದ್ದು. ಯಾವುದೇ ಹೊಸ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಿರುವುದಿಲ್ಲ. ಈ ಹಿಂದೆಯಿದ್ದಂತಹ ಹಳೆಯ ನಿಯಮಗಳನ್ನೇ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿರುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ವಿಶೇಷ ಆಯುಕ್ತರು (ಆರೋಗ್ಯ) ಮಾರ್ಗಸೂಚಿ ಗೊಂದಲದ ಬಗ್ಗೆ ಹೇಳಿದ್ದೇನು..? ಕೆಲವು ಮಾಧ್ಯಮಗಳಲ್ಲಿ ಬಿಬಿಎಂಪಿಯಿಂದ ಹೊಸ ಮಾರ್ಗಸೂಚಿ/ ಪ್ರತ್ಯೇಕ ಗೈಡ್ ಲೈನ್ಸ್ / ನಿಯಮ ಜಾರಿ ಎಂದು ಬಿತ್ತರಿಸುತ್ತಿವೆ. ಈ ಸಂಬಂಧ ಪಾಲಿಕೆ ವತಿಯಿಂದ ಯಾವುದೇ ಹೊಸದಾಗಿ ಮಾರ್ಗಸೂಚಿ ಹೊರಡಿಸಿರುವುದಿಲ್ಲ ಎಂದು ವಿಶೇಷ ಆಯುಕ್ತರು(ಆರೋಗ್ಯ) ಡಾ. ತ್ರಿಲೋಕ್ ಚಂದ್ರ ರವರು ಸ್ಪಷ್ಟಪಡಿಸಿದ್ದಾರೆ..

ಹಳೇಯ ನಿಯಮಗಳು ಪಾಲಿಸಲು ಸೂಚನೆ : ಯಾವುದು ಹಳೆಯ ನಿಯಮ..? ಇನ್ನು ಬಿಬಿಎಂಪಿ ಪಾಲಿಕೆಯು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್(PHANA) ಮತ್ತು ಅನೇಕ ಪ್ರಮುಖ ಖಾಸಗಿ ಆಸ್ಪತ್ರೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(RWAs), ವರ್ತಕರ ಸಂಘಗಳು, ಮಾಲ್ ಗಳು, ಹೋಟೆಲ್‌ಗಳು, ಚಿತ್ರಮಂದಿರಗಳು ಮತ್ತು ಇತರೆ ವಾಣಿಜ್ಯ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ ಎಂಬ ಗೊಂದಲದ ನಡುವೆ ಸ್ಪಷ್ಟನೆಯನ್ನು ನೀಡಿ. ಈ ಹಿಂದೆ ಇದ್ದಂತಹ ಹಳೆಯ ನಿಯಮಗಳನ್ನೇ ಕಟ್ಟು ನಿಟ್ಟಾಗಿ ಪಾಲಿಸಿ ಎಂದು ಸೂಚನೆಯನ್ನು ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link