ಆತ್ಮಾವಲೋಕನ ಸಭೆ ಕರೆದ ಬಿ.ಎಸ್​. ಯಡಿಯೂರಪ್ಪ

ಬೆಂಗಳೂರು: 

              ಸೋಮವಾರ ಪ್ರಕಟಗೊಂಡ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಎರಡನೆ ಅತಿ ದೊಡ್ಡ ಪಕ್ಷವಾಗಿರುವ  ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ಶೀಘ್ರದಲ್ಲೇ ಆತ್ಮಾವಲೋಕನ ಸಭೆ ನಡೆಸಲು ಉದ್ದೇಶಿಸಿದ್ದು, ಈ ಫಲಿತಾಂಶದ ಬಗ್ಗೆ ಸ್ಥಳೀಯ ಮುಂದೆ ತೆಗೆದುಕೊಳ್ಳಬೇಕಾದ ನಡೆಗಳ ಬಗ್ಗೆ ನಾಯಕರಿಂದ ಸಲಹೆ ಮತ್ತು  ಸ್ಪಷ್ಟನೆ ಕೇಳಿದ್ದಾರೆ ಎನ್ನಲಾಗಿದೆ.

              ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್​ನೊಂದಿಗೆ ತೀವ್ರ ಸೆಣಸಾಟ ನಡೆಸಿದ್ದ ಬಿಜೆಪಿ ಅಂತಿಮವಾಗಿ ಎರಡನೇ ಸ್ಥಾನ ಪಡೆದಿದ್ದು. ಕಾಂಗ್ರೆಸ್​ಗಿಂತಲೂ ಹೆಚ್ಚಿನ ಸಾಧನೆ ಮಾಡುವ ಲಕ್ಷ್ಯ ಹೊಂದಿದ್ದ ಪಕ್ಷದ ಅಧ್ಯಕ್ಷರೂ ಆದ ಯಡಿಯೂರಪ್ಪ ಅವರು, ಪಕ್ಷ ಎರಡನೇ ಸ್ಥಾನಕ್ಕೆ ಕುಸಿದ ಬಗ್ಗೆ ಕಾರಣ ಹುಡುಕುತ್ತಿದ್ದಾರೆ. ಅದಕ್ಕಾಗಿಯೇ ಬಿಜೆಪಿ ಶಾಸಕರು, ಮಾಜಿ ಶಾಸಕರ ಮೌಲ್ಯಮಾಪನ ಮಾಡಲು ನಿರ್ಧರಿಸಿದ್ದಾರೆ.

ಪಕ್ಷ ಎಷ್ಟು ವಾರ್ಡ್​ಗಳಲ್ಲಿ ಸ್ಪರ್ಧೆ ಮಾಡಿತ್ತು? ಎಷ್ಟು ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದೆ? ಎಷ್ಟು ವಾರ್ಡ್​ಗಳಲ್ಲಿ ಸೋತಿದೆ? ಮತ ಗಳಿಕೆ ಪ್ರಮಾಣದ ಬಗ್ಗೆ ನಾಯಕರಿಗೆ  ಮಾಹಿತಿ ನೀಡಲು ತಿಳಿಸಿದ್ದಾರೆ.

ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ ಅವರು, “ಜೆಡಿಎಸ್​-ಕಾಂಗ್ರೆಸ್​ ಹಣಬಲದ ಮುಂದೆ ನಾವು ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗಿಲ್ಲ,” ಎಂದು ಹೇಳಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link