ಗದ್ದೆಗೆ ನುಗ್ಗಿದ ಸರ್ಕಾರಿ ಬಸ್ಸು…!!

ವಿಜಯಪುರ:

       ಇಂಚಗೇರಿ ಗ್ರಾಮದ ಬಳಿ ಸರ್ಕಾರಿ ಬಸ್ಸೊಂದರ ಸ್ಟೇರಿಂಗ್ ರಾಡ್ ಮುರಿದ ಪರಿಣಾಮ ಬಸ್ ರಸ್ತೆ ಬಿಟ್ಟು ಪಕ್ಕದಲ್ಲೇ ಇದ್ದ ಗದ್ದೆಗೆ ನುಗ್ಗಿದೆ.

        ಈ ಬಸ್ಸು ಪಂಡರಾಪುರದಿಂದ ವಿಜಯಪುರ ಮಾರ್ಗವಾಗಿ ಇಂಡಿಗೆ ಹೊರಟಿತ್ತು ಎನ್ನಲಾಗಿದೆ. ಬಸ್ಸಿನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಇಂಡಿಗೆ ವಾಪಸ್ಸಾಗುತ್ತಿದ್ದರು. ಆದರೆ ಇಂಡಿ ತಾಲೂಕಿನ ಇಂಚಗೇರಿ ಬಳಿ ಬರುತ್ತಿದ್ದಂತೆ ಬಸ್ಸಿನ ಸ್ಟೇರಿಂಗ್ ರಾಡ್ ಕಟ್ ಆಗಿದೆ.

        ಸ್ಟೇರಿಂಗ್ ರಾಡ್ ಕಟ್ ಆಗುತ್ತಿದ್ದಂತೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗದ್ದೆಗೆ ನುಗ್ಗಿದೆ. ಆದರೆ ಈ ವೇಳೆ ಚಾಲಕ ಬಸ್ಸಿನ ವೇಗ ನಿಯಂತ್ರಿಸಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. ಚಾಲಕನ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

      ಈ ಅವಘಡದಲ್ಲಿ ಚಾಲಕನಿಗೆ ಗಾಯವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link