ಚುನಾವಣೆಯಲ್ಲಿ ಶೇಕಡ 67.51 ರಷ್ಟು ಮತದಾನ

ಬೆಂಗಳೂರು:

               ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳ 2633 ವಾರ್ಡ್‍ಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇಕಡ 67.51 ರಷ್ಟು ಮತದಾನವಾಗಿದೆ.
                ತುಮಕೂರು ಮಹಾನಗರ ಪಾಲಿಕೆಯಲ್ಲಿ ಅತೀ ಹೆಚ್ಚು ಅಂದರೆ ಶೇಕಡ 59.34 ರಷ್ಟು, ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಶೇಕಡ 58.47 ರಷ್ಟು, ಹಾಗೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ಶೇಕಡ 50.52 ರಷ್ಟು ಮತದಾನವಾಗಿದೆ.
29 ನಗರಸಭೆಗಳಲ್ಲಿ ಶೇಕಡ 63.53 ರಷ್ಟು, 53 ಪುರಸಭೆಗಳಲ್ಲಿ ಶೇಕಡ 71.90 ರಷ್ಟು ಹಾಗೂ 20 ಪಟ್ಟಣ ಪಂಚಾಯಿತಿಗಳಲ್ಲಿ ಶೇಕಡ 75.47 ರಷ್ಟು ಮತದಾನವಾಗಿದೆ.
                ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿ ಚುನಾವಣೆಯಿಂದ ತಡೆಹಿಡಿಯಲಾಗಿದೆ.
ಮತದಾನ ಸ್ಥಗಿತವಾಗಿರುವ ಅಥವಾ ಮರು ಮತದಾನದ ಬಗ್ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.ನಾಡಿದ್ದು ಸೋಮವಾರ ಮಹಾನಗರ ಪಾಲಿಕೆಗಳ ಮತ ಎಣಿಕೆ ಆಯಾ ಜಿಲ್ಲಾಕೇಂದ್ರಗಳಲ್ಲಿ ಹಾಗೂ ಇತರೆ ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ದತೆಗಳನ್ನು ಕೈಗೊಂಡಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link