ನಗರದ ಎಚ್‍ಟಿಟಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯ ಬಲವಂತ ಅಪಹರಣ

ಚಳ್ಳಕೆರೆ

        ನಗರದ 9ನೇ ತರಗತಿ ವಿದ್ಯಾರ್ಥಿಯನ್ನು ಆಟೋರಿಕ್ಷಾದಲ್ಲಿ ಅಪಹರಣ ಮಾಡಿದ್ದು, ಈ ಬಗ್ಗೆ ಪೋಷಕರು ದೂರು ನೀಡಿದ್ದು, ನಾಪತ್ತೆಯಾದ ವಿದ್ಯಾರ್ಥಿನಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

         ತಾಲ್ಲೂಕಿನ ವೀರದಿಮ್ಮನಹಳ್ಳಿ ಗ್ರಾಮದ ಸ್ವಾಮಿ ಮತ್ತು ಸುನೀಲ ಎಂಬ ಆಟೋ ಚಾಲಕರು ಅದೇ ಗ್ರಾಮದ ಇಲ್ಲಿನ ಎಚ್‍ಟಿಟಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯನ್ನು ಶಾಲೆಯ ಮುಂಭಾಗದಲ್ಲೇ ಮಾರ್ಚ್ 26ರ ಮಂಗಳವಾರ ಬೆಳಗ್ಗೆ 9.30ರ ಸಮಯದಲ್ಲಿ ಪರೀಕ್ಷೆ ಬರೆಯಲು ಬಂದ ಇವಳನ್ನು ಬಲವಂತವಾಗಿ ತಮ್ಮದೇಯಾದ ಆಟೋರಿಕ್ಷಾದಲ್ಲಿ ಎಳೆದೊಯ್ದಿದ್ದಾರೆ.

        ಈ ಬಗ್ಗೆ ಬಾಲಕಿಯನ್ನು ಹುಡುಕಿದಾಗ ಪತ್ತೆಯಾದ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ವೆಂಕಟೇಶ್‍ನಾಯ್ಕ ಪೊಲೀಸ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ಧಾನೆ. ತಾಯಿ ಭಾಗ್ಯಬಾಯಿ ಸಹ ಮಾಹಿತಿ ನೀಡಿ, ಮೇಲ್ಕಂಡ ಇಬ್ಬರು ಸಹ ನನ್ನ ಮಗಳನ್ನು ಹಾಗಾಗ ಮಾತನಾಡಿಸುತ್ತಿದ್ದು, ಅವರೇ ಈ ಅಪಹರಣವನ್ನು ಮಾಡಿದ್ಧಾರೆಂದು ಆರೋಪಿಸಿದ್ಧಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‍ಐ ಎನ್.ಗುಡ್ಡಪ್ಪ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link