ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

ಹರಪನಹಳ್ಳಿ

       ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಕೂಲಹಳ್ಳಿ ಕ್ರಾಸ್ ಬಳಿ ರಾಜ್ಯ ಹೆದ್ದಾರಿಯನ್ನು ವಿದ್ಯಾರ್ಥಿಗಳು ತಡೆದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಜರುಗಿದೆ.

      ಬಾಗಳಿ, ಕೂಲಹಳ್ಳಿ ಗ್ರಾಮಗಳಿಗೆ ಬಸ್ ಗಳಿಲ್ಲ, ಈ ಭಾಗದಿಂದ ದಿನ ನಿತ್ಯ 200 ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಿಗೆ ದಿನ ನಿತ್ಯ ಹರಪನಹಳ್ಳಿ ಪಟ್ಟಣಕ್ಕೆ ಹೋಗುತ್ತಿದ್ದಾರೆ, ಆದರೆ ಬಸ್ ಸೌಕರ್ಯವಿಲ್ಲ, ದಿನ ನಿತ್ಯ 2 ಕಿಲೋ ಮೀಟರ ನಡೆದುಕೊಂಡು ಹೋಗಿ ಕೂಲಹಳ್ಳಿ ಕ್ರಾಸ್ ನಲ್ಲಿ ವಾಹನ ಹತ್ತಿ ಹೋಗಬೇಕು ಎಂದು ವಿದ್ಯಾರ್ಥಿಗಳು , ಗ್ರಾಮಸ್ಥರು ದೂರಿದ್ದಾರೆ.

        ಕೂಲಹಳ್ಳಿ ಕ್ರಾಸ್ ನಲ್ಲೂ ಸಹ ಮುಂಡರಗಿ, ಹಡಗಲಿ ಕಡೆಯಿಂದ ಬರುವ ಬಸ್ಸುಗಳು ನಿಲುಗಡೆ ಮಾಡುವುದಿಲ್ಲ, ಬಾಗಳಿ, ಕೂಲಹಳ್ಳಿ ಗ್ರಾಮದಲ್ಲಿ ಖಾಸಗಿ ವಾಹನಗಳು ಕುರಿಗಳಂತೆ ಜನರು ತುಂಬುವವರೆಗೂ ಸಂಚರಿಸುವುದಿಲ್ಲ, ತುರ್ತು ಆರೋಗ್ಯ ಸಮಸ್ಯೆಯಾದರೆ ದೇವರೆ ಗತಿ ಎಂದು ಅವರು ಹೇಳಿದರು.

      ಸುಮಾರು ಹೊತ್ತಿನ ನಂತರ ಸಾರಿಗೆ ಇಲಾಖೆಯ ಡಿಟಿಒ ಮಂಜುನಾಥ ಹಾಗೂ ಸ್ಥಳೀಯ ಡಿಪೆÇ ವ್ಯವಸ್ಥಾಪಕ ವೆಂಕಟೇಶ ಅವರು ಆಗಮಿಸಿ ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾ ಯುವಕನೊಬ್ಬ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣನವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಹೇಳಿ ಡಿಟಿಒ ಮಂಜುನಾಥ ಅವರ ಕೈಗೆ ಪೆÇೀನ್ ನೀಡಿದ.

     ಆಗ ಸಾರಿಗೆ ಸಚಿವರು ಸಾರಿಗೆ ಡಿಟಿಒ ಮಂಜುನಾಥ ಅವರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು. ನಂತರ ಇನ್ನೊಬ್ಬರ ದೂರವಾಣಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ನಾನು ಈಗ ದಸರಾ ಉತ್ಸವzಲ್ಲಿz್ದÉೀನೆ, ಅ.11 ರಂದು ನಿಮ್ಮ ಸಮಸ್ಯೆಯನ್ನು ದೂರವಾಣಿ ಮೂಲಕ ತಿಳಿಸಿ ನಾನು ಸಂಬಂಧ ಪಟ್ಟವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

      ಪ್ರತಿಭಟನಾ ನಿರತರ ಜೊತೆ ಚರ್ಚಿಸಿದ ನಂತರ ಡಿಟಿಒ ಮಂಜುನಾಥ ಅವರು ಬಾಗಳಿ, ಕೂಲಹಳ್ಳಿ ಮಾರ್ಗಕ್ಕೆ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ, ನಂತರ 9.30ಕ್ಕೆ, ಮದ್ಯಾಹ್ನ 2 ಗಂಟೆಗೆ, ಸಂಜೆ 5 ಗಂಟೆಗೆ ಬಸ್ ಸೌಲಭ್ಯ ಕಲ್ಪಿಸುವುದಾಗಿ ಆಶ್ವಾಸನೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

      ಅಂತಿಮ ಹಂತದಲ್ಲಿದ್ದಾಗ ತಹಶೀಲ್ದಾರ ಡಾ.ಮಧು ಅವರು ಸಹ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ , ಸಾರಿಗೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಕರ್ಯ ಕಲ್ಪಿಸುವಂತೆ ಸೂಚಿಸಿದರು.

      ಗ್ರಾ.ಪಂ ಸದಸ್ಯೆ ವೆಂಕಟೇಶ, ಕೂಲಹಳ್ಳಿ ಕಾಶಿನಾಥ ಸ್ವಾಮಿ, ಬಾಗಳಿ ಭರ್ಮನಗೌಡ, ಬಾಗಳಿ ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ, ನಾಗೇಂದ್ರಪ್ಪ, ಉಮಾಪತಿ, ಹಾಗೂ ವಿದ್ಯಾರ್ಥಿಗಳು ರಸ್ತೆ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap