ಭಾರತೀಯ ಸೈನಿಕರೊಂದಿಗೆ ಶ್ರೀಲಂಕಾ ಸೇನಾಧಿಕಾರಿಯಿಂದ ಸಂವಾದ

ನವದೆಹಲಿ

      ಶ್ರೀಲಂಕಾದ ಬುದಲ್ಲಾ ಜಿಲ್ಲೆಯ ದಿಯಾತಲಾಬ್‌ ಪರೇಡ್ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಜಂಟಿ ಸೇನಾ ಅಭ್ಯಾಸ “ಮಿತ್ರ ಶಕ್ತಿ” ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

     ಶುಕ್ರವಾರ ಶ್ರೀಲಂಕಾದ ಜೆಮುನು ವಾಚ್‌ ರೆಜಿಮೆಂಟ್‌ನ ಸೇನಾ ಕರ್ನಲ್ ಹಾಗೂ ಭದ್ರತಾ ಪಡೆಯ ಪೂರ್ವ ಕಮಾಂಡರ್‌ ಕೆ.ಪಿ.ಎ. ಜಯಶೇಖರ ಅವರು ಅಭ್ಯಾಸ ಸ್ಥಳಕ್ಕೆ ಆಗಮಿಸಿ ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.ಭಯೋತ್ಪಾದನೆ ನಿಗ್ರಹ ಕುರಿತ ಸೂತ್ರದ ಕುರಿತು ಉಭಯ ಸೇನೆಗಳು ಏರ್ಪಡಿಸಿದ್ದ ಸಂಯೋಜಿತ ಉಪನ್ಯಾಸದಲ್ಲಿ ಶ್ರೀಲಂಕಾದ ಸೇನಾ ಅಧಿಕಾರಿಗಳು ಭಾಗವಹಿಸಿದ್ದರು.

      ನಂತರ ಎರಡೂ ದೇಶಗಳ ನಡುವಿನ ಚಾಲ್ತಿಯಲ್ಲಿರುವ ಕಾರ್ಯತಂತ್ರದ ಪಾಲುದಾರಿಕೆಯ ಸಂಕೇತವಾಗಿ, ಭಾರತೀಯ ಸೈನ್ಯದ ಅಧಿಕಾರಿ, ನೆನಪಿನ ಕಾಣಿಕೆಯನ್ನು ಅವರಿಗೆ ನೀಡಿದರು.ಮಿತ್ರ ಶಕ್ತಿ ಅಭ್ಯಾಸದ ಆರನೇ ಆವೃತ್ತಿ ಇದಾಗಿದೆ. ನೆರೆ ರಾಷ್ಟ್ರಗಳ ನಡುವಿನ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಇದು ಸಹಕಾರಿಯಾಗಿದೆ.

      ವಿಸ್ವಸಂಸ್ಥೆಯ ಆದೇಶದಡಿ, ಬಂಡಾಯ ಮತ್ತು ಭಯೋತ್ಪಾದಕ ನಿಗ್ರಹಕ್ಕೆ ಅಂತಾರಾಷ್ಟ್ರೀಯ ವೇದಿಕೆಯ ಯುದ್ಧತಂತ್ರದ ಮಟ್ಟದ ಕಾರ್ಯಾಚರಣೆಗಳನ್ನು ಅಭ್ಯಾಸ ಮಾಡುವುದು ಇದರ ಉದ್ದೇಶವಾಗಿದೆ.

       ಕರ್ನಲ್‌ ಪಾರ್ಥಸಾರತಿ ರಾಯ್‌ ಅವರ ನೇತೃತ್ವದ ಬಿಹಾರ ರೆಜಿಮೆಂಟ್‌ನ ಮೊದಲ ಬೆಟಾಲಿಯನ್‌ ಈ ಸೇನಾಭ್ಯಾಸದಲ್ಲಿ ಭಾರತೀಯ ಸೇನೆಯನ್ನು ಪ್ರತಿನಿಧಿಸಿದರೆ, ಶ್ರೀಲಂಕಾದ ಸೇನೆಯನ್ನು 1 ಜೆಮುನು ವಾಚ್‌ ಬೆಟಾಲಿಯನ್‌ ಪ್ರತಿನಿಧಿಸಿದೆ. ಈ ಅಭ್ಯಾಸ ಏಪ್ರಿಲ್‌ 8ಕ್ಕೆ ಮುಕ್ತಾಯಗೊಳ್ಳಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link