ವರ್ಣರಂಜಿತ ‘ಗಣಪ’ನಿಂದ ರಂಗೇರಿದ ಅಶೋಕರಸ್ತೆ

ತುಮಕೂರು
ಗಣಪತಿ ಹಬ್ಬ ಬಂತೆಂದರೆ ಸಾಕು, ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಅಶೋಕ ರಸ್ತೆ ರಂಗೇರುತ್ತದೆ. ಅದೇ ರೀತಿ ಈ ವರ್ಷವೂ ಅಶೋಕ ರಸ್ತೆಯು ವರ್ಣರಂಜಿತ ಗಣಪತಿ ವಿಗ್ರಹಗಳಿಂದ ಕಳೆಗಟ್ಟಿದೆ.
ನಗರದ ಟೌನ್‌ಹಾಲ್ ವೃತ್ತದಿಂದ ಸ್ವಾತಂತ್ರೃ ಚೌಕದವರೆಗೆ ಅಶೋಕ ರಸ್ತೆಯ ಇಕ್ಕೆಲಗಳ ುಟ್‌ಪಾತ್‌ಗಳಲ್ಲಿ ವಿವಿಧ ಅಳತೆಗಳ, ವಿವಿಧ ರೂಪಗಳ, ಬಣ್ಣಬಣ್ಣದ ಗಣಪತಿ ವಿಗ್ರಹಗಳು ಕಂಗೊಳಿಸುತ್ತಿದ್ದು, ದಾರಿಹೋಕರ ಚಿತ್ತವನ್ನು ಆಕರ್ಷಿಸುತ್ತಿವೆ; ಜೊತೆಗೇ ವಿಗ್ರಹಗಳ ಖರೀದಿಗೆ ಬರುವ ಗ್ರಾಹಕರನ್ನೂ ಸಹ. ಬುಧವಾರ ಬೆಳಗ್ಗೆ ಸ್ಥಳಕ್ಕೆ ‘‘ಪ್ರಜಾಪ್ರಗತಿ’’ ಭೇಟಿ ಇತ್ತಾಗ ಕಂಡ ದೃಶ್ಯಾವಳಿಗಳಿವು.
ಪುಟಾಣಿ ಗಣಪನ ವಿಗ್ರಹಗಳೂ ಇಲ್ಲಿವೆ. ಐದಾರು ಅಡಿ ಎತ್ತರದ ಗಣಪನ ವಿಗ್ರಹಗಳೂ ಇವೆ. ನಡುನಡುವೆ ಬಣ್ಣರಹಿತ ಮಣ್ಣಿನ ಗಣಪತಿಯ ವಿಗ್ರಹಗಳೂ ಇವೆ. ಮೌಲ್ಡೆಡ್ ವಿಗ್ರಹಗಳೂ ಇವೆ; ಕೈಯಿಂದ ತಯಾರಿಸಿದ ವಿಗ್ರಹಗಳೂ ಇವೆ. ಮಣ್ಣಿನ ಗಣಪನೊಂದಿಗೆ ಪಿ.ಓ.ಪಿ. ವಿಗ್ರಹಗಳೂ ಸೇರಿವೆ. ಸಾಲು ಸಾಲಿನಲ್ಲಿ ಇರಿಸಿರುವ ವಿವಿಧ ಅಳತೆಗಳ ಗಣಪತಿ ವಿಗ್ರಹಗಳು ಆಕರ್ಷಕ ಬಣ್ಣ ಬಣ್ಣಗಳಿಂದ ಮನಸೂರೆಗೊಳ್ಳುತ್ತಿವೆ. ವಿಗ್ರಹಗಳ ಬೆಲೆಗಳೂ ಹಾಗೆಯೇ ಇವೆ.
ಮನೆಗಳಿಗೆ ಗಣಪನ ವಿಗ್ರಹಗಳನ್ನು ಖರೀದಿಸುವವರೂ ಬರುತ್ತಿದ್ದಾರೆ. ಸಂಘ ಸಂಸ್ಥೆಗಳವರು ದೊಡ್ಡ ದೊಡ್ಡ ಗಣಪನನ್ನು ಹುಡುಕುತ್ತ ಬರುತ್ತಿದ್ದಾರೆ. ಮಾರಾಟಗಾರರು ಮತ್ತು ಗ್ರಾಹಕರ ನಡುವೆ ಬೆಲೆಯ ವಿಷಯದಲ್ಲಿ ಚೌಕಾಶಿ ಇದ್ದದ್ದೇ. ಕೊನೆಗೆ ಒಂದು ಬೆಲೆಗೆ ಒಪ್ಪಿ ಗಣಪತಿ ವಿಗ್ರಹಗಳನ್ನು ಖರೀದಿಸುತ್ತಿದ್ದಾರೆ. ದೊಡ್ಡ ಗಣಪತಿ ವಿಗ್ರಹಗಳನ್ನು ಟ್ರಾೃಕ್ಟರ್ ಮೊದಲಾದ ಸರಕುಸಾಗಣೆ ವಾಹನಗಳಲ್ಲಿ ಒಯ್ಯುತ್ತಿದ್ದಾರೆ. ರಸ್ತೆಯ ಉದ್ದಕ್ಕೂ ಇದೇ ಗಿಜಿಗಿಜಿ ತುಂಬಿದೆ.
ಟೌನ್‌ಹಾಲ್ ವೃತ್ತದಲ್ಲಿ ಗ್ರಂಥಾಲಯ ಕಾಂಪೌಂಡ್ ಪಕ್ಕದಿಂದಲೇ ಗಣಪನ ವಿಗ್ರಹಗಳ ಸಾಲು ಆರಂಭವಾಗುತ್ತದೆ. ಎಂಪ್ರೆಸ್ ಕಾಲೇಜು ಮುಂಭಾಗ, ಬಿ.ಎಸ್.ಎನ್.ಎಲ್. ಕಚೇರಿ ಮುಂಭಾಗ, ಹಳೆಯ ಕೆನರಾಬ್ಯಾಂಕ್ ಕಟ್ಟಡದ ಮುಂದೆ, ರೆಡ್‌ಕ್ರಾಸ್ ಕಟ್ಟಡದ ಮುಂಭಾಗ ಹೀಗೆ ಒಂದು ಸಾಲಿನ ಪುಟ್‌ಪಾತ್‌ನಲ್ಲಿ ಗಣಪತಿ ವಿಗ್ರಹಗಳ ಸಾಲು ಕಣ್ಸೆಳೆಯುತ್ತಿವೆ. ಅದೇ ರೀತಿ ಟೌನ್‌ಹಾಲ್ ವೃತ್ತದಿಂದ ಹಳೆಯ ಡಿ.ಎಚ್.ಓ. ಕಚೇರಿ ಭಾಗದಲ್ಲಿ ಸಿದ್ದರಾಮಣ್ಣ ಹಾಸ್ಟೆಲ್‌ವರೆಗೂ, ಖಾಸಗಿ ಬಸ್ ನಿಲ್ದಾಣದ ಮುಂದೆ, ಜನತಾದಳ ಕಚೇರಿ ಮುಂದೆ ಹೀಗೆ ಮತ್ತೊಂದು ಬದಿಯಲ್ಲೂ ಗಣಪತಿ ವಿಗ್ರಹಗಳ ಸಾಲು ಮನಸೂರೆಗೊಳ್ಳುತ್ತಿವೆ. ಈ ಬಾರಿ ಸ್ವಾತಂತ್ರೃ ಚೌಕದಿಂದ ಟೌನ್‌ಪೊಲೀಸ್ ಠಾಣೆ ಕಡೆಗೆ ತಿರುವು ಪಡೆಯುವ ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಆ್ ಮೈಸೂರು ಕಾಂಪೌಂಡ್ ಮುಂಭಾಗದಲ್ಲೂ ಗಣಪತಿ ವಿಗ್ರಹಗಳ ಮಾರಾಟ ನಡೆಯುತ್ತಿದೆ. ವಿಗ್ರಹಗಳನ್ನು ನೋಡುವವರು ಮತ್ತು ಖರೀದಿಸುವವರಿಂದ ಇಡೀ ರಸ್ತೆಯು ರಂಗೇರಿದೆ.

Recent Articles

spot_img

Related Stories

Share via
Copy link
Powered by Social Snap