ದೆಹಲಿ:

ದೇಶದ ಪ್ರಗತಿಗೆ ಸಹಾಯಕಾರಿಯಾಗುವ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದಕ್ಕೆ ಆ.31ರಂದು ಗಡುವು ಮುಕ್ತಾಯಗೊಂಡಿದ್ದು, 5.29 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಒಟ್ಟಾರೆ 5,29,66,509 ಐಟಿಆರ್ ಎಸ್ ಗಳನ್ನು ತೆರಿಗೆದಾರರು ಸಲ್ಲಿಕೆ ಮಾಡಿದ್ದು, ಒಂದೇ ದಿನದಲ್ಲಿ ಸುಮಾರು 22 ಲಕ್ಷದ ವರೆಗೆ ಐಟಿ ರಿಟರ್ನ್ಸ್ ಅನ್ನು ಐಟಿ ಇಲಾಖೆ ಸ್ವೀಕರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆ.31 ರಂದು ಮಧ್ಯ ರಾತ್ರಿ ವರೆಗೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ಹಿಂದಿನ ವರ್ಷ 3.2 ಕೋಟಿಯಷ್ಟು ಐಟಿಆರ್ ಎಸ್ ನ್ನು ಸಲ್ಲಿಕೆ ಮಾಡಲಾಗಿತ್ತು, ಈ ವರ್ಷ ಶೇ.60 ರಷ್ಟು ಐಟಿಆರ್ ಎಸ್ ಏರಿಕೆಯಾಗಿದೆ ಎಂದು ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಹೇಳಿದ್ದಾರೆ. ನೋಟು ನಿಷೇಧದ ನಂತರ ಹೆಚ್ಚಾದ ತೆರಿಗೆದಾರರ ಸಂಖ್ಯೆ ಹಾಗೂ ಐಟಿಆರ್ ಎಸ್ ನ್ನು ವಿಳಂಬವಾಗಿ ಸಲ್ಲಿಸುವವರಿಗೆ ದಂಡ ವಿಧಿಸುವ ನಿಯಮ ಜಾರಿಗೊಳಿಸಿರುವುದರಿಂದ ಗಡುವಿಗೂ ಮುನ್ನವೇ ಐಟಿ ರಿಟರ್ನ್ಸ್ ಸಲ್ಲಿಕೆ ಕಳೆದ ಬಾರಿಗಿಂತ ಏರಿಕೆ ಕಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








