ತಿಪಟೂರು :
ಹೊಸದುರ್ಗ ಶ್ರೀ ರೇವಣಸಿದ್ದೇಶ್ವರ ಸಿಂಹಾಸನ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪೀಠಾಧಿಪತಿಗಳಾದ ಮಹಾಸಂಸ್ಥಾನ ಕನಕ ಗುರುಪೀಠದ ಪೀಠಾಧಿಪತಿಗಳಾದ ಶ್ರೀಶ್ರೀ ಈಶ್ವರಾನಂದ ಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ‘ಶ್ರಾವಣ ಭಿಕ್ಷೆ’ ಕಾರ್ಯಕ್ರಮ ನಡೆಯಿತು. ತಿಪಟೂರು ನಗರದ ವಿವಿಧ ಭಕ್ತರ ಮನೆಗಳಿಗೆ ತೆರಳಿದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಭಕ್ತರು ನೀಡುವ ದವಸ ಧಾನ್ಯ, ಹಣ ಮುಂತಾವುಗಳನ್ನು ಸ್ವೀಕರಿಸಿದವರು ಶ್ರೀಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಭಕ್ತರು ಶ್ರೀಗಳಿಗೆ ಪಾದಪೂಜೆ ನೆರವೇರಿಸಿ ಭಿಕ್ಷಾ ಜೋಳಿಗೆಯಲ್ಲಿ ಭಿಕ್ಷೆ ಹಾಕಿದರು.
ಶ್ರಾವಣ ಭಿಕ್ಷೆ ಸ್ವೀಕರಿಸಿ ಮಾತನಾಡಿದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ಹಾಲುಮತ ಪರಂಪರೆಯಲ್ಲಿ ಶ್ರವಣ ಭಿಕ್ಷೆಕೋರಣ. ಬಿಕ್ಷೆಗೆ ವಿಶೇಷವಾದ ಮಾನ್ಯತೆ ಇದೆ. ಶ್ರೀ ಕನಕ ಗುರು ಪರಂಪರೆಯಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಪ್ರತಿ ವರ್ಷವು ಶ್ರೀ ಮಠದ ಗುರುಗಳನ್ನು ತಮ್ಮ ಭಕ್ತರ ಮನೆಗಳಿಗೆ ತಮ್ಮ ಭಕ್ತರಿಂದ ಅವರ ಶಕ್ತಾನುಸಾರ ಧವಸ ಧಾನ್ಯಗಳನ್ನು ಸ್ವೀಕರಿಸಲಾಗುವುದು.ಸಂಪತ್ತಿನ ಸ್ವಲ್ಪಭಾಗವನ್ನು ಧಾನಮಾಡುವ ಮೂಲಕ ಬೇರೆಯವರ ಕಷ್ಟಕ್ಕೆ ನೆರವಾಗಬೇಕೆಂದು ಮನುಷ್ಯರಿಗೆ ಆತ್ಮ ಸಂತೋಷ ಉಂಟುಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಯುವ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಮಂಜಪ್ಪ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಜಿ.ಸಿ.ಕುಮಾರ್, ಶಿಕ್ಷಕರಾದ ಶಿವಾನಂದ್ ಮುಖಂಡರಾದ ತೋಪನಯ್ಯ ಯೋಗೀಶ್ ಮುಂತಾದವರಿದ್ದರು.