ಸೆ.3 ರಿಂದ ಗ್ರಾಮದೇವತೆ ಅಮ್ಮನವರ ಜಾತ್ರಾ ಮಹೋತ್ಸವ

ಗುಬ್ಬಿ
      ಪಟ್ಟಣದ ಇತಿಹಾಸ ಪ್ರಸಿದ್ಧ ಗ್ರಾಮ ದೇವತೆ ಅಮ್ಮವರ ಜಾತ್ರಾ ಮಹೋತ್ಸವವು ಸೆ.3 ರಿಂದ ಸೆ.6 ರವರೆಗೆ ವೈಭವಯುತವಾಗಿ ನಡೆಯಲಿದೆ. ಸೆ.3 ರಂದು ರಾತ್ರಿ 12 ಗಂಟೆಗೆ ಶ್ರೀ ಗ್ರಾಮದೇವತೆ ಅಮ್ಮನವರಿಗೆ ನೇತ್ರಧಾರಣೆಯೊಂದಿಗೆ ವಿಶ್ವಕರ್ಮ ಮತಸ್ಥರಿಂದ ಆರತಿ ಸೇವೆ ನಡೆಯಲಿದೆ. ಸೆ.4 ರಂದು ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಕೋಮಿನವರಿಂದ ಮಹಾಮಂಗಳಾರತಿ ನಂತರ ವಿವಿಧ ಮತಸ್ಥರಿಂದ ಆರತಿ ಸೇವೆ ನಡೆಯಲಿದೆ. ಸೆ.5 ರಂದು ರಾತ್ರಿ ಆರತಿ ಸೇವೆ ನಡೆಯಲಿದ್ದು, ಸೆ.6 ರಂದು ಯಾದವರ ಬಾನ ಪೂಜೆ, ಈಡಿಗರ ಘಟೆ ನಂತರ ಆರತಿ ಸೇವೆ ನಡೆಯಲಿದ್ದು ರಾತ್ರಿ 11 ಗಂಟೆಗೆ ಅಮ್ಮನವರನ್ನು ಬೀಳ್ಕೊಡುವುದು.
       ಪಟ್ಟಣದ 18 ಕೋಮಿನ ಭಕ್ತಾದಿಗಳು ಶ್ರೀಗ್ರಾಮದೇವತಾ ಅಮ್ಮನವರ ಜಾತ್ರಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯಲಿವೆ.

Recent Articles

spot_img

Related Stories

Share via
Copy link
Powered by Social Snap