ಏರೋ ಇಂಡಿಯಾ :15 ಮೇಡ್-ಇನ್-ಇಂಡಿಯಾ ಹೆಲಿಕಾಪ್ಟರ್‌ಗಳ ಪ್ರದರ್ಶನ

ಬೆಂಗಳೂರು

    ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸುಧಾರಿತ ಲಘು ಹೆಲಿಕಾಪ್ಟರ್ ಸೇರಿದಂತೆ 15 ಮೇಡ್-ಇನ್-ಇಂಡಿಯಾ ಹೆಲಿಕಾಪ್ಟರ್‌ಗಳನ್ನು ಪ್ರದರ್ಶನಕ್ಕೆ ಸಜ್ಜಾಗಿದೆ.

    ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2023 ರ 14 ನೇ ಆವೃತ್ತಿಯಲ್ಲಿ ಸಾಮರ್ಥ್ತ ಪ್ರದರ್ಶನಕ್ಕೆ ಸಜ್ಜಾಗಿವೆ.ಎಲ್‌ಸಿಎ ತೇಜಸ್, ಎಚ್‌ಟಿಟಿ-40, ಡೋರ್ನಿಯರ್ ಲಘು ಬಹುಪಯೋಗಿ ಹೆಲಿಕಾಪ್ಟರ್ , ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಮತ್ತು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ನಂತಹ ಸ್ವದೇಶಿ ನಿರ್ಮಿತ ಹೆಲಿಕ್ಯಾಪ್ಟರ್ ಗಳನ್ನು ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರಧಾನ ಮಂತ್ರಿಗಳ ಕಾರ್ಯಾಲಯ ತಿಳಿದೆ.

    ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸುಧಾರಿತ ಲಘು ಹೆಲಿಕಾಪ್ಟರ್ ಮಾರ್ಕ್ -3 ಅನ್ನು ಮಾರಿಷಸ್ ಪೊಲೀಸ್ ಪಡೆಗೆ ಹಸ್ತಾಂತರಿಸಿದೆ.

    ಎಚ್‌ಎಎಲ್ ನಿರ್ದೇಶಕ-ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಜಯದೇವ, ಸೇರಿದಂತೆ ಮಾರಿಷಸ್ ಪ್ರಮುಖರ ಸಮ್ಮುಖದಲ್ಲಿ ಹೆಲಿಕ್ಯಾಪ್ಟರ್ ಹಸ್ತಾಂತರ ಮಾಡಲಾಗಿದೆ.ಹೆಲಿಕಾಪ್ಟರ್ ಹಸ್ತಾಂತರರಿಂದ ಎರಡೂ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಬಲಪಡಿಸಿದೆ ಎಂದು ಮಾರಿಷಸ್ ಪೊಲೋಸ್ ಮುಖ್ಯಸ್ಥರು ತಿಳಿಸಿದ್ದಾರೆ.ಮಾರಿಷಸ್ ಪೊಲೀಸ್ ಆಯುಕ್ತರ ಪ್ರಕಾರ, ಮಾರಿಷಸ್ ಪೊಲೀಸ್ ಪಡೆಗೆ ಹೆಲಿಕ್ಯಾಪ್ಡರ್ ಸೇರಲಿವೆ .ಇದರಿಂದ ದೇಶದ ಭದ್ರತೆಹೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.

    ಎಚ್‌ಎಎಲ್ ಹೆಲಿಕಾಪ್ಟರ್ ಕಾಂಪ್ಲೆಕ್ಸ್ ಸಿಇಒ ಎಸ್ ಅನ್ಬುವೇಲನ್, ಭಾರತ ಮತ್ತು ಮಾರಿಷಸ್ ಮೂರು ದಶಕಗಳಿಂದ ಬಲವಾದ ವ್ಯಾಪಾರ ಸಂಬಂಧ ಹಂಚಿಕೊಂಡಿವೆ, ಎಚ್‌ಎಎಲ್ ತಯಾರಿಸಿದ ಹೆಲಿಕಾಪ್ಟರ್ ಈಗಾಗಲೇ ಮಾರಿಷಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ ಈ ನಡುವೆ ಭಾರತದಲ್ಲಿ ಈ ಐದು ದಿನಗಳ ಕಾರ್ಯಕ್ರಮವು ಸ್ವದೇಶಿ ಉಪಕರಣಗಳು, ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ವಿದೇಶಿ ಕಂಪನಿಗಳೊAದಿಗೆ ಪಾಲುದಾರಿಕೆ ರೂಪಿಸಲು ಕೇಂದ್ರೀಕರಿಸಲಿದೆ ಎಂದು ಹೇಳಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link