ತುಮಕೂರು:
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಇಲ್ಲಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಶಿಕ್ಷೆ ಹಾಗು 1,50,000 ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಗುಬ್ಬಿ ತಾಲ್ಲೂಕು ಪುರ ತಾಂಡ್ಯ ಅಪ್ಪಣ್ಣನಹಳ್ಳಿಯ ನಾಗೇಶ ಎಂಬಾತ ಬಾಲಕಿಯ ಮನೆಗೆ ಕೆಲಸಕ್ಕಾಗಿ ಆಗಾಗ ಹೋಗಿ ಬರುತ್ತಿದ್ದ. ಕ್ರಮೇಣ ಪ್ರೀತಿ ಪ್ರೇಮ ಎಂದು ಪುಸಲಾಯಿಸಿ ಬಾಲಕಿಯನ್ನು ಹೆಚ್ಚು ಹತ್ತಿರ ಮಾಡಿಕೊಂಡ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆರೋಪಿ ನಾಗೇಶ ಬಾಲಕಿಯ ಮೇಲೆ 7-8 ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದರ ಫಲವಾಗಿ ಬಾಲಕಿಯು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುರುತ್ತಾಳೆ ಎಂದು ಬಾಲಕಿಯ ಪೋಷಕರು ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಅಂದಿನ ತನಿಖಾಧಿಕಾರಿ ಎಫ್.ಕೆ. ನದಾಫ್ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆಯು ಇಲ್ಲಿನ ಪೋಕ್ಸೋ ನ್ಯಾಯಾಲವೂ ಆಗಿರುವ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ನಾಗೇಶನಿಗೆ ಕಲಂ ಐಪಿಸಿ 376 ಮತ್ತು ಕಲಂ 6,4 ಪೋಕ್ಸೋ ಕಾಯ್ದೆ ಅಡಿಯಲ್ಲಿ 20 ವರ್ಷಗಳ ಶಿಕ್ಷೆ ಹಾಗು 1,50,000 ರೂ.ಗಳ ದಂಡವನ್ನು ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಕೆ.ಎಸ್.ಆಶಾ ವಾದ ಮಂಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ