ಚೀನಾ
ಕೆಲ ವರ್ಷಗಳ ಹಿಂದೆ ತದ್ರೂಪು ಸೃಷ್ಠಿ ಕೇವಲ ಪುಸ್ತಕದ ಒಣ ಪುರಾಣವೆನ್ನುತ್ತಿದ್ದವರಿಗೆ ಚೀನಾದ ಬೈಯೋಲಾಜಿಕಲ್ ಸಂಸ್ಥೆಯೊಂದು ಇದು ಸಾಧ್ಯ ಎಂದು ತೋರಿಸಿದೆ.
ಚೀನಾದ ಹುವಾಂಗ್ ಯು ಎನ್ನುವವರ ಸಾಕು ಬೆಕ್ಕು ಗಾರ್ಲಿಕ್ ಸತ್ತು ಏಳು ತಿಂಗಳು ಕಳೆದಿತ್ತು, ಬ್ರಿಟಿಷ್ ಶಾರ್ಟ್ಹೇರ್ ಜಾತಿಗೆ ಸೇರಿದ ಅಪರುಪದ ಬೆಕ್ಕು ಇದಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಜುಲೈ 21 2019 ರಂದು ಜನಿಸಿದ ಗಾರ್ಲಿಕ್ ಸಿನೋಜೀನ್ ಸಂಸ್ಥೆಯ ಹೆಮ್ಮೆ ಕೂಸಾಗಿದೆ , ಬೀಜಿಂಗ್ ಮೂಲದ ಕಂಪನಿ ಮೊದಲ ಬಾರಿಗೆ ಯಶಸ್ವಿಯಾಗಿ ನಕಲಿಸಿದ ಬೆಕ್ಕಿನ ಮಾದರಿ ಇದಾಗಿದೆ .
ಒಂದು ಸಾಕು ಪ್ರಾಣಿಯ ನಕಲು ಮಾಡಲು ತಗಲುವ ವೆಚ್ಚ ಸುಮಾರು 3,80,000 ಯುವಾನ್ ($ 53,000) ,ಆದರೆ ಬೆಕ್ಕಿನ ನಕಲಿಗೆ ಸಂಸ್ಥೆ ನಿರ್ಧರಿಸಿದ ಬೆಲೆ 2,50,000 ಯುವಾನ್ ($ 35,000) . ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಿ ಜಿಡಾಂಗ್, ಹೆಚ್ಚಿನ ಬೆಲೆಯ ಹೊರತಾಗಿಯೂ, ಎಲ್ಲಾ ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ಹೆಚ್ಚಿನವರು ಇತ್ತೀಚೆಗೆ ಪದವಿ ಪಡೆದ ಯುವಕರು ಎಂದು ಕಂಪನಿ ತಿಳಿಸಿದೆ.
“ಸಾಕುಪ್ರಾಣಿಗಳ ಮೂಲ ಏನೇ ಇರಲಿ, ಮಾಲೀಕರು ಅವುಗಳನ್ನು ಕುಟುಂಬದ ಭಾಗವಾಗಿ ನೋಡುತ್ತಾರೆ.ಅವರು ಸಾಕು ಪ್ರಾಣಿಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ಕೊಂಡಿರುತ್ತಾರೆ ಇದನ್ನರಿತು ನಾವು ಅವರ ಭಾವನೆಗಳಿಗೆ ಮರು ಜೀವ ನೀಡಲು ಪ್ರಯತ್ನಿಸುತ್ತಿದ್ದೇವೆ ” ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








