ಆನ್ ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವನ ಬಂಧನ..!

ಬೆಂಗಳೂರು

     ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕ್ರಿಕೆಟ್ ಪಂದ್ಯಕ್ಕೆ ವೆಬ್‌ಸೈಟ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 1 ಲಕ್ಷ 6 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.ಓಕಳಿಪುರದ ಅಯೂಬ್  ಬಂಧಿತ ಆರೋಪಿಯಾಗಿದ್ದಾನೆ.

     ಆರೋಪಿಯು ಚಾಮರಾಜಪೇಟೆಯ ಉಮಾ ಚಿತ್ರಮಂದಿರದ ಬಳಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ವೆಬ್‌ಸೈಟ್ ಮೂಲಕ ಸೋಲು-ಗೆಲುವಿನ ಬಗ್ಗೆ ಹಣ ಕಟ್ಟಿಸಿಕೊಂಡು ಬೆಟ್ಟಿಂಗ್ ನಡೆಸುತ್ತಿದ್ದ.ಖಚಿತ ಮಾಹಿತಿಯಾಧರಿಸಿ ಆರೋಪಿಯನ್ನು ಬಂಧಿಸಿ 1 ಲಕ್ಷ 6 ಸಾವಿರ ನಗದು, ಮೊಬೈಲ್ ವಶಪಡಿಸಿಕೊಂಡು ಕೆಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಕ್ಲಬ್ ಮೇಲೆ ದಾಳಿ

     ಉಪ್ಪಾರ ಪೇಟೆಯ ಆಸ್ಪತ್ರೆ ರಸ್ತೆಯ ಬೆಂಗಳೂರು ಸಿಟಿ ಸ್ಪೋರ್ಟ್ಸ್ ಅಸೋಸಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿ ಜೂಜಾಟವಾಡುತ್ತಿದ್ದ ೨೨ ಮಂದಿಯನ್ನು ಬಂಧಿಸಲಾಗಿದೆ.ಕ್ಲಬ್‌ನ ಮಾಲೀಕ ಮಂಜುನಾಥ್, ಜೂಜಾಟವಾಡುತ್ತಿದ್ದ ೨೨ ಮಂದಿಯನ್ನು ಬಂಧಿಸಿ ೧ ಲಕ್ಷ ೭೫ ಸಾವಿರ ನಗದು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಉಪ್ಪಾರ ಪೇಟೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಹಿಳೆ ಸೇರಿ ಮೂವರ ಸೆರೆ

     ಮೊಬೈಲ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆ ಸೇರಿ ಮೂವರನ್ನು ನಂದಿನಿಲೇಔಟ್ ಪೊಲೀಸರು ಬಂಧಿಸಿದ್ದಾರೆ.ಮುನೇಶ್ವರಲೇಔಟ್‌ನ ಶಾಂತಮ್ಮ ವಿಜಯನಗರದ ಕೃಷ್ಣ ಹಾಗೂ ಸರಸ್ವತಿಪುರದ ಹರ್ಷವರ್ಧನ್ಬಂ ಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ ಮೂರು ಮೊಬೈಲ್‌ಗಳು ೯೦೦ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.ಮನೆಯಲ್ಲಿದ್ದ ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ.

     ಲಗ್ಗೆರೆಯ ಮುನೇಶ್ವರ ಬಡಾವಣೆಯ, ಮನೆಯೊಂದರಲ್ಲಿ ಆರೋಪಿ ಶಾಂತಮ್ಮ ಮಹಿಳೆಯರನ್ನಿಟ್ಟುಕೊಂಡು ಮೊಬೈಲ್‌ನಲ್ಲಿ ಗಿರಾಕಿಗಳನ್ನು ಸಂಪರ್ಕಿಸಿ, ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಲೋಹಿತ್ ಬಿ.ಎನ್. ಮತ್ತವರ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link