ಬೆಂಗಳೂರು
ಕಳೆದ ಒಂದು ತಿಂಗಳಲ್ಲಿ ಮನೆಗಳವು ಕನ್ನಗಳವು, ವಂಚನೆ ದುರುಪಯೋಗ, ಗಾಂಜಾ-ಮಾದಕವಸ್ತು ಮಾರಾಟ ಇನ್ನಿತರ 105 ಅಪರಾಧ ಪ್ರಕರಣಗಳನ್ನು ಬೇಧಿಸಿ ಭರ್ಜರಿ ಬೇಟೆಯಾಡಿರುವ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೆÇಲೀಸರು 4 ಕೋಟಿ 50 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀನಿವಾಸ್ ಅಲಿಯಾಸ್ ಅಪ್ಪು, ತಮಿಳುನಾಡು ಮೂಲದ ಶ್ರೀನಿವಾಸ್, ಕೃಷ್ಣ ಹಾಗೂ ರವಿ ಎಂಬ ನಾಲ್ವರನ್ನು ಬಂಧಿಸಿ 14 ಕನ್ನಗಳವು, 1 ಗಮನ ಬೇರೆಡೆ ಸೆಳೆದು ಕಳವು ಮಾಡಿದ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ ಶ್ರೀನಿವಾಸ್ ಅಲಿಯಾಸ್ ಅಪ್ಪುವಿನಿಂದ 912 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಅಶೋಕ ನಗರ, ವಿವೇಕ ನಗರ, ಪುಟ್ಟೇನಹಳ್ಳಿಯ ತಲಾ 2, ಕೆಎಸ್ ಲೇಔಟ್‍ನ 3, ಹೆಚ್‍ಎಲ್, ಜೆಸಿನಗರ, ಹಲಸೂರು ತಲಾ ಒಂದು ಸೇರಿ 13 ಕನ್ನಗಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ತಮಿಳುನಾಡು ಮೂಲದ ಶ್ರೀನಿವಾಸ್, ಕೃಷ್ಣ ಹಾಗೂ ರವಿ ಇಂದ 265 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಅಶೋಕ್ ನಗರ, ಜೆಪಿ ನಗರದ ಗಮನ ಬೇರೆಡೆ ಸೆಳೆದು ಕಳವು ಮಾಡಿದ 2 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಈ ನಾಲ್ವರ ಬಂಧನದಿಂದ 35 ಲಕ್ಷ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೆÇಲೀಸ್ ಆಯುಕ್ತ ಭಾಸ್ಕರರಾವ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು
ಕಾರು ತಡೆದು ದರೋಡೆ
ದಾವಣಗೆರೆಯ ಕಿಶೋರ್ ಎಂಬುವರು ಕಳೆದ ಸೆ. 26 ರಂದು ತಮ್ಮ ಕಂಪನಿಯ ಕಾರಿನಲ್ಲಿ ಒಂದೂವರೆ ಕೋಟಿ ಹಣ ತೆಗೆದುಕೊಂಡು ಬರುವಾಗ ಆರ್‍ಎಂಸಿ ಯಾರ್ಡ್‍ನ ಗೊರಗುಂಟೆ ಪಾಳ್ಯದ ಜಂಕ್ಷನ್ ಬಳಿ ಪೊಲೀಸರ ಸೋಗಿನಲ್ಲಿ ಕಾರು ತಡೆದು ದರೋಡೆ ಮಾಡಿದ್ದ 11 ಮಂದಿಯನ್ನು ಬಂಧಿಸಲಾಗಿದೆ.
ಹರಿಹರದ ಗಣೇಶ, ಮಲ್ಲಿಕಾರ್ಜುನ, ದಾದಾಪಿರ್, ಅನ್ಸರ್‍ಪಾಷ, ಆರ್‍ಟಿನಗರದ ಮಜೀದ್ ಪಾಷ, ಅಬ್ದುಲ್ ಕಲೀಂ, ಮತಿನ್ ಪಾಷ, ವಾಜಿಕ್ ಪಾಷ, ತರೀಕೆರೆಯ ಮಹ್ಮದ್ ರಫಿ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 30 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಬಂಧಿತ ಆರೋಪಿಗಳು ಈಗಾಗಲೇ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಬಂಧಿತರಾಗಿರುವ ಇನಾಯಿತ್‍ವುಲ್ಲಾ, ಸುಹೆಲ್ ಪಾಷ, ಅಬ್ದುಲ್ ಕಲೀಂ ಜತೆ ಸೇರಿ ಪೊಲೀಸರ ಸೋಗಿನಲ್ಲಿ ದರೋಡೆ ಮಾಡಿದ್ದರು ಎಂದು ಭಾಸ್ಕರರಾವ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








