ಸಿ ಸಿ ಬಿಯಿಂದ 60 ಮಂದಿ ವಲಸಿಗರ ಬಂಧನ..!

ಬೆಂಗಳೂರು

    ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಲು ಸಿಸಿಬಿ ಪೊಲೀಸರು ಬಿಬಿಎಂಪಿ ಅಧಿಕಾರಿಗಳ ಸೋಗಿನಲ್ಲಿ ಉಚಿತ ನಿವೇಶನ ಮನೆ ಆಸೆ ತೋರಿಸಿ ಉಪಾಯ ಮಾಡಿ ಯಶಸ್ವಿ ಕಾರ್ಯಾಚರಣೆ ನಡೆಸಿರುವುದು ಬೆಳಕಿಗೆ ಬಂದಿದೆ. ಮಾರತ್‌ಹಳ್ಳಿ,ರಾಮ ಮೂರ್ತಿ ನಗರ,ಕೆಆರ್‌ಪುರ ಇನ್ನಿತರ ಕಡೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದವರನ್ನ ಪತ್ತೆ ಮಾಡಲು ಬಿಬಿಎಂಪಿ ಅಧಿಕಾರಿಗಳ ವೇಷದಲ್ಲಿ ಹೋಗಿದ್ದ ಪೊಲೀಸರು ಸರ್ಕಾರದಿಂದ ನಿವೇಶನ,ಮನೆ, ವಿದ್ಯುತ್ ವ್ಯವಸ್ಥೆ ಮಾಡಿಕೊಡೊದಾಗಿ ಅಮಿಷವೊಡ್ಡಿ ಸತ್ಯ ಹೊರ ತಂದಿದ್ದಾರೆ.

    ಉಚಿತ ನಿವೇಶನ ಮನೆಗೆ ಆಸೆಗೆ ಬಿದ್ದ ಬಾಂಗ್ಲಾ ಅಕ್ರಮ ವಲಸಿಗರು ಆಧಾರ್‌ಕಾರ್ಡ್ ಮತದಾರರ ಗುರುತಿನ ಪತ್ರ ಇನ್ನಿತರ ಸರ್ಕಾರಿ ದಾಖಲೆಗಳನ್ನು ಪಡೆದುಕೊಂಡಿರುವುದನ್ನು ಬಾಯ್ಬಿಟ್ಟಿದ್ದಾರೆ. ಸತತ ಹತ್ತು ದಿನಗಳ ಕಾಲ ಬಿಬಿಎಂಪಿ ಅಧಿಕಾರಿಗಳ ಹೆಸರಲ್ಲೇ ಕಾರ್ಯಚರಣೆ ನಡೆಸಿ,ಅಕ್ರಮವಾಗಿ ನೆಲೆಸಿದ್ದ 60 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂದುವರೆದ ಶೋಧ

     ನಗರದ ಪೂರ್ವ,ಆಗ್ನೇಯ ಹಾಗೂ ಈಶಾನ್ಯ ವಿಭಾಗಗಳಲ್ಲಿ ಇನ್ನೂ ಕೆಲವು ಮಂದಿ ಅಕ್ರಮವಾಗಿ ಬಾಂಗ್ಲಾ ವಲಸಿರುವ ವಾಸಿಸುತ್ತಿರುವ ಮಾಹಿತಿ ಬಂದಿದ್ದು ಅವರ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಈಗಾಗಲೇ ಬಂಧಿಸಿರುವ 60 ಮಂದಿ ಬಾಂಗ್ಲಾ ವಲಸಿಗರನ್ನು ಅವರ ದೇಶಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದ್ದು ಬಾಂಗ್ಲಾ ವಲಸಿಗರ ಬಗ್ಗೆ ಸ್ಥಳೀಯರಿಂದಲೂ ಮಾಹಿತಿ ಪಡೆಯಲಾಗುತ್ತಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link