ಬೆಂಗಳೂರು
ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಗರದ ಪುರಭವನದ ಮುಂಭಾಗ ಭಾನುವಾರ ಬೆಳಿಗ್ಗೆ ನೂರಾರು ಮಂದಿ ಸೇರಿ ಕೇಂದ್ರ ಸರ್ಕಾರದ ಪರ ಘೋಷಣೆಗಳನ್ನು ಕೂಗಿದರು
ಕಾಯ್ದೆ ವಿರೋಧಿಸುತ್ತಿರುವವ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು ಪೌರತ್ವ ತಿದ್ದುಪಡಿ ಕಾಯ್ದೆಯು ಜಾರಿಗೆ ಬರಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು ಆರಂಭದಲ್ಲಿ ಸುಮಾರು 250 ಮಂದಿ ಸೇರಿದ್ದರು. ಸಂಖ್ಯೆ ಕ್ರಮೇಣ ಹೆಚ್ಚಾಯಿತು ವಿವಿಧ ಘೋಷಣೆಗಳ ಜೊತೆಗೆ ?ಮೋದಿ? ?ಮೋದಿ? ಎಂದು ಅವರು ಕೂಗುತ್ತಿದ್ದಾರೆ. ?ಪೌರತ್ವ ತಿದ್ದುಪಡಿ ಕಾಯ್ದೆಯು ಜಾತ್ಯತೀತವಾಗಿದೆ. ಭಾರತವನ್ನು ಜಾತ್ಯತೀತ ಮೂಲಭೂತವಾದಿಗಳಿಂದ ಕಾಪಾಡಬೇಕಿದೆ? ಎನ್ನುವ ಘೋಷಣೆಗಳಿರುವ ಭಿತ್ತಿಪತ್ರಗಳು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಸದ ತೇಜಸ್ವಿ ಸೂರ್ಯ ಅವರು ಪೌರತ್ವ ತಿದ್ದುಪಡಿ ಕಾಯ್ದೆ, ಎನ್‍ಆರ್‍ಸಿ ಪ್ರಕ್ರಿಯೆ ಸಂಬಂಧ ಕಾಂಗ್ರೆಸ್ ಸಾವಿನ ರಾಜಕೀಯ ಮಾಡುತ್ತಿದೆ ಎಂದು ದೂರಿದರು.ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಂರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ. ಇದು ಮೂರು ದೇಶಗಳ ಅಲ್ಪ ಸಂಖ್ಯಾತರಿಗೆ ಪೌರತ್ವ ಕೊಡುವ ಕಾನೂನು. ಇನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.ಆದರೆ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ತಮ್ಮ ಪಿತೂರಿ ಕೈಬಿಡಬೇಕು ಎಂದರು.
2014ರ ಹಿಂದೆ ಭಾರತಕ್ಕೆ ಬಂದಿರುವ ಯಾರಿಗೂ ಈ ಕಾಯ್ದೆಯಿಂದ ತೊಂದರೆಯಾಗುವುದಿಲ್ಲ. ಭಾರತದ ಈ ಸಹಸ್ರಾರು ವರ್ಷಗಳ ನಾಗರೀಕ ಸಂಪ್ರದಾಯಗಳನ್ನಾ ಕಾಪಾಡಲು ಈ ಕಾಯ್ದೆಯನ್ನು ತರಲಾಗುತ್ತಿದೆ. ಪೌರತ್ವ ಕಾಯ್ದೆಯನ್ನು ಜಾರಿಗೆ ತರುವಂತೆ ಮನಮಹೋನ್ ಸಿಂಗ್ ರಾಜ್ಯಸಭಾದಲ್ಲಿ ಭಾಷಣ ಮಾಡಿದ್ದರು. ಆದರೆ ಈಗ ಬಿಜೆಪಿ ಅದೇ ಕಾಯ್ದೆಯನ್ನಾ ಜಾರಿಗೆ ತಂದರೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೌರತ್ವ ಕಾನೂನಿನ ಬಗ್ಗೆ ಸರಿಯಾಗಿ ಮಾಹಿತಿಯಿಲ್ಲದೇ ವಿದ್ಯಾರ್ಥಿಗಳನ್ನ ದಾರಿ ತಪ್ಪಿಸಲಾಗುತ್ತಿದೆ. ಕಾನೂನನ್ನು ಸರಿಯಾಗಿ ಓದದೆ ಈ ರೀತಿ ಗಲಭೆಗಳಿಗೆ ಕಾರಣರಾಗುತ್ತಿದ್ದಾರೆ ಎಂದ ಅವರು, ಎದೆ ಸೀಳಿದರೆ ಒಂದ ಅಕ್ಷರ ಬಲ್ಲದವರಿಂದ, ಪಂಚರ್ ಅಂಗಡಿ ಹಾಕಿಕೊಂಡವರಿಂದ ಗಲಭೆ ನಡೆಯುತ್ತಿದ್ದು, ಇದೆಲ್ಲವೂ ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ತಿಳಿಸಿದರು.
ಪದೇ ಪದೇ ಪಾಕಿಸ್ತಾನವನ್ನು ರಾಜ್ಯ ಎಂದೇ ಉಲ್ಲೇಖಿಸುತ್ತಿದ್ದರು. ಬಳಿಕ, ಪ್ರತಿಭಟನಾ ನಿರತರು, ಅದೊಂದು ರಾಷ್ಟ್ರ ಎಂದು ನೆನಪಿಸಿದರು. ಬಳಿಕ ತಮ್ಮ ಮಾತುಗಳನ್ನು ಮುಂದುವರೆಸಿದ ಅವರು, ಮಾಜಿ ಸಚಿವ ಯು.ಟಿ.ಖಾದರ್ ಅವರಂತೆ ನಾವು ಸಹ ಪ್ರಚೋದನಕಾರಿ, ಜನರನ್ನು ಸೇರಿಸಿದರೆ, ಅವರು ಉಳಿಯುವುದೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಗುಹಾ ಗೊತ್ತಿಲ್ಲ..
ಎಂದೂ ಸಹ ಬೀದಿಗಿಳಿದ ಇತಿಹಾಸಕಾರ ರಾಮಚಂದ್ರ ಗುಹಾ, ಮೊನ್ನೆ ಪ್ರತಿಭಟನೆ ನಡೆಸಿದರು. ಆದರೆ, ಅವರು ಯಾರು ಎಂಬ ಮಾಹಿತಿ ಹಲವರಿಗೆ ಇಲ್ಲ ಎಂದು ಚಿಂತಕ ಸೂಲಿಬೆಲೆ ಚಕ್ರವರ್ತಿ ವ್ಯಂಗ್ಯವಾಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಗಳು ಪ್ರತ್ಯೇಕವಾದವುಗಳು. ಈ ಕಾಯ್ದೆಗಳಿಂದ ಭಾರತೀಯ ನಾಗರಿಕರಿಗೆ ಯಾವುದೇ ತೊಂದರೆಯಿಲ್ಲ. ಹಿಂದೂ ಅಥವಾ ಮುಸ್ಲಿಮರಿಗೆ ಈ ಕಾಯ್ದೆಗಳಿಂದ ಬಾಧಕವಿಲ್ಲ?ಎಂದು ತಿಳಿಸಿದರು.
ಬಿಗಿ ಭದ್ರತೆ
ಪ್ರತಿಭಟನೆ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ, ಪುರಭವನ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.ಇನ್ನೂ, ಪುರಭವನ ಕಟ್ಟಡದ ಛಾವಣಿ ಮೇಲೆಯೂ ಹಲವಾರು ಪೊಲೀಸರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








