ಶ್ರೀನಗರ:
ಕಣಿವೆ ರಾಜ್ಯದಲ್ಲಿ ಇಂದಿನಿಂದ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದ ಒಂದು ದಿನದ ನಂತರ ಈ ಇಂಟರ್ ನೆಟ್ ಸೇವೆಗಳು ಪುನರಾರಂಬವಾಗಿದೆ. ಕಣಿವೆಯಲ್ಲಿ ಏಳು ತಿಂಗಳ ಕಾಲ ಜಾರಿಯಲ್ಲಿದ್ದ ಇನ್ಫಾರ್ಮೇಷನ್ ಬ್ಲಾಕೌಟ್ ಅನ್ನು ಈ ಮೂಲಕ ಅಂತ್ಯಗೊಳಿಸಲಾಗಿದೆ.
ಜಮ್ಮು ಕಾಶ್ಮೀರದ ಎಲ್ಲಾ ಪ್ರದೇಶಗಳಲ್ಲಿ ಕಳೆದ ವರ್ಷ ಆಗಸ್ಟ್ 4 ರಂದು ಇಂಟರ್ನೆಟ್ ಸೇವೆಗಳು ಬಂದ್ ಆಗಿದ್ದವು.ಅದಾಗಿ ಮರುದಿನ ಎಂದರೆ ಆಗಸ್ಟ್ ಐದಕ್ಕೆ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತ್ತು.
ಆದಾಗ್ಯೂ, ಇಂಟರ್ನೆಟ್ ವೇಗದ ಮೇಲೆ ನಿಯಂತ್ರಣ ಹೇರಲಾಗಿದೆ. ಮೊಬೈಲ್ ಡೇಟಾ ಸೇವೆಯನ್ನು 2ಜಿ ಸೇವೆಗಳಿಗೆ ಸೀಮಿತಗೊಳಿಸಲಾಗಿದೆ.”ಸರ್ಕಾರವು ನಿಷೇಧವನ್ನು ತೆಗೆದಿದೆ. ಆದರೆ ಕಳೆದ ಕೆಲವು ತಿಂಗಳಿನಿಂದ ಏನು ಬದಲಾವಣೆ ಗಳಾಗಿದೆ ಎಂದು ನಮಗೆ ತಿಳಿದಿಲ್ಲ. ಆದರೆ ಎಲ್ಲದಕ್ಕೂ ಹೆಚ್ಚಾಗಿ ಈ ರೀತಿಯ ನಿಷೇಧ ಹೇರಿರುವುದು ತಪ್ಪು” ಸಾಫ್ಟ್‌ವೇರ್ ಪ್ರೋಗ್ರಾಮರ್ ನವೀದ್ ಅಂಜುಮ್ ಹೇಳಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
