ಚಿಕ್ಕನಾಯಕನಹಳ್ಳಿ:

ಪಟ್ಟಣದ ಸಿವಿಲ್ ಬಸ್ಟ್ಯಾಂಡ್ ಬಳಿ ಇರುವ ಮೂರು ಪೆಟ್ಟಿಗೆ ಅಂಗಡಿಗಳಿಗೆ ಆಕಸ್ಮಿಕವಾಗಿ ಬುಧವಾರ ಮಧ್ಯಾಹ್ನ ಬೆಂಕಿ ತಗುಲಿದ್ದು, ಸುಮಾರು ಐವತ್ತು ಸಾವಿರ ರೂ. ಗಳಿಗೂ ಹೆಚ್ಚಿನ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸಿವಿಲ್ ಬಸ್ಟ್ಯಾಂಡ್ ಬಳಿ ಇರುವ ಒಂದು ಕೋಳಿ ಮೊಟ್ಟೆಯ ಪೆಟ್ಟಿಗೆ ಅಂಗಡಿ ಹಾಗೂ ಎರಡು ಎಗ್‍ರೈಸ್ ಅಂಗಡಿಗೆ ಬೆಂಕಿ ತಗುಲಿದೆ. ಪರಿಣಾಮ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಹೋಗಿವೆ. ಒಂದು ವಾರದಿಂದ ಅಂಗಡಿಗಳು ಬಂದ್ ಇರುವುದರಿಂದ ಹೆಚ್ಚಿನ ನಷ್ಟ ಉಂಟಾಗಿಲ್ಲ. ಮೂರು ಅಂಗಡಿಯಿಂದ ಸೇರಿ 50 ಸಾವಿರದಷ್ಟು ನಷ್ಟ ಉಂಟಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿ, ಇತರೆ ಅಂಗಡಿಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ. ತಕ್ಷಣ ಆಗಮಿಸಿದ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬದಿಂದ ಅಂಗಡಿಗಳಿಗಿದ್ದ ಸಂಪರ್ಕವನ್ನು ಕಡಿತಗೊಳಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







