ಅಸಮದಾನಕ್ಕೆ ಕಾರಣವಾದ ಹಾಲು ವಿತರಣೆ.

ಚಳ್ಳಕೆರೆ

     ಕರ್ನಾಟಕ ಹಾಲು ಒಕ್ಕೂಟ ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಬಡ ಜನರಿಗೆ ವಿಶೇಷವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೆ ಪ್ರತಿನಿತ್ಯ ಉಚಿತವಾಗಿ ಅರ್ಧ ಲೀಟರ್ ಹಾಲನ್ನು ನೀಡಲು ನಿರ್ಧರಿಸಿದ್ದು, ಶನಿವಾರ ಹಾಲು ಒಕ್ಕೂಟ ನಗರದ ವಾರ್ಡ್‍ಗೆ ವಿತರಣೆ ಮಾಡಲು ಕಡಿಮೆ ಪ್ರಮಾಣದ ಹಾಲನ್ನು ಸರಬರಾಜು ಮಾಡಿದ್ದು, ನಗರಸಭೆಯ ಹಲವಾರು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

      ಈ ಬಗ್ಗೆ ಅಸಮದಾನ ವ್ಯಕ್ತ ಪಡಿಸಿದ ಸದಸ್ಯರಾದ ವೈ.ಪ್ರಕಾಶ್, ಟಿ.ಮಲ್ಲಿಕಾರ್ಜನ, ಆರ್. ರುದ್ರನಾಯಕ, ವೆಂಕಟೇಶ್, ಪ್ರಮೋದ್, ಸಿ.ಶ್ರೀನಿವಾಸ್, ಚಳ್ಳಕೆರೆಯಪ್ಪ, ವಿರೂಪಾಕ್ಷಿ, ಪ್ರಶಾಂತ್‍ಕುಮಾರ್ ಮುಂತಾದವರು ನಮ್ಮ ವಾರ್ಡ್‍ಗಳಲ್ಲಿ ಬಡವರ ಸಂಖ್ಯೆ ಹೆಚ್ಚಿದ್ದು, ಹಾಲು ಕಡಿಮೆ ನೀಡಿದಲ್ಲಿ ಎಲ್ಲರೂ ಬೇಸರ ವ್ಯಕ್ತ ಪಡಿಸುತ್ತಾರೆ. ಆದ್ದರಿಂದ ಸಮರ್ಪಕವಾಗಿ ಹಾಲು ಸರಬರಾಜು ಮಾಡಿದರೆ ಮಾತ್ರ ವಿತರಣೆ ಮಾಡಲು ಸಹಾಯಕವಾಗುತ್ತದೆ ಎಂದರು. ಈಗಾಗಲೇ ವಾರ್ಡ್ ವ್ಯಾಪ್ತಿಯಲ್ಲಿ ನಾವೆಲ್ಲರೂ ಹಾಲು ವಿತರಣೆಯ ಬಗ್ಗೆ ಪ್ರಚಾರ ನಡೆಸಿದ್ದು, ಮೊದಲ ದಿನವೇ ನಿರೀಕ್ಷಿತ ಮಟ್ಟದಲ್ಲಿ ಹಾಲು ಸರಬರಾಜು ಆಗದೇ ಇದಿದ್ದು ಎಲ್ಲರಿಗೂ ಬೇಸರ ತರಿಸಿದೆ ಎಂದರು.

     ಪ್ರತಿವಾರ್ಡ್‍ಗೆ ಹಾಲು ಒಕ್ಕೂಟ ಕೇವಲ 120 ಲೀಟರ್ ನೀಡಿದ್ದು, ಸದಸ್ಯರ ಅಸಮದಾನಕ್ಕೆ ಕಾರಣವಾಯಿತು. ವಾರ್ಡ್ ವ್ಯಾಪ್ತಿಯಲ್ಲಿರುವ ಎಲ್ಲಾ ಬಿಪಿಎಲ್ ಕಾರ್ಡ್‍ದಾರರಿಗೆ ಹಾಲು ನೀಡುವಂತೆ ಸದಸ್ಯರು ಹಾಲು ಒಕ್ಕೂಟದ ಅಧಿಕಾರಿಗಳನ್ನು ಒತ್ತಾಯಿಸಿದರು. ಶಾಸಕ ಟಿ.ರಘುಮೂರ್ತಿಯವರಿಗೆ ಸಹ ಮಾಹಿತಿ ನೀಡಿದ ನಗರಸಭಾ ಸದಸ್ಯರು ಸಮರ್ಪಕವಾಗಿ ಹಾಲು ವಿತರಣೆಯಾದಲ್ಲಿ ಮಾತ್ರ ನಾವು ಜನರಿಗೆ ಹಾಲು ವಿತರಿಸಲು ಸಾಧ್ಯ. ಕಡಿಮೆ ಪ್ರಮಾಣದಲ್ಲಿ ಹಾಲನ್ನು ವಿತರಿಸಿದಲ್ಲಿ ಎಲ್ಲರೂ ಅಸಮದಾನಗೊಳ್ಳುವುದರಲ್ಲಿ ಅನುಮಾನವಿಲ್ಲವೆಂದರು.

      ಶಾಸಕ ಟಿ.ರಘುಮೂರ್ತಿ ಪ್ರತಿಕ್ರಿಯಿಸಿ ಮೊದಲ ದಿನ ಸ್ವಲ್ಪ ತಾಂತ್ರಿಕ ಕಾರಣಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಹಾಲು ಸರಬರಾಜು ಆಗಿಲ್ಲ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹಾಗೂ ಹಾಲು ಒಕ್ಖೂಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇನ್ನೂ ಹೆಚ್ಚು ಪ್ರಮಾಣದ ಹಾಲು ನಗರಕ್ಕೆ ದೊರೆಯಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap