ಹಗರಿಬೊಮ್ಮನಹಳ್ಳಿ:

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಬಳ್ಳಾರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಬಳ್ಳಾರಿ ಸಂಸದರಾದ ವೈ.ದೇವೇಂದ್ರಪ್ಪ ಶ್ಲಾಘನೀಯ ವ್ಯಕ್ತಪಡಿಸಿದರು.
ತಾಲೂಕಿನ ಬಾಚಿಗೊಂಡನಹಳ್ಳಿ, ಕಡಲಬಾಳು ಹಾಗೂ ಹನಸಿ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕೈಗೊಂಡಿರುವ ಉದ್ಯೋಗಖಾತ್ರಿ ಯೋಜನೆಯ ಕಾಮಗಾರಿಗಳು ನಡೆಯುವ ಸ್ಥಳಗಳಿಗೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿನೀಡಿ, ವೀಕ್ಷಿಸಿದ ಬಳಿಕ ಅವರು ಪತ್ರಿಕೆಯೊಂದಿಗೆ ಮಾತನಾಡಿದರು. ಕೊರೋನಾ ವೈರಸ್ ದೇಶ ವ್ಯಾಪಿಸಿರುವಾಗ, ಅದರ ನಿಯಂತ್ರಣ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ಡೌನ್ನಂತ ನಿರ್ಧಾರ ತೆಗೆದುಕೊಳ್ಳುವ ಮೂಲಕ, ರೋಗ ಹರಡದಂತೆ ನಿಯಂತ್ರಣಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಕೈಕಟ್ಟಿ ಕುಳಿತುಕೊಳ್ಳದೆ, ಜೀವನ ನಿರ್ವಹಣೆಗೆ ಅವರಿಗೂ ಕೂಲಿ ಸಿಗಬೇಕು ಎನ್ನುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕೆಲಸ ನೀಡುವಲ್ಲಿ ಯೋಜನೆ ಯಶಸ್ವಿಯಾಗಿದೆ.ಅಧಿಕಾರಿಗಳ ನಿರ್ದೇಶನ, ಕಾರ್ಮಿಕರ ಶ್ರಮದ ಫಲವಾಗಿ ಇಂದು ಬಳ್ಳಾರಿ ಜಿಲ್ಲೆ ಯೋಜನೆಯು ಪ್ರಥಮ ಸ್ಥಾನದಲ್ಲಿರುವುದು ಸಂತಸ ತಂದಿದೆ. ಖಾತ್ರಿ ಯೋಜನೆಯನ್ನು 200ಕ್ಕೂ ಹೆಚ್ಚು ಜನರಿಗೆ ನೀಡುವಂತೆ ಚರ್ಚಿಸಲಾಗುವುದು.
ಲಾಕ್ಡೌನ್ ಹಂತಹಂತವಾಗಿ ವಿನಾಯಿತಿ ನೀಡುತ್ತಾ ಸಡಿಲಿಕೆ ನೀಡಲಾಗುವುದು. ಲಾಕ್ಡೌನ್ ಸಮಯದಲ್ಲಿ ಪೊಲೀಸರು, ವೈದ್ಯರು, ಅದರಲ್ಲೂ ಈ ಆಶಾ ಕಾರ್ಯಕರ್ತೆಯರು ಹಾಗೂ ಮಾಧ್ಯಮಗಳು ಜಾನಜಾಗೃತಿ ಮೂಡಿಸುವಲ್ಲಿ ಅವರವರ ಕರ್ತವ್ಯ ನಿರ್ವಹಿಸುವ ಮೂಲಕ ದೇಶಕ್ಕೆ ಅಪಾರವಾದ ಸೇವೆ ಸಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಅವರೆಲ್ಲರಿಗೂ ಕೋಟಿಕೋಟಿ ನಮನಗಳು ಎಂದರು. ಲಾಕ್ಡೌನ್ ನಿರ್ಧಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷರಾದ ನರೆಗಲ್ ಕೊಟ್ರೇಶ್, ರೋಹಿತ್, ಜಿ.ಪಂ.ಸದಸ್ಯೆ ಶಾರದಮ್ಮ ಶೇಖರಪ್ಪ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಕಿನ್ನಾಳ್ ಸುಭಾಷ್, ತಾಲೂಕು ಕಾರ್ಯದರ್ಶಿ ಬ್ಯಾಟಿ ನಾಗರಾಜ್, ಮುಖಂಡರಾದ ಹೊಳಗುಂದಿ ಶೇಖರಪ್ಪ, ಗವಿಸಿದ್ದ, ಕೆ.ಓಬಳಾಪುರ ಮಲ್ಲೇಶ, ತಾ.ಪಂ.ಇಒ ಹಾಲಸಿದ್ದಪ್ಪ ಪೂಜಾರ್, ಖಾತ್ರಿ ಸಹಾಯಕ ನಿರ್ದೇಶಕ ವಿಶ್ವನಾಥ, ಕೃಷಿ ಇಲಾಖೆಯ ಎ.ಡಿ. ಜೀವನಸಾಬ್, ತಾಂತ್ರಿಕಾಧಿಕಾರಿ ದೇವೇಂದ್ರಪ್ಪ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








