ಪಾಕಿಸ್ತಾನ : ಅಸೆಂಬ್ಲಿ ಸ್ಪೀಕರ್ ಕುಟುಂಬಕ್ಕೂ ತಟ್ಟಿದ ಕೊರೋನಾ ಸೋಂಕು

ಇಸ್ಲಾಮಾಬಾದ್:

     ಕೊರೋನಾ ವೈರಸ್ ಮಟ್ಟಹಾಕಲು ಪಾಕಿಸ್ತಾನ ಹೆಣಗಾಡುತ್ತಿದ್ದು, ಈ ನಡುವಲ್ಲೇ ಪಾಕಿಸ್ತಾನದ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಅಸಾದ್ ಕೈಸರ್ ಸೇರಿದಂತೆ ಅವರ ಪುತ್ರ ಹಾಗೂ ಪುತ್ರಿಗೂ ವೈರಸ್ ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ. 

      ವೈದ್ಯಕೀಯ ವರದಿಯಲ್ಲಿ ವೈರಸ್ ದೃಢಪಟ್ಟಿದ್ದು, ಮನೆಯಲ್ಲಿ ಸ್ವಯಂ ದಿಗ್ಭಂಧನದಲ್ಲಿದ್ದೇನೆಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕೈಸರ್ ಅವರು ಹೇಳಿಕೊಂಡಿದ್ದಾರೆ.ಪಾಕಿಸ್ತಾನದಲ್ಲಿ ಈ ವರೆಗೂ 16,817 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 385 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 4,315 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆಂದು ತಿಳಿದುಬಂದಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link