ಹುಳಿಯಾರು:
ಹುಳಿಯಾರಿನ ಮಾರುತಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 2020-21 ಸಾಲಿನಲ್ಲಿ ಶಾಲೆ ಆರಂಭದ ಕುರಿತು ಪೋಷಕರ ಅಭಿಪ್ರಾಯ ಸಂಗ್ರಹಿಸುವ ಸಲುವಾಗಿ ಪೋಷಕರ, ಎಸ್.ಡಿ.ಎಮ್.ಸಿ ಸದಸ್ಯರ ಸಭೆ ನಡೆಸಲಾಯಿತು.
ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಶಾಲೆಯನ್ನು ಆರಂಭಿಸಿದರೆ ಮಕ್ಕಳನ್ನು ಶಾಲೆಗೆ ಕುಳುಹಿಸುವುದಾಗಿ ಪೋಷಕರು ಭರವಸೆ ನೀಡಿದರು. ಶಾಲೆ ಆರಂಭ ತಡವಾದರೆ ಪಠ್ಯಪುಸ್ತಕಗಳನ್ನು ವಿತರಿಸಿದರೆ ಮಕ್ಕಳು ಸ್ವಲ್ಪವಾದರೂ ಮನೆಯಲ್ಲಿ ಅಭ್ಯಾಸ ಮಾಡಲು ಅನುಕೂಲವಾಗುತ್ತದೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಂದ್ರ ಮಾತನಾಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಮಕ್ಕಳಿಗೆ ಶಾಲೆ ಕಳುಹಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿ ಸರ್ಕಾರದ ಆದೇಶದ ಮೇರೆಗೆ ಶಾಲೆ ಪ್ರಾರಂಭಿಸುವುದಾಗಿ ತಿಳಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜು, ಶಿಕ್ಷಕರುಗಳಾದ ಬೈಲಪ್ಪ, ಪ್ರಸನ್ನ ಕುಮಾರ್, ಮತ್ತು ಪೋಷಕರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








