ಬೆಂಗಳೂರು: 
ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಸುಮಾರು 175 ಜನರು ಕುವೈತ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದು, ಇವರೆಲ್ಲರೂ ರಾಜ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಈಶ್ವರ್ ಖಂಡ್ರೆ ಯವರಲ್ಲಿ ಸ್ವದೇಶಕ್ಕೆ ಮರಳಲು ಮನವಿ ಮಾಡಿಕೊಂಡಿದ್ದು ಶ್ರೀಯುತ ಈಶ್ವರ್ ಖಂಡ್ರೆಯವರು ಅನಿವಾಸಿ ಬಾರತೀಯ ಸಮಿತಿ, ಕರ್ನಾಟಕ ಸರ್ಕಾರದ ಮಾಜಿ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣರವರಿಗೆ ಈ ಬಗ್ಗೆ ತಿಳಿಸಿದರು, ಕೂಡಲೆ ಡಾ.ಆರತಿ ಕೃಷ್ಣರವರು ಕುವೈತ್ ನಲ್ಲಿರುವ ಮಂಜೇಶ್ವರ ಮೂಲದ ಮೋಹನ್ ದಾಸ್ ಕಾಮತ್ ರವರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕೇಳಿದರು,
ಇದಕ್ಕೆ ಸ್ಪಂದಿಸಿದ ಮೋಹನ್ ದಾಸ್ ಕಾಮತ್ ರವರು ಸಂಕಷ್ಟದಲ್ಲಿರುವವರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯುವುದಲದಲ್ಲದೆ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಲು ಮೋಹನ್ ದಾಸ್ ಕಾಮತ್ ರವರು ನೆರವಾಗಿದ್ದಾರೆ, ಹಾಗು ಈ ಬಗ್ಗೆ ಮಾಲೀಕರು ಚಾರ್ಟರ್ ವಿಮಾನ ಮೂಲಕ ಕಾರ್ಮಿಕರನ್ನು ವಾಪಸ್ಸು ಕಳುಹಿಸುವ ಭರವಸೆ ನೀಡಿ ಮೂರು ತಿಂಗಳು ಕಳೆದರೂ ಇನ್ನೂ ಯಾವುದೇ ಬೆಳವಣಿಗೆ ಇಲ್ಲದ ಕಾರಣ ಕಾರ್ಮಿಕರು ಮಾನ್ಯ ಈಶ್ವರ್ ಖಂಡ್ರೆ ಯವರನ್ನು ಸಂಪರ್ಕಿದಿದ್ದಾರೆ, ಇದೀಗ ಡಾ. ಆರತಿ ಕೃಷ್ಣ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಈಶ್ವರ್ ಖಂಡ್ರೆಯವರು ಮಾಲೀಕರೊಂದಿಗೆ ಮಾತನಾಡಿ ಕೂಡಲೆ ಕಾರ್ಮಿಕರನ್ನು ಭಾರತಕ್ಕೆ ವಾಪಸ್ಸು ಕರೆಸುವ ವ್ಯವಸ್ಥೆ ಕಲ್ಪಿಸಲು ಹೇಳಿದ್ದು ಇಲ್ಲವಾದಲ್ಲಿ ರಾಯಭಾರಿ ಕಛೇರಿಯೊಂದಿಗೆ ಮಾತನಾಡಿ ಕಾರ್ಮಿಕರನ್ನು ವಾಪಸ್ಸು ಕರೆಸುವ ವ್ಯವಸ್ಥೆಯಾಗಲಿದೆ ಎಂದು ಡಾ. ಆರತಿ ಕೃಷ್ಣ ರವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








