ಪಾರದರ್ಶಕ ತೆರಿಗೆ: ಪ್ರಾಮಾಣಿಕರಿಗೆ ಗೌರವ ತೆರಿಗೆ ವ್ಯವಸ್ಥೆಗೆ ಮಲಬಾರ್ ಗ್ರೂಪ್ ಸ್ವಾಗತ

ಬೆಂಗಳೂರು:

     ಕೇಂದ್ರ ಸರ್ಕಾರ ಪ್ರಕಟಿಸಿರುವ ಹೊಸ “ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ’ ಎಂಬ ಉಪಕ್ರಮವು ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವಾಗಿಸಲಿದೆ ಮತ್ತು ಪ್ರಾಮಾಣಿಕ ತೆರಿಗೆದಾರರ ಗೌರವವನ್ನು ಹೆಚ್ಚು ಮಾಡುತ್ತದೆ ಎಂದು ಮಲಬಾರ್ ಗ್ರೂಪ್‍ನ ಅಧ್ಯಕ್ಷ ಎಂ ಪಿ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

    ಕೇಂದ್ರ ಸರ್ಕಾರದ ಹೊಸ ನೀತಿಯನ್ನು ಸ್ವಾಗತಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಕಟಿಸಿರುವ ಹೊಸ ತೆರಿಗೆ ಪದ್ಧತಿಯನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಸರಿಯಾಗಿ ಮತ್ತು ನಿಯಮಿತವಾಗಿ ತೆರಿಗೆ ಪಾವತಿ ಮಾಡುವ ಜನರು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಉತ್ತೇಜನ ಮತ್ತು ನೆರವು ನೀಡುತ್ತದೆ. ತೆರಿಗೆ ವ್ಯವಸ್ಥೆಯನ್ನು ಸರಳೀಕರಣಗೊಳಿಸಿರುವುದು ಕೇಂದ್ರ ಸರ್ಕಾರದ ತೆರಿಗೆ ಆದಾಯವನ್ನು ಹೆಚ್ಚು ಮಾಡಲಿದೆ ಮತ್ತು ತೆರಿಗೆ ಸಂಗ್ರಹಕ್ಕೆ ಇದು ಮತ್ತಷ್ಟು ಉತ್ತೇಜನ ನೀಡಲಿದೆ. ಅಲ್ಲದೇ, ಇದರಿಂದಾಗಿ ದೇಶದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡಲಿದೆ ಎಂದು ತಿಳಿದರು.

    ತೆರಿಗೆಯನ್ನು ವಂಚಿಸುವವರು, ಕಪ್ಪು ಮಾರುಕಟ್ಟೆ ದಂಧೆಕೋರರು ಮತ್ತು ಕಳ್ಳ ಸಾಗಣೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೊಸ ತೆರಿಗೆ ವ್ಯವಸ್ಥೆಯು ಮೊದಲ ಹೆಜ್ಜೆಯಾಗಿದೆ. ಇದು ದೀರ್ಘಾವಧಿಯಲ್ಲಿ ಸಾಗಿ ಸರ್ಕಾರದ ಒಟ್ಟಾರೆ ತೆರಿಗೆ ಸಂಗ್ರಹವನ್ನು ಹೆಚ್ಚು ಮಾಡಲಿದೆ ಎಂದು ಹೇಳಿದರು. ತೆರಿಗೆ ವಂಚನೆ ಮಾಡದಂತೆ ಮತ್ತು ಅದರ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿಯನ್ನು ಹೆಚ್ಚು ಮಾಡಬೇಕೆಂಬ ಬೇಡಿಕೆಗಳು ಕೇಳಿ ಬರುತ್ತಿವೆ. ಸಕಾಲದಲ್ಲಿ ತೆರಿಗೆ ಪಾವತಿ ಮಾಡುವ ಮಹತ್ವದ ಬಗ್ಗೆ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾಗಿದೆ. ಸರಿಯಾಗಿ ಮತ್ತು ಸಕಾಲದಲ್ಲಿ ತೆರಿಗೆ ಪಾವತಿ ಮಾಡುವುದರಿಂದ ಪ್ರತಿಯೊಬ್ಬರೂ ರಾಷ್ಟ್ರದ ಅಭಿವೃದ್ಧಿಯ ಪಾಲುದಾರರಾಗುತ್ತಾರೆ.

   ಈ ದಿಸೆಯಲ್ಲಿ ಈ ವ್ಯವಸ್ಥೆ ಬಗ್ಗೆ ಹೆಚ್ಚು ಪ್ರಚಾರ ನೀಡುವಲ್ಲಿ ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಕೈಜೋಡಿಸಬೇಕು. ಈ ಹೊಸ ತೆರಿಗೆ ವ್ಯವಸ್ಥೆಯು ಇ-ಆಡಳಿತ ಮತ್ತು ಮುಖರಹಿತ ಕರನಿರ್ಧರಣೆಯ ಆಧಾರದಲ್ಲಿ ರೂಪಿತವಾಗಿದೆ. ಇದು ತೆರಿಗೆ ಅಧಿಕಾರಿಗಳಲ್ಲಿ ತಾಂಡವವಾಡುತ್ತಿರುವ ¨ಭ್ರಷ್ಟಾಚಾರವನ್ನು ತೊಡೆದುಹಾಕುವಲ್ಲಿ ನೆರವಾಗಲಿದೆ. ಇದೇ ರೀತಿಯಲಲ್ಲಿ ತೆರಿಗೆ ವಂಚಕರನ್ನು ಶಿಕ್ಷೆಗೆ ಒಳಪಡಿಸುವ ಮತ್ತಷ್ಟು ಕಠಿಣ ಕ್ರಮಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಅಹ್ಮದ್ ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link