ಕುಣಿಗಲ್ :  ಸಂಗೀತವಾಧ್ಯ ಬಾರಿಸಿ ಮಕ್ಕಳ ಬರಮಾಡಿಕೊಂಡ ಶಾಲೆ!!

ಕುಣಿಗಲ್ : 

      ಕೋರೋ ನಾ ಭೀತಿಯಿಂದ ಕಳೆದ ಹತ್ತು ತಿಂಗಳು ಕಾಲ ಮುಚ್ಚಿದ ಶಾಲಾ ಕಾಲೇಜುಗಳನ್ನು ಇಂದು ತಳಿರು ತೋರಣಗಳಿಂದ ಶೃಂಗರಿಸಿಕೊಂಡು ಆರಂಭಿಸುವ ಮೂಲಕ ಪಾಠ ಪ್ರವಚನಗಳು ಅಧಿಕೃತವಾಗಿ ಪ್ರಾರಂಭಿಸಲಾಯಿತು.

      ತಾಲೂಕಿನ ಎಲ್ಲಾ ಕಡೆ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ತರಗತಿಗಳನ್ನು ಮುನ್ನೆಚ್ಚರಿಕೆ ಕ್ರಮ ವಹಿಸಿ ಬಹುತೇಕ ಶಾಲಾ ಕಾಲೇಜುಗಳು ಪ್ರಾರಂಭವಾದವು ಇಲ್ಲಿನ ಮಹಾತ್ಮಗಾಂಧಿ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭವಾಯಿತು, ಪಡುವಗೆರೆ ಸರ್ಕಾರಿ ಶಾಲೆಯ ಶಿಕ್ಷಕ ವೃಂದ ಮಕ್ಕಳಿಗೆ ಸಿಹಿ ವಿತರಿಸಿ ಮಕ್ಕಳನ್ನು ಸಂಗೀತವಾಧ್ಯಗಳನ್ನು ಬಾರಿಸಿಕೊಂಡು ಮಕ್ಕಳನ್ನು ಬರ ಮಾಡಿಕೊಳ್ಳಲಾಯಿತು.

      ಹೊಸೂರು ಹಾಗೂ ಡಿ.ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ತಳಿರು ತೋರಣ ದಿಂದ ಶೃಂಗರಿಸಲಾಗಿತ್ತು ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗೆ ಕೊಠಡಿಗೆ ಸ್ಯಾನಿಟರಿ ಸಿಂಪಡಿಸಲಾಗಿದೆ ವಿದ್ಯಾರ್ಥಿಗಳು ಕೇವಲ ಬೆರಳೆಣಿಕೆಯಷ್ಟು ಕಲಾ ವಿಜ್ಞಾನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುವ ಕೇವಲ 30 ವಿದ್ಯಾರ್ಥಿಗಳು ಕಾಲೇಜಿಗೆ ಭಾಗವಹಿಸಿದ್ದವು ವಿದ್ಯಾರ್ಥಿಗಳು ಸಾಮಾಜಿಕ ಅಂತರ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತುಜನ ವಿದ್ಯಾರ್ಥಿಗಳಿಗೂ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟರಿ ವ್ಯವಸ್ಥೆಯನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವ ಮೂಲಕ ಶಾಲೆಯನ್ನು ಆರಂಭಿಸಲಾಯಿತು.

      ಪ್ರಿನ್ಸಿಪಾಲರಾದ ಗೋವಿಂದರಾಜು ಹಾಗೂ ಉಪನ್ಯಾಸಕರಾದ ಶ್ರೀನಿವಾಸ ಮೂರ್ತಿಯವರ ಹೆಚ್ಚಿನ ಜವಾಬ್ದಾರಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಪೋಷಕರು ವಿದ್ಯಾರ್ಥಿಗಳ ಬಗ್ಗೆ ಯಾವುದೇ ಭಯಪಡದೆ ಶಿಕ್ಷಣವನ್ನು ನೀಡಲಾಗುವುದು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link