ಚಿಕ್ಕನಾಯಕನಹಳ್ಳಿ :

ಪಟ್ಟಣದಲ್ಲಿ 9ನೇ ತರಗತಿ ಓದುತ್ತಿದ್ದ ಮಧುಬಿಂದು(15) ಎಂಬ ವಿದ್ಯಾರ್ಥಿನಿ ಆಟವಾಡುವಾಗ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾ
ತಾಲ್ಲೂಕು ಎಸ್.ಸಿ ಎಸ್.ಟಿ ನೌಕರರ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಲಯದಲ್ಲಿ ಶಿರಸ್ತೆದಾರ್ ಆಗಿರುವ ರವಿಕುಮಾರ್ ರವರ ಹಿರಿಯ ಮಗಳು ಮಧುಬಿಂದು ಮಹಡಿ ಮೇಲಿಂದ ಆಯತಪ್ಪಿ ಕೆಳಗೆ ಬಿದ್ದಿದ್ದು, ಬಿದ್ದ ರಭಸಕ್ಕೆ ಕಾಂಪೌಂಡ್ ನ ಕಬ್ಬಿಣದ ಸರಳುಗಳು ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಹೊಕ್ಕಿಕೊಂಡಿವೆ.
ತಕ್ಷಣವೇ ಆಕೆಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈಕೆ 9ನೇ ತರಗತಿಯನ್ನು ದಿವ್ಯಪ್ರಭ ಶಾಲೆಯಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಪಾರ್ಥೀವ ಶರೀರವನ್ನು ಅವರ ಸ್ವಂತ ಸ್ಥಳವಾದ ತಾಲೂಕಿನ ಹಂದನಕೆರೆ ಹೋಬಳಿಯ ರಾಮಘಟ್ಟಕ್ಕೆ ಕೊಂಡ್ಯೊಯಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








