ಸಮಸ್ಯೆಗೆ ಗ್ರಾಪಂ ಸದಸ್ಯೆ ಸ್ಪಂದನೆ, ಬೀದಿದೀಪಗಳ ಅಳವಡಿಕೆ

 ಮಧುಗಿರಿ : 

     ತಾಲೂಕಿನ ಗುರುಮ್ಮನಕಟ್ಟೆ ಗ್ರಾಮದಲ್ಲಿ ಚಿರತೆ ಮತ್ತು ಕರಡಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಬೀದಿದೀಪ ಇಲ್ಲದೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ನೂತನ ಗ್ರಾಪಂ ಸದಸ್ಯೆಗೆ ಇತ್ತೀಚೆಗೆ ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಡಿ.ವಿ.ಹಳ್ಳಿ ಗ್ರಾಪಂನಿಂದ ಹತ್ತು ಕಡೆ ಬೀದಿ ದೀಪ ಅಳವಡಿಸಲಾಗಿದೆ.

      ತಾಲ್ಲೂಕಿನ ಕಸಬಾ ವ್ಯಾಪ್ತಿಯ ಡಿ.ವಿ ಹಳ್ಳಿಯ ಗ್ರಾಪಂಗೆ ಸೇರಿದ ಗುರುಮ್ಮನಕಟ್ಟೆ ಗ್ರಾಮದಲ್ಲಿನ ಪ್ರತಿ ದಿನ ವೇಳೆಯಲ್ಲದ ವೇಳೆಯಲ್ಲಿ ಸುತ್ತ ಮುತ್ತಲಾ ಜಮೀನುಗಳಲ್ಲಿ ಕರಡಿಗಳ ಹಿಂಡು ಮತ್ತು ಆಗಾಗ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಗ್ರಾಮಸ್ಥರು ಭಯಭಿತರಾಗಿದ್ದರು. ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬನ ಮೇಲೆ ಕರಡಿಯೊಂದು ದಾಳಿ ಮಾಡಿ ಗಂಭಿರವಾಗಿ ಗಾಯಗೊಳಿಸಿತ್ತು. ಹಾಗೂ ರೈತರು ರಾತ್ರಿ ಪಾಳಿಯಲ್ಲಿ ತಮ್ಮ ಜಮೀನುಗಳಿಗೆ ನೀರು ಹರಿಸಲು ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಡೈರಿ ಹಾಲು ಹಾಕಲು ಹಾಗೂ ಕತ್ತಲಲ್ಲಿ ಈ ಮುಖ್ಯ ರಸ್ತೆಗಳಲ್ಲಿ ನಡೆದಾಡಲು ಕಷ್ಟಕರವಾಗಿದೆ. ರಸ್ತೆಯಲ್ಲಿನ ಕಂಬಗಳಿಗೆ ಬೀದಿ ದೀಪಗಳನ್ನು ಆಳವಡಿಸಬೇಕೆಂದು ಇತ್ತೀಚೆಗೆ ಆಯ್ಕೆಯಾದ ಗ್ರಾಪಂ ಸದಸ್ಯೆ ಈರಮ್ಮನವರ ಬಳಿ ತಮ್ಮ ಅಳಲು ತೋಡಿಕೊಂಡಿದ್ದರು.

      ಈ ಬಗ್ಗೆ ಕ್ರಮವಹಿಸಿದ ಸದಸ್ಯೆ ಈರಮ್ಮ ಗ್ರಾಪಂ ಪಿಡಿಓ ಶಿವಕುಮಾರ್ ರವರಲ್ಲಿ ಸಮಸ್ಯೆ ನಿವಾರಿಸುವಂತೆ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಪಿಡಿಓ ರವರ ನೇತೃತ್ವದಲ್ಲಿ ಗುರುಮ್ಮನ ಕಟ್ಟೆಯ ಕೆರೆಯ, ಮಧ್ಯೆ ಭಾಗ ಕೊನೆಯ ಭಾಗ, ಗುರಮ್ಮನಕಟ್ಟೆಯಿಂದ ಕೆ.ಸಿ.ರೊಪ್ಪಕ್ಕೆ ಹೋಗುವ ಮುಖ್ಯ ರಸ್ತೆಗೆ, ಟ್ಯಾಂಕ್ ಸಮೀಪ ಶುಕ್ರವಾರದಂದು ಸುಮಾರು ಹತ್ತು ಕಡೆ ಬೀದಿ ದೀಪದ ವ್ಯವಸ್ಥೆ ಮಾಡಲಾಗಿದೆ. ಈ ಸಂಧರ್ಭದಲ್ಲಿ ಡಿ.ವಿ.ಹಳ್ಳಿ ರಾಮು , ಪರಷು, ರಾಮು, ಗ್ರಾಪಂ ಸಿಬ್ಬಂದಿ ಶಿವಣ್ಣ, ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link