ಎಂಇಎಸ್ ನಿಷೇಧಕ್ಕೆ ಪ್ರವೀಣ್ ಶೆಟ್ಟಿ ಒತ್ತಾಯ

ತುಮಕೂರು:

ಬೆಳಗಾವಿ ನಗರದಲ್ಲಿ ಪೆÇಲೀಸ್, ಕಾನೂನು ಸುವ್ಯವಸ್ಥೆ ನಡುವೆಯೂ ಸಹ ಎಂಇಎಸ್ ಪುಂಡರು ಕರ್ನಾಟಕ ಸರ್ಕಾರದ ವಿರುದ್ಧ ಮಹಾಮೇಳ ಮಾಡಲು ಹೊರಟಿದ್ದರು. ಆಗ ಕನ್ನಡಿಗರು ಇದರ ವಿರುದ್ಧ ಹೋರಾಟ ಮಾಡಿದರು. ಆದರೆ ಕನ್ನಡಿಗರನ್ನು ಜೈಲಿಗೆ ಅಟ್ಟಿದ ಸರ್ಕಾರ, ಕನ್ನಡಪರ ಹೋರಾಟಗಾರರಿಗೆ ಶಿಕ್ಷೆ ಆಗುವಂತೆ ನಡೆದುಕೊಂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷ ಪ್ರವೀಣ್‍ಶೆಟ್ಟಿ ತಿಳಿಸಿದರು.

ಬೆಳಗಾವಿಯ ಸುವರ್ಣಸೌಧಕ್ಕೆ ಸೋಮವಾರ ಮುತ್ತಿಗೆ ಹಾಕುವ ಸಲುವಾಗಿ ತೆರಳುವ ವೇಳೆ ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಂಇಎಸ್ ಪುಂಡರು ಸರ್ಕಾರಿ ವಾಹನಗಳಿಗೆ ಬೆಂಕಿ ಇಟ್ಟು, ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಧ್ವಂಸ ಮಾಡಿ, ಕರ್ನಾಟಕದ ಭಾಗಗಳನ್ನು ತನ್ನದು ಎಂದು ಹೇಳುವ ಮೂಲಕ ನಮ್ಮ ಸರ್ಕಾರದ ಶವಯಾತ್ರೆ ಮಾಡ್ತೀವಿ ಅಂತ ಹೇಳಿಕೆ ಕೊಟ್ಟಿದ್ದಾರೆ.

ಇವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟ ನಡೆಸಲಿದೆ. ಇನ್ನೂ ಎಂಇಎಸ್ ಪುಂಡರು ಕರ್ನಾಟಕದ ನೆಲ-ಜಲ, ನಾಡು-ನುಡಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಇದ್ದುಕೊಂಡು ನಮ್ಮದೇ ಸರ್ಕಾರದ ವಿರುದ್ಧ ಹೇಳಿಕೆ ಕೊಡುವ ಮೂಲಕ ಕನ್ನಡಿಗರ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿದ್ದಾರೆ. ಹಾಗಾಗಿ ಕೂಡಲೇ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯದಲ್ಲಿ ಇರುವ ಎಲ್ಲಾ ನಾಯಕರು ಗಡಿ ಭಾಗದ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು, ಎಂಇಎಸ್ ವಿರುದ್ಧ ಧ್ವನಿ ಎತ್ತಬೇಕು. ಈ ನೆಲದ ಕನ್ನಡಿಗರ ಓಟು ಪಡೆದು ಗೆದ್ದಿರುವ ನಾಯಕರು ಸರ್ಕಾರದ ಮೇಲೆ ಒತ್ತಡ ಹಾಕಿ, ಎಂಇಎಸ್ ಸಂಘಟನೆಯನ್ನು ನಿμÉೀಧ ಮಾಡಬೇಕು. ಸೋಮವಾರ 11 ಗಂಟೆಗೆ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಕರ್ನಾಟಕ ರಕ್ಷಣಾ ವೇದಿಕೆ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.

ಪದೆ ಪದೆ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುವ ಮೂಲಕ ದೌರ್ಜನ್ಯ ಎಸಗುತ್ತಿರುವ ಇಂತಹ ಪುಂಡರನ್ನು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕು. ಕರ್ನಾಟಕ ರಾಜ್ಯದಲ್ಲಿ 25ಕ್ಕೂ ಹೆಚ್ಚು ಬಿಜೆಪಿ ಸಂಸದರು ಇದ್ದು, ಸಹ ರಾಷ್ಟ್ರಪತಿ ಮೇಲೆ ಒತ್ತಡ ಹಾಕಬಹುದಿತ್ತು. ಆದರೆ ಇಂತಹ ಕೆಲಸಕ್ಕೆ ನಮ್ಮ ರಾಜ್ಯದ ಸಂಸದರು ಮುಂದಾಗುತ್ತಿಲ್ಲ. ನಮ್ಮ ರಾಜ್ಯದ ಸಂಸದರೇನೂ ಕಡ್ಲೆಪುರಿ ತಿಂತಿದ್ದಾರೆಯೆ?

-ಪ್ರವೀಣ್‍ಶೆಟ್ಟಿ, ರಾಜ್ಯಧ್ಯಕ್ಷರು, ಕರವೇ

ಕನ್ನಡಿಗರ ಮೇಲಿನ ನಿರಂತರ ದಬ್ಬಾಳಿಕೆ ಮಾಡುತ್ತಿರುವ ಎಂಇಎಸ್ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ. ತುಮಕೂರು ಜಿಲ್ಲೆಯಿಂದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಸೋಮವಾರ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿರುದ್ದೇವೆ.

-ಡಮರುಗೇಶ್, ಜಿಲ್ಲಾಧ್ಯಕ್ಷರು, ಕರವೇ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link