ತುಮಕೂರು:

ಸರಸ್ಪತಿ ಪುರಂನಲ್ಲಿ ಕನ್ನಡರಾಜ್ಯೋತ್ಸವ, ಪುನೀತ್ ರಾಜ್ಕುಮಾರ್ ನುಡಿನಮನ
ಕನ್ನಡದ ಕಲೆ, ಸಾಹಿತ್ಯ ಸಂಸ್ಕøತಿ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತದೆ. ನಮ್ಮ ನಾಡು ನುಡಿಯನ್ನು ಉಳಿಸಿ ಬೆಳಸುವ ಕೆಲಸವನ್ನು ಪ್ರತಿಯೊಬ್ಬರು ಕನ್ನಡಿಗನೂ ಮಾಡಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಕರೆ ನಿಡಿದರು.
ನಗರದ ಸರಸ್ಪತಿ ಪುರಂಎರಡನೇ ಹಂತದ ನಾಗರೀಕ ಹಿತರಕ್ಷಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಕನ್ನಡರಾಜ್ಯೋತ್ಸವ ಮತ್ತುಕರ್ನಾಟಕರತ್ನ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ನುಡಿನಮನಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರಿಗೂ ನಮ್ಮ ನಾಡು ನಮ್ಮಊರು, ನಮ್ಮದೇಶಎನ್ನುವಅಭಿಮಾನ ಬರಬೇಕು.
ಮನಸ್ಸಿಗೆ ಮುದ ನೀಡುವಕನ್ನಡ ಭಾಷೆ ಸಾಹಿತ್ಯ ನಮ್ಮ ನೋವನ್ನುಕೂಡಾ ಮರೆಸುತ್ತದೆ ಈ ಭಾಗದಲ್ಲಿ ವಿಶೇಷ ರೀತಿಯಲ್ಲಿಕನ್ನಡ ಹಾಡುಗಳನ್ನು ಹಾಡಿಸುವ ಮೂಲಕ ಕನ್ನಡರಾಜ್ಯೋತ್ಸವ ಮಾಡುತ್ತಿರುವುದು ಸಂತಸ ವಾಗಿದೆ ಎಂದರು.
ಇಷ್ಟವಿರದಿದ್ದರೂ ವ್ಯವಸ್ಥೆಗೆ ಹೊಂದಿಕೊಳ್ಳುವ ದುಸ್ಥಿತಿ:
ಇಂದಿನ ವ್ಯವಸ್ಥೆಕೆಟ್ಟು ಹೋಗಿದೆ ನಮಗೆ ಇಷ್ಟ ಇಲ್ಲದಿದ್ದರೂ ನಾವು ಆವ್ಯವಸ್ಥೆಗೆ ಹೊಂದಿ ಕೊಳ್ಳುವ ಮನಸ್ಥಿತಿ ಇದೆ, ಇಂತಹ ಪರಿಸ್ಥಿತಿಯಲ್ಲಿ ಜನ ಅಲೋಚನೆ ಮಾಡಬೇಕು.ನಮ್ಮ ನಾಡು ನುಡಿ ಸಂಸ್ಕøತಿಜೊತೆಗೆ ನಾವೆಲ್ಲರೂಒಂದೇಎನ್ನುವ ಭಾವನೆ ಯಿಂದದೇಶಾಭಿಮಾನವನ್ನು ಹೊಂದಬೇಕು. ಸ್ಥಳೀಯರಒತ್ತಾಯಕ್ಕೆ ಮಣಿದು ಈ ಭಾಗಕ್ಕೆ ನನ್ನಅನುಧಾನದಲ್ಲಿ ಹೆಚ್ಚಿನ ಹಣವನ್ನು ಹಾಕಿದ್ದೇನೆ ಮುಂದೆಯೂಕೂಡಅಗತ್ಯತೆಆಧಾರದಲ್ಲಿಅನುಧಾನವನ್ನು ಹಾಕುವ ಭರವಸೆ ನೀಡಿದರು.
ಶ್ರೀಮಂತ ಭಾಷೆ:
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಂತ ಶಿಶುನಾಳ ಶರೀಫರ ಪ್ರಚಾರಕ ಡಾ.ಎಂ.ಸಿ.ನರಸಿಂಹಮೂರ್ತಿ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನಲೆಇರುವಕನ್ನಡಭಾಷೆ ಶ್ರೀಮಂತವಾದುದ್ದಾಗಿದೆ, ಪಂಪ, ರನ್ನ, ಕುಮಾರ ವ್ಯಾಸ, ಕುವೆಂಪು ಸೇರಿದಂತೆ ಅನೇಕ ಸಾಹಿತಿಗಳು ಕನ್ನಡ ನಾಡು ನುಡಿಯನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿಕನ್ನಡರಾಜ್ಯೋತ್ಸವ ನಿತ್ಯೋತ್ಸವ ವಾಗಬೇಕು ವರ್ಷವಿಡೀಕನ್ನಡರಾಜ್ಯೋತ್ಸವಆಚರಿಸುವ ಮೂಲಕ ಕನ್ನಡ ನಾಡು ನುಡಿ ಬಗ್ಗೆ ಜನರಲ್ಲಿಜಾಗೃತಿ ಮೂಡಿಸುವ ಕೆಲಸವನ್ನು ಸಂಘ ಸಂಸ್ಥೆಗಳು ನಾಗರೀಕ ಸಮಿತಿಗಳು ಮಾಡುತ್ತಿರುವುದುಉತ್ತಮ ಬೆಳವಣಿಗೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ನಾಗರಿಕ ಹಿತರಕ್ಷಣಾ ಸಮಿತಿಯಅಧ್ಯಕ್ಷಜಿ.ದೇವರಾಜ್ ಮಾತನಾಡಿ ನಮ್ಮ ನಾಗರೀಕ ಸಮಿತಿ ವತಿಯಿಂದ ಪ್ರತಿವರ್ಷವೂ ವಿಶೇಷ ರೀತಿಯಲ್ಲಿರಾಜ್ಯೊತ್ಸವ ಮಾಡಿಕೊಂಡು ಬಂದಿದ್ದು ಇಂದಿನ ಗಣ್ಯರ ಮಾತುಗಳನ್ನು ಕೇಳಿದರೆ ನಮ್ಮ ಸಮಿತಿಯಿಂದಇಂತಹ ವಿಚಾರ ಮಂಥನಕಾರ್ಯಕ್ರಮವನ್ನುಇನ್ನೂ ಹೆಚ್ಚು ಹೆಚ್ಚು ಮಾಡಿಸಬೇಕುಎನ್ನುವಅಭಿಪ್ರಾಯ ಮೂಡಿದೆಎಂದು ಹೇಳಿದರು.
ಜಿಲ್ಲಾ ಜೆಡಿಎಸ್ಕಾರ್ಯಾಧ್ಯಕ್ಷ ಹಾಲನೂರುಅನಂತಕುಮಾರ್ ಮಾತನಾಡಿ ಪ್ರತಿಯೊಬ್ಬರೂಕನ್ನಡಾಭಿಮಾನವನ್ನು ಬೆಳಸಿ ಕೊಳ್ಳಬೇಕು, ನಾಗರೀಕ ಸಮಿತಿ ವತಿಯಿಂದಜನರಲ್ಲಿಕನ್ನಡಜಾಗೃತಿ ಮೂಡಿಸುವ ಕೆಲಸವನ್ನು ಕಳೆದ 6 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬಂದಿದೆಎಂದು ನುಡಿದರು.
ಪಾಲಿಕೆ ಸದಸ್ಯರೂ ಹಾಗೂ ನಗರಯೋಜನಾ ಸ್ಥಾಯಿ ಸಮಿತಿಅಧ್ಯಕ್ಷರೂ ಆದ ಧsÀರಣೀಂದ್ರಕುಮಾರ್ ಅವರು ಮಾತನಾ ನಮ್ಮ ವಾರ್ಡ್ ಬಹಳ ದೊಡ್ಡ ವಾರ್ಡ್ಆದರೆಇಲ್ಲಿಯ ನಾಗರೀಕ ಸಮಿತಿ ಪ್ರಬಲವಾಗಿದೆ ಈ ಭಾಗದಲ್ಲಿಉತ್ತಮಅಭಿವೃದ್ಧಿ ಕೆಲಸಗಳು ಆಗಿವ ಮುಂದೆಯೂಇನ್ನೂಉತ್ತಮ ಕೆಲಸ ಮಾಡುವುದಾಗಿ ತಿಳಿಸಿದರು.
ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘದಜಿಲ್ಲಾಧ್ಯಕ್ಷ ಹಾಗೂ ನಾಗರಿಕ ಹಿತರಕ್ಷಣಾಸಮಿತಿಯ ಮಾಜಿಅಧ್ಯಕ್ಷ ಚಿ.ನಿ.ಪುರುಷೊತ್ತಮ್.ಮಾತನಾಡಿ ಈ ಭಾಗದಲ್ಲಿ ವಾಸ ಮಾಡುವುದೇಕಷ್ಟವಾಗಿದ್ದ ಸಂದರ್ಭದಲ್ಲಿ ನಾವೆಲ್ಲಾ ನಾಗರೀಕರು ಸೇರಿ ನಾಗರೀಕ ಸಮಿತಿ ಮಾಡಿಜನಪ್ರತಿನಿಧಿಗಳಲ್ಲಿ ಮನವಿ ಮಾಡಿದಾಗ ಮಾನ್ಯ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಮತ್ತು ಪಾಲಿಕೆ ಸದಸ್ಯರಾದಧರಣೇಂದ್ರಕುಮಾರ್ಅವರು ತಮ್ಮ ಅನುದಾನಗಳಿಂದ ಅಭಿವೃದ್ಧಿ ಪಡಿಸಿದ್ದಾರೆಂದು ಶ್ಲಾಘಿಸಿದರು. ಮಾಡಿದರು.
ಕಾರ್ಯಕ್ರಮದಲ್ಲಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರಾಹುಲ್ಕುಮಾರ್ ಶಹಪುರ್ ವಾಡ್, ಸಮಾಜ ಸೇವಕ ಕೆ.ವೇದಮೂರ್ತಿ, ನಾಗರೀಕ ಸಮಿತಿಯ ಅಧ್ಯಕ್ಷರಾದ ದೊಡ್ಮನೆ ದೇವರಾಜ್, ಉಪಾಧ್ಯಕ್ಷ ಎಸ್.ಆರ್.ಗಂಗರಾಜ್, ಕಾರ್ಯದರ್ಶಿ ಆರ್.ಶಾಂತಕುಮಾರ್, ಸಂಚಾಲಕರಾದ ಪ್ರಕಾಶ್ರಾವತ್, ಕೋಶಾಧಿಕಾರಿಎಸ್.ಆರ್.ಜಯಕುಮಾರ್, ಸಂಸ್ಕøತಿಕ ಕಾರ್ಯದರ್ಶಿ ನಾರಾಯಣ ಸ್ವಾಮಿ ಕಾನೂನು ಸಲಹೆಗಾರರಾದ ಖಲೀಂ ಉಲ್ಲಾ, ಮುಖಂಡರುಗಳಾದ ಮೋಹನ್ಕುಮಾರ್, ಜಿ.ವಿ.ಗಂಗರಾಜ್ ಮೊದಲಾದವರುಇದ್ದರು.
ಸಮಾರಂಭದಲ್ಲಿತುಮಕೂರಿನ ಹೆಸರಾಂತ ಕಲಾವಿದ ಮಲ್ಲಿಕಾರ್ಜುನ್ ತಂಡದವರಿಂದ ಕನ್ನಡಗೀತಗಾಯನ ನಡೆಯಿತು. ಇದೇ ವೇಳೆ ಕುಣಿಗಲ್ ನ ಸಂಗೀತಕಲಾವಿದ ಪತ್ರಕರ್ತ ಶಂಕರ್ ಮತ್ತು ಡಾ.ನರಸಿಂಹ ಮೂರ್ತಿಯವg À ಗೀತಗಾಯನಎಲ್ಲರನ್ನು ರಂಜಿಸಿತು.
ಡಗ್ಸ್ಕಡಿವಾಣಕ್ಕೆ ನಾಗರೀಕರ ಸಹಕಾರ ಅಗತ್ಯ:
ಮುಖ್ಯ ಅತಿಥಿಯಾಗಿದ್ದ ಎಸ್ಪಿ ರಾಹುಲ್ಕುಮಾರ್ ಶಹಾಪುರವಾಡ್ ಮಾತನಾಡಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದೆಇದಕ್ಕೆಕಡಿವಾಣ ಹಾಕಲು ನಾಗರೀಕರ ಸಹಕಾರಅತೀ ಮುಖ್ಯವಾಗಿದೆ, ಡಗ್ಸ್ಒಂದು
ಪ್ರದೇಶದಲ್ಲಿಇದ್ದರೆಅದುಇಡೀಊರನ್ನೇಆವರಿಸುತ್ತದೆ, ಅದಕ್ಕೆಕಡಿವಾಣ ಹಾಕಬೇಕು. ಮನೆಗಳಲ್ಲಿ ಪೋಷಕರುತಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕುಎಂದು ಹೇಳಿ ನಾಗರಿಕ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








