ಉತ್ತರಪ್ರದೇಶ:
ಇತ್ತೀಚೆಗಷ್ಟೆ ದೆಹಲಿಯಲ್ಲಿ ಬೆಳಕಿಗೆ ಬಂದ ಶ್ರದ್ದಾ ಪ್ರಕರಣ ಮಾಸುವ ಮೊದಲೆ ಇಲ್ಲೊಬ್ಬ ತನ್ನ ಹೆಂಡತಿ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಲ್ಲಿ ಆಕೆಯನ್ನು ಕೊಂದು ಶವವನ್ನು ಹೊಲದಲ್ಲಿ ಹೋತುಹಾಕಿ ತರಕಾರಿ ಬೆಳದಿರುವ ಘಟನೆ ಬೆಳಕಿಗೆ ಬಂದಿದೆ .ಈತ ಶವವು ಕೊಳೆತ ವಾಸನೆ ಬಾರದಂತೆ 30 ಕೆ.ಜಿ ಉಪ್ಪು ಹಾಕಿ ಶವವನ್ನು ಹೂತಿಟ್ಟಿದ್ದ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದ ಘಾಜಿಯಾಬಾದ್‌ನ ಮೋದಿನಗರದ ಫಾಜಲ್ಫಾರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತ್ನಿಯನ್ನು ಕೊಂದ ನಂತರ, ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ತರಕಾರಿ ತೋಟದಲ್ಲಿ ಗುಂಡಿಯೊಂದನ್ನು ತೋಡಿ ಹೆಣವನ್ನು ಹೂಳಿದ್ದಾನೆ. ಶವದ ಮೇಲೆ ಸುಮಾರು 30 ಕೆಜಿ ಉಪ್ಪು ಸುರಿದು, ಮಣ್ಣುಮುಚ್ಚಿದ್ದಾನೆ. ನಂತರ ಜಾಗದ ಮೇಲೆ ತರಕಾರಿ ಗಿಡಗಳನ್ನು ನೆಟ್ಟು, ಯಾರಿಗೂ ಅನುಮಾನ ಬಾರದಂತೆ ತನ್ನಷ್ಟಕ್ಕೆ ತಾನು ತರಕಾರಿ ವ್ಯಾಪಾರ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.








