ಮಾಸ್ ಮಹಾರಾಜನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ….!

ತೆಲಂಗಾಣ:

   ಟಾಲಿವುಡ್ನ ಮಾಸ ಮಹಾರಾಜ ಎಂದೇ ಜನಪ್ರಿಯತೆ ಪಡೆದಿರುವ ನಟ ರವಿತೇಜ ಅವರು ಇತ್ತೀಚೆಗಷ್ಟೇ ತಮ್ಮ ಮುಂಬರುವ ‘ಆರ್ಟಿ75’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಬಲಗೈಗೆ ಗಾಯ ಮಾಡಿಕೊಂಡಿದ್ದರು. ದುರದೃಷ್ಟವಶಾತ್ ಹೆಚ್ಚಿನ ಅಪಾಯದಿಂದ ಪಾರಾದ ನಟನನ್ನು ಯಶೋದಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.ವೈದ್ಯರ ಮೇರೆಗೆ ಶಸ್ತ್ರಚಿಕಿತ್ಸೆಗೆ ಒಳಗಾದ ನಟ ಇದೀಗ ಸಕ್ಸಸ್ಫುಲ್ ಸರ್ಜರಿ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ರವಾನಿಸಿದ್ದಾರೆ.

   ತಾತ್ಕಾಲಿಕ ಟೈಟಲ್ನಡಿ ‘RT75’ ಚಿತ್ರದ ಚಿತ್ರೀಕರಣದ ವೇಳೆ ನಟನ ಬಲಗೈಯಲ್ಲಿ ಸ್ನಾಯು ಹರಿದಿತ್ತು. ಗಾಯಗೊಂಡರು ಸಹ ಶೂಟಿಂಗ್ ಮುಂದುವರೆಸುವಂತೆ ಹೇಳಿ ಕೆಲ ಕಾಲ ನಟಿಸಿದ ರವಿತೇಜ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರು. ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಅಭಿಮಾನಿಗಳಿಗೆ ಸಂದೇಶ ಕಳಿಸಿರುವ ನಟ, ‘ನಾನು ಆರಾಮಾಗಿದ್ದೇನೆ. ಈಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುವೆ. ನಿಮ್ಮೆಲ್ಲರ ಆರ್ಶಿವಾದ, ಪ್ರೀತಿಗೆ ಧನ್ಯವಾದ, ಶೀಘ್ರವೇ ಚಿತ್ರೀಕರಣದಲ್ಲಿ ಭಾಗಿಯಾಗುವೆ’ ಎಂದು ಹೇಳಿದ್ದಾರೆ.

   ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವ ಯಶೋದಾ ಆಸ್ಪತ್ರೆಯ ವೈದ್ಯರು, ಸದ್ಯಕ್ಕೆ ನೀವು ಚಿತ್ರೀಕರಣ ಅಥವಾ ಇತರೆ ಕೆಲಸಗಳಲ್ಲಿ ಭಾಗಿಯಾಗುವಂತಿಲ್ಲ. ಮುಂದಿನ 6 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ. ಸಂಪೂರ್ಣ ಚೇತರಿಸಿಕೊಳ್ಳಲು ಆರು ವಾರಗಳ ಬೆಡ್ ರೆಸ್ಟ್ ತಗೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ

Recent Articles

spot_img

Related Stories

Share via
Copy link