ಬೆಂಗಳೂರು:
ಗೂಗಲ್ ಚೀಫ್ ಟೆಕ್ನಾಲಾಜಿಸ್ಟ್ ಮುಖ್ಯ ತಂತ್ರಜ್ಞರಾಗಿ ಪ್ರಭಾಕರ್ ರಾಘವನ್ ನೇಮಕಗೊಂಡಿದ್ದಾರೆ.ಗೂಗಲ್ ಸಿಇಒ ಸುಂದರ್ ಪಿಚೈ ಈ ಕುರಿತಂತೆ ಮಾಹಿತಿ ನೀಡಿದ್ದಾರೆ, ಎನ್ನಲಾಗಿದ್ದು ರಾಘವನ್ ಅವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಎತ್ತರಕ್ಕೆ ಸಾಗುವ ಸಮಯ ಬಂದಿದೆ. 12 ವರ್ಷಗಳ ಕಾಲ ಪ್ರಮುಖ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದ ಪ್ರಭಾಕರ್, ತಮ್ಮ ಕಂಪ್ಯೂಟರ್ ಸೈನ್ಸ್ ಮೂಲಕ್ಕೆ ಹಿಂತಿರುಗಿದ್ದಾರೆ. ರಾಘವನ್ ಗೂಗಲ್ನ ಚೀಫ್ ಟೆಕ್ನಾಲಿಜಿಸ್ಟ್ ಆಗಿ ಕೆಲಸ ಮಾಡಲಿದ್ದಾರೆ. ಈ ಮೂಲಕ ಅವರು ನನ್ನೊಂದಿಗೆ ನಿಕಟವಾಗಿ ಪಾಲುದಾರರಾಗುತ್ತಾರೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.
ಕಂಪನಿಯ ಸರ್ಚ್ ಇಂಜಿನ್ ಮತ್ತು ಜಾಹೀರಾತು ಉತ್ಪನ್ನಗಳ ಉಸ್ತುವಾರಿ ಕಾರ್ಯನಿರ್ವಾಹಕ ಪ್ರಭಾಕರ್ ರಾಘವನ್ ಅವರಿಗೆ ಗೂಗಲ್ ಹೆಚ್ಚಿನ ಜವಾಬ್ದಾರಿ ನೀಡುತ್ತಿದೆ. ಈಗ ಗೂಗಲ್ ಎಕ್ಸಿಕ್ಯೂಟಿವ್ ನಿಕ್ ಫಾಕ್ಸ್ ಅವರ ಸ್ಥಾನಕ್ಕೆ ರಾಘವನ್ ಬರಲಿದ್ದಾರೆ. ಹೌದು, ರಾಘವನ್ ಅವರು ಈಗ ಮುಖ್ಯ ತಂತ್ರಜ್ಞರ ಪಾತ್ರವನ್ನು ವಹಿಸಲಿದ್ದಾರೆ ಎಂದಿದ್ದಾರೆ.