ಶಿರಸಿ
ಸಿದ್ದಾಪುರದ ರಂಗ ಸೌಗಂಧ ಪ್ರಸ್ತುತಪಡಿಸುವ ದೀವರ ಭಾಷೆಯ ಐತಿಹಾಸಿಕ ನಾಟಕ ಕ್ರಾಂತಿಯ ಕಿಡಿ ನಗರದ ಟಿಎಂಎಸ್ ಸಭಾಂಗಣದಲ್ಲಿ ಆಗಸ್ಟ ೨೪ರ ಸಂಜೆ ೭ರಿಂದ ಪ್ರದರ್ಶನಗೊಳ್ಳಲಿದೆ.
ನಾಟಕಕ್ಕೆ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಲಿದ್ದು, ಅತಿಥಿಗಳಾಗಿ ಟಿಎಂಎಸ್ ಉಪಾಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಧಾರವಾಡ ಹಾಲು ಒಕ್ಕೂಟದ ಪ್ರಭಾರಿ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ರಾಜದೀಪ ಸಂಸ್ಥೆ ಮುಖ್ಯಸ್ಥ ದೀಪಕ ದೊಡ್ಡೂರು, ಯುವ ಮುಖಂಡ ಅಶ್ವಿನ್ ನಾಯ್ಕ ಭಾಗವಹಿಸುವರು.
ಕ್ರಾಂತಿವೀರ ಬೇಡ್ಕಣಿಯ ಚೌಡಾ ನಾಯ್ಕರ ಸ್ವಾತಂತ್ರ್ಯ ಹೋರಾಟದ ಕಥನ ಈ ನಾಟಕವಾಗಿದ್ದು ಶ್ರೀಪಾದ ಹೆಗಡೆ ಮಗೇಗಾರು ರಚಿಸಿದ್ದಾರೆ. ಹುಲಿಮನೆ ಗಣಪತಿ ಹೆಗಡೆ ನಿರ್ದೇಶಿಸಿದ ನಾಟಕದ ವಿನ್ಯಾಸವನ್ನು ಶ್ರೀಪಾದ ಹೆಗಡೆ ಕೋಡನಮನೆ ಮಾಡಿದ್ದಾರೆ. ಸಂಗೀತವನ್ನು ರಾಜೇಂದ್ರ ಕೊಳಗಿ,ಸಂಜಯ ಭಟ್ಟ ಬಿಳಗಿ,ಶಶಿಭೂಷಣ ಹೆಗಡೆ ತಂಗಾರಮನೆ,ಧ್ವನಿ ಬೆಳಕನ್ನು ಉದಯ ಪೂಜಾರ ನೀಡಿದ್ದಾರೆ.
ರಂಗದಲ್ಲಿ ಗಣಪತಿ ಹೆಗಡೆ ಗುಂಜಗೋಡ, ಪ್ರವೀಣಾ ಹೆಗಡೆ ಗುಂಜಗೋಡ,ನಾಗಪತಿ ಭಟ್ಟ ವಡ್ಡಿನಗದ್ದೆ, ಶುಭಾ ರಮೇಶ ಲಕ್ಕಿಜಡ್ಡಿ, ರಾಮ ಅಂಕೋಲೆಕರ,ರಮೇಶ ಭಟ್ಟ,ಅಜಿತ್ ಭಟ್ಟ ಹೆಗ್ಗಾರಳ್ಳಿ,ಸಂಪತ್ ಹೆಗಡೆ ವಡ್ಡಿನಗದ್ದೆ, ಶಮಂತ ಹೆಗಡೆ ಶಿರಳಗಿ,ಪಂಚಮಿ ಭಟ್ಪ ವಡ್ಡಿನಗದ್ದೆ,ಪೂರ್ಣಚಂದ್ರ ಹೆಗಡೆ ಹುಲಿಮನೆ ಕಾಣಿಸಿಕೊಳ್ಳಲಿದ್ದಾರೆ.








