ಕರ್ನಾಟಕ ರಾಜ್ಯ ಚೆಸ್ ಚಾಂಪಿಯನ್‌ಶಿಪ್ಸ್ 2026 ವೇಳಾಪಟ್ಟಿ ಪ್ರಕಟ : ರಾಜ್ಯದ ವಿವಿಧೆಡೆ ಆಯೋಜನೆ: ವಿವಿಧ ವಯೋಮಾನದವರಿಗೆ ಪ್ರತ್ಯೇಕ ಸ್ಪರ್ಧೆ

ಬೆಂಗಳೂರು: ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ ವಾರ್ಷಿಕ ಚೆಸ್ ಚಾಂಪಿಯನ್‌ಶಿಪ್ಸ್ -2026ಅನ್ನು ಅಧಿಕೃತವಾಗಿ ರಾಜ್ಯದ ವಿವಿಧೆಡೆ ಆಯೋಜಿಸಿರುವುದಾಗಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಟಿ.ಎನ್.ಮಧುಕರ್ ಹಾಗೂ ಕಾರ್ಯದರ್ಶಿ ತೇಜುಕುಮಾರ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡದಿಂದ ಚಾಲನೆ ಸಿಕ್ಕಿರುವ ರಾಜ್ಯಮಟ್ಟದ ಪಂದ್ಯಾವಳಿ 2026 ಆಗಸ್ಟ್ವರೆಗೆ ವಿವಿಧ ದಿನಾಂಕಗಳಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜರುಗಲಿದ್ದು, ಏಪ್ರಿಲ್ 24 ರಿಂದ 26 ಮೈಸೂರು ಚೆಸ್ ಸೆಂಟರ್ ವತಿಯಿಂದ 13ವರ್ಷದೊಳಗಿನವರಿಗೆ ಪಂದ್ಯಾವಳಿ ನಡೆಯಲಿದೆ. ಮೇ 1ರಿಂದ 4ರವರೆಗೆ ಬೆಂಗಳೂರಿನ ಇನ್ನೋವೇಟರ್ ಚೆಸ್ ಅಕಾಡೆಮಿಯಿಂದ ರಾಜ್ಯ ಮುಕ್ತ ಪಂದ್ಯಾವಳಿ ನಡೆದರೆ, ಮೇ 15 ರಿಂದ 17ರವರಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಅಸೋಸಿಯೇಷನ್‌ನಿಂದ ರಾಜ್ಯ ಅಮೆಚೂರು ಪಂದ್ಯಾವಳಿ, ಮೇ 22 ರಿಂದ 24ರವರೆಗೆ ಬೆಂಗಳೂರಿನ ಪಾಂಚಜನ್ಯ ಚೆಸ್ ಅಕಾಡೆಮಿಯಿಂದ 7 ವರ್ಷ ವಯೋಮಾನದೊಳಗಿನವರಿಗೆ, ಜೂನ್ 5 ರಿಂದ 7 ಹಾಸನ ಜಿಲ್ಲಾ ಚೆಸ್ ಅಸೋಸಿಯೇಷನ್‌ನಿಂದ 15 ವರ್ಷ ವಯೋಮಾನದೊಳಗಿನವರಿಗೆ, ಜೂ.12 ರಿಂದ 14ರವರೆಗೆ ಬೆಂಗಳೂರಿನ ಚೆಸ್‌ ನೈಟ್ ವತಿಯಿಂದ ಚೆಸ್ ನೈಟ್ 64 ಪಂದ್ಯಾವಳಿ, ಜೂ.19 ರಿಂದ 21ರವರೆಗೆ ಕಲ್ಬುರ್ಗಿ ಜಿಲ್ಲಾ ಚೆಸ್ ಅಸೋಸಿಯೇಷನ್‌ನಿಂದ 19 ವರ್ಷದೊಳಗಿನ ವಯೋಮಾನದವರಿಗೆ, ಜೂ.27 ರಿಂದ 28ರವರೆಗೆ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್‌ನಿಂದ ರಾಜ್ಯಮಟ್ಟದ ಸ್ಕೂಲ್ ಪಂದ್ಯಾವಳಿ, ಜುಲೈ 17 ರಿಂದ 19ರವರೆಗೆ ಶಿವಮೊಗ್ಗ ಜಿಲ್ಲಾ ಚೆಸ್ ಅಸೋಸಿಯೇಷನ್‌ನಿಂದ 17 ವರ್ಷದೊಳಗಿನ ವಯೋಮಾನದವರಿಗೆ, ಆ.1ರಿಂದ 2ರವರೆಗೆ ಮಂಡ್ಯ ಚೆಸ್ ಅಕಾಡೆಮಿಯಿಂದ ರಾಜ್ಯ ರ‍್ಯಾಪಿಡ್ ಹಾಗೂ ಬ್ಲಿಟ್ಜ್ ಪಂದ್ಯಾವಳಿ, ಆ.14 ರಿಂದ 16ರವರೆಗೆ ಹಾವೇರಿ ಜಿಲ್ಲಾ ಚೆಸ್ ಅಸೋಸಿಯೇಷನ್‌ನಿಂದ ರಾಜ್ಯಮಟ್ಟದ ಮಹಿಳಾ ಪಂದ್ಯಾವಳಿ ಜರುಗಲಿದೆ ಎಂದಿದ್ದಾರೆ.

ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಬಹುಮಾನ ಪಡೆಯುವ ಸ್ಪರ್ಧಾಳುಗಳು, ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದು, ಆಸಕ್ತ ಚೆಸ್ ಆಟಗಾರರು ರಾಜ್ಯ ಚೆಸ್ ಅಸೋಸಿಯೇಷನ್ ಕಲ್ಪಿಸಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿ ಕೋರಿದ್ದಾರೆ.

Recent Articles

spot_img

Related Stories

Share via
Copy link