ಮೈಸೂರು ಭಾರತದ ಸಾಂಸ್ಕತಿಕ ಕೇಂದ್ರ : ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ನರೇಂದ್ರಮೋದಿ ಅಭಿಮತ

ಮೈಸೂರು: ಮೈಸೂರು ಭಾರತದ ಸಾಂಸ್ಕತಿಕ ಕೇಂದ್ರವಾಗಿದೆ ಸ್ವಾಮಿ ವಿವೇಕಾನಂದರು ದೇಶದ ಯುವಕರಿಗೆ ಪ್ರೇರಣೆ. ದೇಶದ ಯುವಕರ ಸಾಮರ್ಥ್ಯದಿಂದ ಆರ್ಥಿಕವಾಗಿ ಬೆಳೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು

ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವೇಕ ಸ್ಮಾರಕವನ್ನು ಉದ್ಘಾಟಿಸಿ ವಿವೇಕ ಸ್ಮಾರಕದ ಬಳಿ ಧ್ಯಾನ ಮಾಡಿ, ಮ್ಯೂಸಿಯಂ ವೀಕ್ಷಣೆ, ವಿವೇಕಾನಂದರ ಬೋಧನೆಗಳನ್ನು ಓದಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ ಕನ್ನಡದಲ್ಲೇ ಮಾತು ಆರಂಭಿಸಿ ಚಾಮುಂಡೇಶ್ವರಿ ತಾಯಿಗೆ ನಮಸ್ಕರಿಸುತ್ತೇನೆ. ಮೈಸೂರು ಭಾರತದ ಸಾಂಸ್ಕತಿಕ ಕೇಂದ್ರವಾಗಿದೆ. ವಿವೇಕ ಸ್ಮಾರಕ ಉದ್ಘಾಟಿಸಿದ್ದು ನನ್ನ ಸೌಭಾಗ್ಯ. ಮೈಸೂರು ತನ್ನ ಪರಂಪರೆಯನ್ನ ಕಾಯ್ದುಕೊಡು ಬಂದಿದೆ. ಮೈಸೂರು ಭಾರತದ ಅತಿ ಪಾತ್ರ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡು ದಿನದ ಹಿಂದೆ ಗುರು ಪೂರ್ಣಿಮೆ ಆಚರಿಸಿದ್ದೇವೆ. ಮೈಸೂರಿನ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ . ಮೈಸೂರಿನ ರಾಮಕೃಷ್ಣ ಆಶ್ರಮದ ಸೇವೆ ಆಪಾರ. ವಿವೇಕಾನಂದರ ಜೀವನದಲ್ಲಿ ಮೈಸೂರಿನ ಪಾಲು ಇದೆ ಎಂದು ಬಣ್ಣಿಸಿದರು.

ಯಾವುದೇ ದೇಶದಲ್ಲಾದರೂ, ಯುವಜನತೆಗೆ ಸರಿಯಾದ ಅವಕಾಶಗಳು, ಸೂಕ್ತ ಮಾರ್ಗದರ್ಶನ ಹಾಗೂ ದೊಡ್ಡ ಕನಸುಗಳನ್ನು ಕಾಣುವ ಮತ್ತು ಆ ಕನಸುಗಳನ್ನು ತಮ್ಮದೇ ನೆಲದಲ್ಲಿ ನನಸಾಗಿಸಿಕೊಳ್ಳುವ ಆತ್ಮವಿಶ್ವಾಸ ಸಿಕ್ಕಾಗ ಮಾತ್ರ ಅವರ ಸಾಮರ್ಥ್ಯವು ರಾಷ್ಟಿçÃಯ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಭಾರತದಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಿರುವುದು ನನಗೆ ಸಂತಸ ತಂದಿದೆ. ಇಂದು ದೇಶದಲ್ಲಿ ಸುಮಾರು ೧,೪೦,೦೦೦ ಎಂ.ಬಿ.ಬಿ.ಎಸ್ ಸೀಟುಗಳಿವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ೮೨೩ಕ್ಕೆ ಏರಿದೆ. ರಾಷ್ಟಿçÃಯ ಶಿಕ್ಷಣ ನೀತಿಯು ೨೧ನೇ ಶತಮಾನಕ್ಕೆ ಭಾರತದ ಯುವಜನತೆಯನ್ನು ಸಜ್ಜುಗೊಳಿಸುವ ವಾಹಕವಾಗುತ್ತಿದೆ.

ಭಾರತದ ಮೊದಲ ಖಾಸಗಿ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವುದರಿಂದ ಹಿಡಿದು ಡಿಜಿಟಲ್ ಅರ್ಥವ್ಯವಸ್ಥೆ, ಸ್ಟಾರ್ಟ್ಅಪ್‌ಗಳು, ಮುದ್ರಾ-ಚಾಲಿತ ಉದ್ಯಮಶೀಲತೆ, ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾಗೆ ಬಲ ತುಂಬುವವರೆಗೆದೇಶದ ಯುವಜನತೆ ವಿವಿಧ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

ಹಿಂದೆ ಸಂಕೋಲೆಯಲ್ಲಿದ್ದ ಭಾರತದ ಯುವಜನತೆ, ಇಂದು ವಿಶ್ವದ ಅಭಿವೃದ್ಧಿಯನ್ನು ವೇಗಗೊಳಿಸುತ್ತಿದ್ದಾರೆ. ಇಂದು ಭಾರತದ ಯುವಶಕ್ತಿಯಿಂದಾಗಿಯೇ ಭಾರತದ ಅರ್ಥವ್ಯವಸ್ಥೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಭಾರತದ ಯುವಶಕ್ತಿಯಿಂದಾಗಿಯೇ ಇಂದು ಭಾರತವು ವಿಶ್ವದಲ್ಲೇ ೩ನೇ ಅತಿ ದೊಡ್ಡ ಸ್ಟಾರ್ಟ್ಅಪ್ ವ್ಯವಸ್ಥೆ ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕಾನಂದರ ಜೀವನದಲ್ಲಿ ಮೈಸೂರು ಪ್ರಮುಖ ಪಾತ್ರ ವಹಿಸಿದೆ. ಸುಮಾರು ೧೩೦ ವರ್ಷಗಳ ಹಿಂದೆ, ಸ್ವಾಮೀಜಿಯವರು ಯುವ ಸನ್ಯಾಸಿಯಾಗಿ ಪ್ರವಾಸ ಮಾಡುತ್ತಿದ್ದಾಗ ಮೈಸೂರಿಗೆ ಬಂದಿದ್ದರು. ಆಗ ಅವರನ್ನು ಗುರುತಿಸಿ, ಅವರೊಂದಿಗೆ ಒಡನಾಟ ಇಟ್ಟುಕೊಂಡವರಲ್ಲಿ ಪ್ರಮುಖ ಹೆಸರು ಮೈಸೂರಿನ ಅಂದಿನ ಮಹಾರಾಜರದ್ದು. ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿದ್ದಾಗ, ಅಲ್ಲಿಂದ ಅಂದಿನ ಮೈಸೂರು ಮಹಾರಾಜರಿಗೆ ಪತ್ರ ಬರೆದಿದ್ದರು. ಅದರಲ್ಲಿ ಅವರು ಮಹಾರಾಜರ ಬೆಂಬಲವನ್ನು ಸ್ವತಃ ಉಲ್ಲೇಖಿಸಿದ್ದಾರೆ. ಸ್ವಾಮಿ ವಿವೇಕಾನಂದರು ಭಾರತೀಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬಾಕ್ಸ್
ಸ್ವಾಮಿವಿವೇಕಾನಂದರು ದೇಶದ ಯುವಕರಿಗೆ ಪ್ರೇರಣೆ
ಸ್ವಾಮಿವಿವೇಕಾನಂದರು ದೇಶದ ಯುವಕರಿಗೆ ಪ್ರೇರಣೆ. ಭಾರತದ ಅರ್ಥವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಭಾರತದ ಯುವಕರ ಸಾಮರ್ಥ್ಯದಿಂದ ಅರ್ಥ ವ್ಯವಸ್ಥೆ ಬೆಳೆಯುತ್ತಿದೆ. ಪ್ರತಿ ಕ್ಷೇತ್ರದಲ್ಲೂ ಭಾರತೀಯ ಯುವಕರು ತಮ್ಮ ತಾಕತ್ತು ತೋರಿಸುತ್ತಿದ್ದಾರೆ. ಇದೆಲ್ಲಾ ಹೊಸ ಆರಂಭದ ಸಂಕೇತವಾಗಿದೆ, ಮೊಬೈಲ್ ಉದ್ಥಾನ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದುತ್ತಿದೆ. ನಮ್ಮ ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು ಯವಕರಿಂದ ದೇಶದ ಅಭಿವೃದ್ದಿಯಾಗುತ್ತಿದೆ. ಭಾರತದ ಯುವಕರ ಸಾಮರ್ಥ್ಯದಿಂದ ದೇಶದ ಆರ್ಥಿಕತೆ ಬೆಳೆಯುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಯುವಕರು ಇತಿಹಾಸ ಸೃಷ್ಠಿಸುತ್ತಿದ್ದಾರೆ. ೪ ಸಾವಿರಕ್ಕೂ ಹೆಚ್ಚು ಐಟಿಐಗಳನ್ನು ಸ್ಥಾಪಿಸಲಾಗಿದೆ. ಕಳೆದ ೧೨ ವರ್ಷದ ೬೫೦ ವಿವಿಗಳನ್ನು ಸ್ಥಾಪಿಸಲಾಗಿದೆ. ೯ ಐಐಎಂ, ೭ ಐಐಟಿ ಸ್ಥಾಪಿಸಲಾಗಿದೆ ಎಂದು ಪ್ರಧಾನಿ ಮೋದಿ ನುಡಿದರು.

ಬಾಕ್ಸ್

ರಾಮಕೃಷ್ಣ ಆಶ್ರಮದ ವತಿಯಿಂದ ಸುಮಾರು ೮.೫ ಕೆಜಿ ತೂಕದ ವೈಟ್ ಮಾರ್ಬಲ್‌ನಲ್ಲಿ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ಸುಮಾರು ೧.೫ ಅಡಿ ಉದ್ದದ ಏಕಶಿಲಾ ಸ್ವಾಮಿ ವಿವೇಕಾನಂದ ಮೂರ್ತಿಯನ್ನು ಪ್ರಧಾನಿಯವರಿಗೆ ವಿಶೇಷ ಉಡುಗೊರೆಯಾಗಿ ನೀಡಿದರು.

Recent Articles

spot_img

Related Stories

Share via
Copy link