ಕರ್ನಾಟಕ ಅಪಾರ್ಟ್ಮೆಂಟ್ ವಿಧೇಯಕ, ನಗರ ಪಾಲಿಕೆ, ಮುನ್ಸಿಪಾಲಿಟಿಗಳ ತಿದ್ದುಪಡಿ ವಿಧೇಯಕ ಮಂಡನೆ

ಪ್ರತಿಪಕ್ಷಗಳ ಗದ್ದಲದ ಮಧ್ಯೆ ಮಸೂದೆಗಳನ್ನು ಮಂಡನೆ

ಬೆಂಗಳೂರು: ವಿಧಾನಸಭೆಯಲ್ಲಿ ಬಹುನಿರೀಕ್ಷಿತ ಕರ್ನಾಟಕ ಅಪಾರ್ಟ್ಮೆಂಟ್ ವಿಧೇಯಕ ಸೇರಿ ಮೂರು ಮಸೂದೆಗಳನ್ನು ಮಂಡನೆ ಮಾಡಲಾಯಿತು.

ಪ್ರತಿಪಕ್ಷಗಳ ಗದ್ದಲದ ಮಧ್ಯೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮೂರು ಮಸೂದೆಗಳನ್ನು ಮಂಡನೆ ಮಾಡಿದರು. ಕರ್ನಾಟಕ ಅಪಾರ್ಟ್ಮೆಂಟ್ (ಮಾಲಿಕತ್ವ ಮತ್ತು ನಿರ್ವಹಣೆ) ವಿಧೇಯಕ 2026, ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2026 ಮತ್ತು ಕರ್ನಾಟಕ ಮುನ್ಸಿಪಾಲಿಟಿಗಳ (ತಿದ್ದುಪಡಿ)ವಿಧೇಯಕ 2026ರಲ್ಲಿ ಮಂಡನೆ ಮಾಡಿದರು.

ಕರ್ನಾಟಕ ಅಪಾರ್ಟ್ಮೆಂಟ್ ವಿಧೇಯಕ ಮಂಡನೆ: ಬಹುನಿರೀಕ್ಷಿತ ಕರ್ನಾಟಕ ಅಪಾರ್ಟ್ಮೆಂಟ್ (ಮಾಲಿಕತ್ವ ಮತ್ತು ನಿರ್ವಹಣೆ) ವಿಧೇಯಕ 2026ನ್ನು ಮಂಡನೆ ಮಾಡಲಾಯಿತು. ಈ ಮಸೂದೆ ಅಪಾರ್ಟ್ಮೆಂಟ್ ಮಾಲೀಕರು, ಅಪಾರ್ಟ್ಮೆಂಟ್ ಮನೆ ಮಾಲೀಕರ ಅಸೋಸಿಯೇಷನ್ ಗಳ ಬಹುದಿನಗಳ ಬೇಡಿಕೆ ಇದಾಗಿದೆ. ಈ ಪ್ರಸ್ತಾಪಿತ ಹೊಸ ಮಸೂದೆ ಮೂಲಕ ರಾಜ್ಯದ ಅಪಾರ್ಟ್ಮೆಂಟ್ ಮನೆ ಮಾಲೀಕರ ಹಿತರಕ್ಷಣೆ, ಹಕ್ಕು ರಕ್ಷಣೆಗೆ ಇನ್ನಷ್ಟು ಬಲ ಸಿಗಲಿದೆ.

ಹಳೆಯ ಕಾಯ್ದೆ 1972ರಲ್ಲಿ ರೂಪಿಸಲಾಗಿತ್ತು. ಆ ಸನ್ನಿವೇಶದಲ್ಲಿ ಅಪಾರ್ಟ್ಮೆಂಟ್ ಸಂಸ್ಕöÈತಿ ವಿರಳವಾಗಿತ್ತು. ಕಳೆದ 20 ವರ್ಷಗಳಿಂದೀಚೆಗೆ ಅಪಾರ್ಟ್ಮೆಂಟ್ ಸಂಸ್ಕöÈತಿ ವ್ಯಾಪಕವಾಗಿ ಬೆಳೆದು ಬಂದಿದೆ. ಆದರೆ, ಈಗಿನ ಸನ್ನಿವೇಶಕ್ಕೆ ಅನುಗುಣವಾಗಿ ಕಾನೂನುಗಳಲ್ಲಿ ತಿದ್ದುಪಡಿಯಾಗಿಲ್ಲ. ಪ್ರಸ್ತಾಪಿತ ಹೊಸ ಕಾನೂನು ಅಪಾರ್ಟ್ಮೆಂಟ್ ಮನೆ ಮಾಲೀಕರಿ ಹೆಚ್ಚಿನ ಅಧಿಕಾರ ನೀಡಲಿದೆ. ಹಳೆಯ ಕಾನೂನಿನಲ್ಲಿನ ಲೋಪದೋಷ, ನ್ಯೂನತೆಗಳನ್ನು ಬದಲಾಯಿಸಲಿದೆ.

ಹೊಸ ಅಪಾರ್ಟ್ಮೆಂಟ್ ಮಸೂದೆಯ ಪ್ರಮುಖ ಉದ್ದೇಶ: ಹೊಸ ಪ್ರಸ್ತಾಪಿತ ಮಸೂದೆಯಲ್ಲಿ ಕಟ್ಟಡದಲ್ಲಿನ ಒಂದು ಅಪಾರ್ಟ್ಮೆಂಟ್‌ನ ಮಾಲಿಕತ್ವ ಸಂಬAಧಿತ ಕಾನೂನುಗಳನ್ನು ಕ್ರೋಢೀಕರಿಸಲಾಗಿದೆ. ರಾಜ್ಯದಲ್ಲಿನ ಅಪಾರ್ಟ್?ಮೆಂಟ್?ಗಳ ನಿರ್ವಹಣೆಗಾಗಿ ಸ್ಪಷ್ಟ ರೂಪುರೇಷೆ ರೂಪಿಸಲಾಗಿದೆ. ಅಪಾರ್ಟ್ಮೆಂಟ್ ಮಾಲೀಕರ ಸಂಘಗಳ ನೋಂದಣಿ ಮತ್ತು ನಿರ್ವಹಣೆ ಗೊಂದಲ ಪರಿಹಾರ, ಅಪಾರ್ಟ್ಮೆಂಟ್‌ಗಳಲ್ಲಿನ ಗೃಹ ಖರೀದಿದಾರರ ಸಂಘಕ್ಕೆ ಕಾಮನ್ ಏರಿಯಾ ಹಸ್ತಾಂತರ, ಬಿಲ್ಡರ್‌ಗಳಿಂದ ಭೂಮಿಯ ಮೇಲಿನ ಹಕ್ಕು ಸಂಘಗಳಿಗೆ ವರ್ಗಾವಣೆ ಮಾಡುವುದು ಹೊಸ ಮಸೂದೆಯ ಉದ್ದೇಶವಾಗಿದೆ.

ಪ್ರಮುಖವಾಗಿ ಒಂದು ಕಟ್ಟಡದಲ್ಲಿ ಒಂದು ಪ್ರತ್ಯೇಕ ಅಪಾರ್ಟ್ಮೆಂಟ್‌ನ ಮಾಲೀಕತ್ವ ಮತ್ತು ಅಂತಹ ಅಪಾರ್ಟ್ಮೆಂಟ್‌ಗೆ ಸಂಬAಧಿಸಿದ ಸಾಮಾನ್ಯ ಪ್ರದೇಶಗಳಾದ ಮೆಟ್ಟಿಲು, ಬಾಲ್ಕನಿ, ಪಾಸೇಜು, ಲಿಫ್ಟ್, ಟೆರೇಸ್, ಪಾರ್ಕ್, ಪ್ಲೇ ಏರಿಯಾ, ಲಾಭೀಸ್, ವಾಟರ್ ಟ್ಯಾಂಕ್ಸ್, ಸಂಪ್ಸ್ ಇರುವ ಪ್ರದೇಶ ಮತ್ತು ಸೌಲಭ್ಯಗಳಲ್ಲಿ ಅವಿಭಜಿತ ಪಾಲನ್ನು ಹಂಚಲು ಕಾನೂನು ರೂಪಿಸಲಾಗಿದೆ. ಜೊತೆಗೆ ಅಪಾರ್ಟ್ಮೆಂಟ್‌ಗಳ ಆಡಳಿತ, ಸಾಮಾನ್ಯ ಪ್ರದೇಶಗಳು ಮತ್ತು ಅಪಾರ್ಟ್ಮೆಂಟ್ ಕಟ್ಟಡಗಳ ಸೌಲಭ್ಯಗಳ ಕಾರ್ಯಾಚರಣೆ ಮತ್ತು ಬಳಕೆಗೆ ಒಂದು ಕಾರ್ಯವಿಧಾನವನ್ನು ಒದಗಿಸುವುದು ಈ ಹೊಸ ಪ್ರಸ್ತಾಪಿತ ಮಸೂದೆಯ ಉದ್ದೇಶವಾಗಿದೆ.

ಇನ್ನು ವಿಧಾನಸಭೆಯಲ್ಲಿ ಕರ್ನಾಟಕ ಮುನ್ಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕ 2026 ಹಾಗೂ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2026ನ್ನುವಮಂಡಿಸಲಾಯಿತು. ಈ ಮಸೂದೆಗಳಲ್ಲಿ ಖಾಸಗಿ ಬೀದಿಗಳು ಮತ್ತು ಚರಂಡಿಗಳು ಕಳಪೆ ಸ್ಥಿತಿಯಲ್ಲಿದ್ದರೆ ಮತ್ತು ಸಾರ್ವಜನಿಕ ಸುರಕ್ಷತೆ ಮತ್ತು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಿದರೆ ಅವುಗಳನ್ನು ಪೂರ್ವಭಾವಿಯಾಗಿ ಮಧ್ಯಪ್ರವೇಶಿಸಲು ಮತ್ತು ಸ್ವಾಧೀನಪಡಿಸಿಕೊಳ್ಳಲು ಕಮೀಷನರ್ ಅಥವಾ ಚೀಫ್ ಆಫೀಸರ್‌ಗೆ ಅಧಿಕಾರ ನೀಡಲಾಗುವುದು. ಪ್ರಾಧಿಕಾರದ ಸ್ವಂತ ಇಚ್ಛೆಯ ಮೇರೆಗೆ ಅಥವಾ ಖಾಸಗಿ ಬೀದಿ ಅಥವಾ ಪಕ್ಕದ ಸ್ವತ್ತುಗಳ ಮಾಲೀಕರ ಕೋರಿಕೆಯ ಮೇರೆಗೆ ಘೋಷಣೆಯ ಪ್ರಕ್ರಿಯೆ ಪ್ರಾರಂಭಿಸುವುದನ್ನು ಅನುಮತಿಸಲಿದೆ. ಹಿಂದಿನ ಭೂ ಮಾಲೀಕರ ಬೀದಿ ಭೂಮಿಗೆ ಪರಿಹಾರ ಅಥವಾ ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರ ಪಡೆಯುವುದನ್ನು ತಡೆಯಲಿದೆ.

ಚರಂಡಿ ಸೇರಿದಂತೆ ಯಾವುದೇ ಖಾಸಗಿ ಬೀದಿಯು ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಅಪಾಯವಾಗುವಂಥ ಸ್ಥಿತಿಯಲ್ಲಿದ್ದರೆ ಕಮೀಷನರ್ ಅಥವಾ ಚೀಫ್ ಆಫೀಸರ್ ಆ ಖಾಸಗಿ ಬೀದಿಗೆ ಸಂಬAಧಿಸಿದAತೆ ತಾನೇ ಸ್ವತಃ ಅಥವಾ ಸದರಿ ಖಾಸಗಿ ಬೀದಿಯ ಮಾಲೀಕರ ಅಥವಾ ಅಂಥ ಬೀದಿಯ ಮುಂಭಾಗದಲ್ಲಿರುವ ಅಥವಾ ಹೊಂದಿಕೊAಡಿರುವ ಕಟ್ಟಡದ ಅಥವಾ ಭೂಮಿಗಳ ಮಾಲೀಕರ ಕೋರಿಕೆಯ ಮೇರೆಗೆ ಸಾರ್ವಜನಿಕ ನೋಟೀಸು ಮತ್ತು ಅಂಥ ಮಾಲೀಕರಿಗೆ ನೋಟಿಸ್ ನೀಡುವ ಮೂಲಕ ಸದರಿ ಖಾಸಗಿ ಬೀದಿ ಅಥವಾ ಅದರ ಭಾಗವನ್ನು ಸಾರ್ವಜನಿಕ ಬೀದಿಯನ್ನಾಗಿ ಘೋಷಿಸುವ ಅದರ ಉದ್ದೇಶವನ್ನು ತಿಳಿಸಬೇಕು. ಆನಂತರ, ಅಂಥ ಮಾಲೀಕರು ಅಥವಾ ಯಾರೇ ಹಿತಾಸಕ್ತಿಯುಳ್ಳ ವ್ಯಕ್ತಿಯು ಸದರಿ ಉದ್ದೇಶದ ವಿರುದ್ಧ ಯಾವುದೇ ಆಕ್ಷೇಪಣೆಗಳೇನಾದರು ಇದ್ದರೆ ಅಂಥ ಸಾರ್ವಜನಿಕ ನೋಟಿಸ್ ಜಾರಿ ಮಾಡಿದ ದಿನಾಂಕದಿAದ ಒಂದು ತಿಂಗಳ ಒಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

ನಿಯಮ ಉಲ್ಲಂಘಿಸಿದರೆ ದಂಡನೆ
ಈ ಮಸೂದೆಯಡಿ ಘೋಷಣಾ ಪತ್ರ ಅದಕ್ಕೆ ಮಾಡಿರುವ ಯಾವುದೇ ತಿದ್ದುಪಡಿ ಸಲ್ಲಿಸಲು ವಿಫಲರಾದರೆ, ಹಂಚಿಕೆದಾರರು ಸಂಘದ ರಚನೆಗೆ ಅನುಕೂಲ ಕಲ್ಪಿಸಲು ವಿಫಲರಾದರೆ, ಅಪಾರ್ಟೆ್ಮಂಟ್ ವರ್ಗಾವಣೆ ಪತ್ರ ಬರೆದುಕೊಡಲು ವಿಫಲವಾದರೆ, ಸಕ್ಷಮ ಪ್ರಾಧಿಕಾರದಿಂದ ಅಧಿಭೋಗ ಪ್ರಮಾಣಪತ್ರ ಪಡೆಯದೇ ಅಪಾರ್ಟೆ್ಮಂಟ್ ಸ್ವಾಧೀನವನ್ನು ಹಸ್ತಾಂತರಿಸಿದರೆ ಅಂಥವರಿಗೆ ದಂಡ ವಿಧಿಸಲಾಗುವುದು. ಸಕ್ಷಮ ಪ್ರಾಧಿಕಾರ ಪ್ರವರ್ತಕ, ಸಂಘ, ಅಪಾರ್ಟೆ್ಮಂಟ್ ಮಾಲೀಕರಿಗೆ ಗರಿಷ್ಠ 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಉಲ್ಲಂಘನೆ ಮುಂದುವರಿಸಿದರೆ ಪ್ರತಿ ದಿನ 1000 ರೂ. ರಿಂದ 20,000 ರೂ. ವರೆಗೆ ಹೆಚ್ಚುವರಿ ದಂಡ ವಿಧಿಸಬಹುದಾಗಿದೆ.

ಬಾಕ್ಸ್

ಮಹಾಲಕ್ಷಿ÷್ಮÃ ಕೋ-ಆಪರೇಟಿವ್ ಭ್ರಷ್ಟಾಚಾರ: ಎಸ್‌ಐಟಿ ತನಿಖೆಗೆ ಬಿಕೆಎಚ್ ಆಗ್ರಹ

ಉಡುಪಿಯ ಮಹಾಲಕ್ಷಿ÷್ಮÃ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಸಾಲದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆದಿದೆ. ಅಲ್ಲದೆ ಮ್ಯಾನೇಜರ್ ಆಗಿದ್ದ ಸುಬ್ಬಣ್ಣ ಎಂಬುವರ ಕೊಲೆಯಾಗಿದೆ. ಕೃತ್ಯದ ಹಿಂದೆ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕರಾಗಿರುವ ಯಶ್ ಪಾಲ್ ಸುವರ್ಣ ಅವರ ಪಾತ್ರವಿದೆ. ಹೀಗಾಗಿ ತನಿಖೆಯನ್ನು ಎಸ್‌ಐಟಿಗೆ ವಹಿಸಿ. ಫಲಾನುಭವಿಗಳಿಗೆ 20 ಸಾವಿರ ಸಾಲ ನೀಡಿ ಅವರಿಂದ ದಾಖಲಾತಿ ಪಡೆದು 2 ಲಕ್ಷ ಸಾಲ ನೀಡಿರುವ ರೀತಿ ಸಾಲದ ಪತ್ರ ಸೃಷ್ಟಿಸಿದ್ದಾರೆ. ಈ ರೀತಿ 25 ಕೋಟಿಗೂ ಅಧಿಕ ಅಕ್ರಮವಾಗಿ ಸಾಲ ಪಡೆಯಲಾಗಿದೆ. ವಂಚನೆ ಬೆಳಕಿಗೆ ಬರುತ್ತಿದ್ದಂತೆ ಮಲ್ಪೆಯ ಬ್ಯಾಂಕ್ ಶಾಖೆಯ ಮ್ಯಾನೇಜರ್ ಆಗಿದ್ದ ಸುಬ್ಬಣ್ಣ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದು ಆತ್ಮಹತ್ಯೆಯಲ್ಲ. ಇದೊಂದು ವ್ಯವಸ್ಥಿತ ಕೊಲೆ. ಇದರ ಹಿಂದೆ ಸ್ಥಳೀಯ ಶಾಸಕರ ಕೈವಾಡವಿದೆ. ಸಮಗ್ರ ತನಿಖೆಗಾಗಿ ಎಸ್‌ಐಟಿ ರಚಿಸಬೇಕು ಹಾಗೂ ಬ್ಯಾಂಕ್‌ಗೆ ಕೂಡಲೇ ಆಡಳಿತಾಧಿಕಾರಿಯನ್ನು ನೇಮಿಸಬೇಕು ವಿಧಾನಪರಿಷತ್ ಆಡಳಿತ ಪಕ್ಷದ ಸದಸ್ಯ ಬಿ. ಕೆ. ಹರಿಪ್ರಸಾದ್ ಆಗ್ರಹಿಸಿದರು.

428 ಸರ್ಕಾರಿ ಕಾಲೇಜುಗಳಲ್ಲಿ ಪ್ರಾಂಶುಪಾಲರೇ ಇಲ್ಲ- ಶೀಘ್ರದಲ್ಲಿ ನೇಮಕ

ರಾಜ್ಯದಲ್ಲಿರುವ 440 ಪ್ರಥಮ ದರ್ಜೆ ಕಾಲೇಜುಗಳಿವೆ. ಈ ಪೈಕಿ 428 ಕಾಲೇಜುಗಳಲ್ಲಿ ಪ್ರಾಂಶುಪಾಲರಿಲ್ಲ ಎಂದು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮೂಲಸೌಕರ್ಯ ಒಳಗೊಂಡ ಹೊಸದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಅನುದಾನ ನೀಡಬೇಕು. ಈ ಮೂಲಕ ಉನ್ನತ ಶಿಕ್ಷಣ ದಾಖಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಸರ್ಕಾರದ ಗಮನ ಸೆಳೆದರು.
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಮಾತನಾಡಿ, ರಾಜ್ಯದಲ್ಲಿ ಒಟ್ಟು 468 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ 420 ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿಯಿವೆ. ಹಂತ – ಹಂತವಾಗಿ ನೇಮಿಸಲಾಗುತ್ತಿದೆ ಎಂದು ತಿಳಿಸಿದರು.

 

Recent Articles

spot_img

Related Stories

Share via
Copy link