ಗುತ್ತಲ:
ವಿದ್ಯಾರ್ಥಿಗಳು ಓದಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತಿರಿ ಅದೇ ರೀತಿ ಆಟಕ್ಕೆ ಅದಕ್ಕಿಂತ ಹೆಚ್ಚಿನ ಒತ್ತು ಕೊಡಬೇಕು, ನಮ್ಮ ಆರೋಗ್ಯ ಚನ್ನಾಗಿದ್ದರೆ ಮಾತ್ರ ನಾವು ಓದಲು ಸಾಧ್ಯ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಸಿದ್ದರಾಜ ಕಲಕೋಟಿ ಹೇಳಿದರು.
ಸಮೀಪದ ಅಕ್ಕೂರ ಗ್ರಾಮದಲ್ಲಿ ನಡೆದ ಹೊಸರಿತ್ತಿಯ ವಲಯ ಮಟ್ಟದ ಫ್ರೌಢ ಶಾಲೆಗಳ ಕ್ರೀಡಾ ಕೂಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಹಳ್ಳಿಯ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಠ್ರ ಮಟ್ಟದಲ್ಲಿ ಭಾಗವಹಿಸಿ ಆಡುವಂತಾಗಬೇಕು. ಮುಕ್ತ ಮನಸ್ಸಿನಿಂದ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡೆಯಲ್ಲಿ ಜಯಗಳಿಸಿ ನಿಮ್ಮ ಶಾಲೆಗೆ ಮತ್ತು ನಿಮ್ಮ ಊರಿಗೆ ಕೀರ್ತಿ ತನ್ನಿರಿ ಎಂದು ಹೇಳಿದರು
ಎಮ್ ಎಸ್ ಮರಿಗೌಡ್ರ ಮಾತನಾಡಿ ಕಾಯ, ವಾಚ, ಮನಸ್ಸು ಕೊಟ್ಟು ಆಟವಾಡಿ ಗೆಲುವಿಗೆ ಶ್ರಮಿಸಿ, ಆಟಗಳು ಮತ್ತು ಪಾಠಗಳು ವಿದ್ಯಾರ್ಥಿಳಲ್ಲಿ ಸಮಾನವಾಗಿ ಬೆಳಿಯಬೇಕು ಆಗ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಕಡೆಮೆ ಅಂಕ ಪಡೆದಾಗ ಮುಂದೆ ಉನ್ನತ ವ್ಯಾಂಸಗಕ್ಕೆ ಶೀಟು ಸಿಗದಿದಲ್ಲಿ ಕ್ರೀಡೆಯಲ್ಲಿ ಚನ್ನಾಗಿ ಆಟವಾಡಿ ಪ್ರಶಸ್ತಿ ಪಡೆದರೆ ಅದು ವ್ಯಾಂಸಗಕ್ಕೆ ಅನಕೂಲವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ:ತಾ.ಪಂ ಅಧ್ಯಕ್ಷ ಕರಿಯಪ್ಪ ಉಂಡಿ. ತಾ.ಪಂ ಸದಸ್ಯೆ ಸುವರ್ಣ ಸುಕಳಿ, ಗ್ರಾ.ಪಂ ಅಧ್ಯಕ್ಷೆ ಕೆಂಚವ್ವ ಕಿತ್ತೂರ, ಶಂಕ್ರಣ್ಣ ಅಂಬಿಗೇರ, ಎನ್ ಕೆ ಮರೋಳ, ಹರೀಶ ಮಾಗಡಿಮಠ, ಹನಮಂತಪ್ಪ ಓಲೆಕಾರ, ನಿಂಗವ್ವ ತೋಟಗೆರ, ಮಲ್ಲವ್ವ ಹರಿಜನ, ಗ್ರಾಮ ಪಂಚಾಯತಿ ಸದಸ್ಯರು, ಎಮ್ ಆಯ್ ಇಂಚ್ಚಗಿ, ಶರಣಯ್ಯ ಹಿರೇಮಠ, ಶಂಭುಲಿಂಗಯ್ಯ ಮಠದ, ಪಿ ಬಿ ತಾರಿಕೊಪ್ಪ, ಹೊಸರಿತ್ತಿಯ ವಲಯ ಮಟ್ಟದ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಆರ್ ಎ ಸುರಹೂನ್ನಿ ಮಕ್ಕಳಿಗೆ ಪ್ರತಿಜ್ಞಾನವಿಧಿ ಭೋದಿಸಿದರು ವಾಣಿ ಬಿ ಕುಲಕರ್ಣಿ ಸ್ವಾಗತಿಸಿದರು, ಎಸ್ ಜಿ ಗಡ್ಡಿ ನಿರೂಪಿಸಿದರು








