ಒಂಬತ್ತನೆ ದಿನಕ್ಕೆ ಕಾಲಿಟ್ಟ ಹಾರ್ಧಿಕ್ ಉಪವಾಸ ಸತ್ಯಾಗ್ರಹ

ಅಹ್ಮದಾಬಾದ್ :

                ಗುಜರಾತ್ ರಾಜ್ಯದ ಫೈರ್ ಬ್ರಾಂಡ್ ಎಂದೇ ಕರೆಸಿಕೊಳ್ಳುವ  ಹಾರ್ದಿಕ್ ಪಟೇಲ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಒಂಬತ್ತನೆ ದಿನಕ್ಕೆ ಕಾಲಿಟ್ಟಿದ್ದು. ಈ ಹೋರಾಟ ಇನ್ನೂ ನಡೆಯುವಾಗಲೇ ತನ್ನ ಪ್ರಾಣ ಹೋದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಹಾರ್ದಿಕ್ ಪಟೇಲ್  ‘ವಿಲ್’ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ಹಾರ್ಧಕ್ ಪಟೇಲ್  ತಮ್ಮ ಬೆಂಬಲಿಗರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಕಾರಣಕ್ಕೆ ಪ್ರತಿಭಟನೆ ದಾಖಲಿಸುವ ಸಲುವಾಗಿ ಸರ್ಕಾರ ಕಳುಹಿಸಿದ್ದ ವೈದ್ಯರ ತಂಡವನ್ನು  ಅವರು ವಾಪಸ್ ಕಳಿಸಿದ್ದಾರೆ. ಗುಜರಾತ್ ನ ನಾನಾ ಭಾಗಗಳಿಂದ ಹತ್ತಾರು- ನೂರಾರು ಸಂಖ್ಯೆಯಲ್ಲಿ ದಿನವೂ ಅಹ್ಮದಾಬಾದ್ ಗೆ ಬರುತ್ತಿದ್ದಾರೆ.

                 ಜನ ಸ್ವಯಂ ಪ್ರೇರಿತವಾಗಿ ಬಂದು ಹಾರ್ದಿಕ್ ಪಟೇಲ್ ಗೆ ಬೆಂಬಲ ಸೂಚಿಸುತ್ತಿರುವ ಜನರನ್ನು  ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇನ್ನು ಉಪವಾಸ ಸತ್ಯಾಗ್ರಹವು ಒಂಬತ್ತನೇ ದಿನಕ್ಕೆ ಕಾಲಿರಿಸಿದ್ದು, ಹಾರ್ದಿಕ್ ಪಟೇಲ್ ರ ತೂಕ ಇಳಿಕೆಯಾಗುತ್ತಿದೆ. ಇದರ ಜತೆಗೆ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವೂ ಕುಸಿಯುತ್ತಿದೆ ಎಂದು ತಪಾಸಣೆ ಮಾಡಿದ ವೈದ್ಯರ ಸಮಿತಿ ವರದಿ ನೀಡಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link