6 ಮಂದಿ ಪೊಲೀಸ್ ಅಮಾನತ್ತು…?

ಮೀರತ್ :

       ನಮ್ಮ ದೇಶದಲ್ಲಿ ಯಾರಾದರು ಇಬ್ಬರು ಹುಡುಗ ಹುಡುಗಿ ಕುಳಿತರೆ ಅವರಿಬ್ಬರ ನಡುವೆ ಏನೋ ಇದೆ ಎಂಬ ಅನುಮಾನ ಬರುವುದು ಸಾಮಾನ್ಯ ಅದೇರೀತಿ ಮುಸ್ಲಿಮ್ ಯುವಕನ ಜೊತೆ ಕುಳಿತ ಯುವತಿಗೆ ಮೂವರು ಪೊಲೀಸರು ಮನಬಂದಂತೆ  ಥಳಿಸಿದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಥಳಿತದ ವಿಡಿಯೋ ವೈರಲ್ ಆಗಿದೆ.ಯುವತಿ ಹಾಗೂ  ಮುಸ್ಲಿಮ್ ಯುವಕ ಜೊತೆ ಮೆಡಿಕಲ್  ಕಾಲೇಜ್ ಬಳಿ ಕುಳಿತಿದ್ದ ವೇಳೆಯಲ್ಲಿ   ಪ್ರಶ್ನಿಸಿದ ವಿಶ್ವ ಹಿಂದೂ ಪರಿಷತ್ ಸದಸ್ಯರು ಹಾಗೂ ಸ್ಥಳೀಯರು ಅವರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

      ಯುವತಿಯನ್ನು ತಮ್ಮ ಜೀಪಿನಲ್ಲಿ ಕರೆದುಕೊಂಡು ಹೋದ  ನಾಲ್ವರು ಪೊಲೀಸರಲ್ಲಿ ಒಬ್ಬ ಮೊಬೈಲ್ ನಲ್ಲಿ ವಿಡಿಯೋ ಚಿತ್ರಿಕರಿಸುತ್ತಾ ಮನಬಂದಂತೆ ಅಸಹ್ಯವಾಗಿ  ಪ್ರಶ್ನಿಸಿದ್ದಾರೆ. ಇದೇ ವೇಳೆ ಮಹಿಳಾ ಪೊಲೀಸ್  ಕಾನ್ಸ್ ಟೇಬಲ್  ಯುವತಿಯ ತಲೆಗೆ ಹೊಡೆದಿದ್ದಾರೆ. ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಮುಖಕ್ಕೆ ಹಾಕಿದ ಬಟ್ಟೆಯನ್ನು ಒತ್ತಾಯದಿಂದ ತೆಗೆದಿದ್ದಾರೆ .ವಿಡಿಯೋಗಾಗಿ ಕೆಳಗಿನ ಲಿಂಕ್ ನೋಡಿ
      ನಮ್ಮ ದೇಶದ ಕಾನೂನು ಸುವ್ಯವಸ್ತೆ ಕಾಪಾಡಬೇಕಾದ ಪೊಲೀಸರ ಈ ಕೃತ್ಯದಿಂದ ಇಡೀ ಪೊಲೀಸ್ ಇಲಾಖೆ ತಲೆ ತಗ್ಗಿಸಬೇಕಾಗಿ ಬಂದಿದೆ. ಇವರ ಈ ಕೃತ್ಯದಿಂದ ಜನರಿಗೆ ಯಾರನ್ನು ನಂಬುವುದು ಎಂಬ ಗೊಂದಲ ಉಂಟಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.  
ಇದಕ್ಕೆ ಕ್ಷಮೆಯಾಚಿಸಿ ಆ ಪೊಲೀಸರನ್ನು ಕರ್ತವ್ಯದಿಂದ ಮಾನತ್ತು ಮಾಡಿ ಇಲಾಖೆ ಆದೇಶ ಜಾರಿ ಮಾಡಿದೆ. 
                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link